ಮಂಗಳೂರು: ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡ ಕುಸಿತ ದುರಂತದಲ್ಲಿ ಓರ್ವ ಬಾಲಕ, ಬಾಲಕಿ ದುರ್ಮರಣ ಹೊಂದಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ 30 ಅಡಿ ಕೆಳಕ್ಕೆ ಗುಡ್ಡ ಕುಸಿದಿತ್ತು. ಈ ವೇಳೆಯಲ್ಲಿ ಅಲ್ಲಿಯ ನಾಲ್ಕು ಮನೆಗಳು ನೆಲಸಮಗೊಂಡವು. ಈ ವೇಳೆ ಮನೆಗಳಲ್ಲಿದ್ದ ಹಿರಿಯರು ಮನೆಯಿಂದ ಹೊರ ಓಡಿ ಬಂದಿದ್ದರು. ಆದರೆ 16 ವರ್ಷದ ಸಫ್ವಾನ್ ಹಾಗೂ 10 ವರ್ಷದ ಸಹಲಾ ಬಾಲಕರಿಬ್ಬರು ಸಿಲುಕಿದ್ದರು.
ಈ ವೇಳೆ ಪೆÇಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ನಿರಂತರವಾಗಿ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಇಬ್ಬರ ದೇಹ ಪತ್ತೆಯಾಗಿತ್ತು. ಆದರೆ ಅದಾಗಲೇ ಅವರಿಬ್ಬರೂ ಮೃತಪಟ್ಟಿದ್ದಾರೆ. ಡಿಆರ್‍ಡಿಎಫ್ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.




