ಮುಳ್ಳೇರಿಯ: ತುಳುನಾಡಿನ ಪ್ರಸಿದ್ದ ಕುಂಬಳೆ ಸೀಮೆಯ ತಾಂತ್ರಿಕ ಹಿರಿತನದ ದೇಲಂಪಾಡಿ ಬಾಲಕೃಷ್ಣ ತಂತ್ರಿ(77) ಅವರು ಮಂಗಳವಾರ ರಾತ್ರಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದವರು ನಿಧನರಾದರು.
ಕುಂಬಳೆ ಸೀಮೆಯ ಪ್ರಧಾನ ತಂತ್ರಿವರ್ಯರಾದ ದೇಲಂಪಾಡಿ ಮನಡೆತನದ ದಿ.ಸುಬ್ರಾಯ ತಂತ್ರಿ- ಉತ್ತರಾಧಿಕಾರಿಯಾಗಿ ದಶಕಗಳಿಂದ ಸೀಮೆಯ ದೇವ-ದೈವಸ್ಥಾನಗಳ ತಾಂತ್ರಿಕ ವಿಧಿವಧಾನಗಳನ್ನು ನಿರ್ವಹಿಸುತ್ತಿದ್ದರು. ಕುಂಬಳೆ ಸೀಮೆಯೊಳಗೆ ಮಾತ್ರವಲ್ಲದೆ ಸುಳ್ಯದ ಚೆನ್ನಕೇಶವ ದೇವಾಲಯ ಸಹಿತ ಇತರ ಪ್ರದೇಶಗಳ ತಾಂತ್ರಿಕ ವಿಧಾನಗಳ ನೇತೃತ್ವವವನ್ನೂ ವಹಿಸಿದ್ದರು.
15ನೇ ಶತಮಾನದಲ್ಲಿ ಕುಂಬಳೆಯ ಕವಿಸಿಂಹ ರಾಜನು ಅಡೂರು ದೇಲಂಪಾಡಿ ವ್ಯಾಪ್ತಿಯಲ್ಲಿ ಉಂಬಳಿ ಬಿಟ್ಟ ಭೂಮಿಯ ಬಗ್ಗೆ ಕನ್ನಡ ಹಾಗೂ ಅದೇ ಶತಮಾನದ ಆಸುಪಾಸಲ್ಲಿ ಸಂತತಿ ದತ್ತಿಗೆ ಸಂಬಂಧಿಸಿದ ತುಳು ಶಾಸನಗಳು ದೇಲಂಪಾಡಿಯಲ್ಲಿ ಈಗಲೂ ಕಂಡುಬರುತ್ತಿದ್ದು ಇದು ದೇಲಂಪಾಡಿ ತಾಂತ್ರಿಕ ಮನೆತನದ ಮಹತ್ವವನ್ನು ಸಾರಿ ಹೇಳುತ್ತಿದೆ. ಅಲ್ಲದೆ ದೇಲಂಪಾಡಿ ತಂತ್ರಿವರ್ಯರ ಅಧಿಕಾರದ ಹಲವು ತಾಳೆಯೋಲೆ ಗ್ರಂಥಗಳೂ ಬಾಲಕೃಷ್ಣ ತಂತ್ರಿಗಳ ಸಂಗ್ರಹದಲ್ಲಿದ್ದು ಕುಂಬಳೆ ಸೀಮೆಯ ಪ್ರಾಚಿಣ ಇತಿಹಾಸ ದಾಖಲೆಗಳ ಕೊಂಡಿಯಾಗಿದೆ. ಮೃತರು ಪತ್ನಿ,ಸಂಸ್ಕøತ ವಿದ್ವಾನ್ ಸುಗುಣಾ ಬಿ.ತಂತ್ರಿ ಸಹಿತ ಅಪಾರ ಬಂಧುಗಳು, ಮಿತ್ರರನ್ನು ಅಗಲಿದ್ದಾರೆ.