ಉಪ್ಪಳ: ತುಳುನಾಡ ಸಂಸ್ಕøತಿ ಪರಂಪರೆಯೊಂದಿಗೆ ನಾಡ ಸಮೃದ್ಧಿಯ ಕೌಟುಂಬಿಕ ಕಥಾವಸ್ತುವುಳ್ಳ ಉತ್ತಮ ಕಥಾಚಿತ್ರ ಜಗತ್ (ಉಂದು ಗುತ್ತುದ ಗಮ್ಮತ್) ಇದರ ಟ್ರೇಲರ್ ಅನಾವರಣ ಇಂದು (ಭಾನುವಾರ) ನಡೆಯಲಿದೆ.
ಶ್ರೀ ಸುಬ್ರಹ್ಮಣ್ಯೇಶ್ವರ ಕಂಬೈನ್ಸ್ ನಿರ್ಮಾಣದ ಆರ್.ಎಸ್ ಮೀಡಿಯಾ ಅರ್ಪಿಸುವ ಕಿರುಚಿತ್ರದಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ತುಳು ಚಿತ್ರರಂಗದ ನಿಕಟ ಸಂಪರ್ಕ ಹೊಂದಿರುವ ಕಿರಣ್ ಭಟ್ ಚಿತ್ರ ನಿರ್ಮಾಣ ಮಾಡಿದ್ದು, ಪತ್ರಕರ್ತ ವಿವೇಕ್ ಆದಿತ್ಯ ಚಿತ್ರ ನಿರ್ದೇಶನ ಮಾಡಿದ್ದಾರೆ. ತುಳುನಾಡಿನ ಎರಡು ಗುತ್ತಿನ ಮನೆಗಳ ಕಥಾ ಹಂದರ, ಹೊಂದಿರುವ ಕಿರುಚಿತ್ರ ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದೆ. ಕಥೆ ಹಾಗೂ ಚಿತ್ರದ ನಾಯಕನಾಗಿ ಅಭಿ ಗುತ್ತು ಮಿಂಚಲಿದ್ದಾರೆ. ಸ್ಯಾಂಡ್ರಾ ಮಾರ್ಟಿಸ್ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಉಳಿದಂತೆ ಅಮೃತೇಶ್, ಉದಯ ಕನಿಯಾಲ, ಶೃತಿ ಕನಿಯಾಲ, ಅಕ್ಷತಾ ಶಶಿಕಿರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿರಣ್ ಭಟ್ ಗುತ್ತಿನ ಯಜಯಾನ ಜಗದೀಶ್ ಶೆಟ್ರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಳುನಾಡಿನ ವಿಶೇಷ ಆರಾಧನೆ, ಕಂಬಳ, ಮುಳಿ ಹುಲ್ಲಿನ ಮನೆ, ನಿಸರ್ಗ ಸೌಂದರ್ಯದೊಂದಿಗೆ, ಮಾರಿ ಕಳೆವ ಆಟಿ ಕಳಂಜ, ಬೇಟೆ ದೃಶ್ಯಗಳು ಚಿತ್ರದಲ್ಲಿವೆ. ಲೈಟ್ ಕಾಮಿಡಿ ಮೂಲಕ ಫ್ಯಾಮಿಲಿ ಎಂಟರ್ ಟ್ರೇನರ್ ಆಗಲಿರುವ ಈ ಸಿನಿಮಾದ ಕ್ಯಾಮರಾ ಹಾಗೂ ಎಡಿಟಿಂಗಿನಲ್ಲಿ ರಂಜಿತ್ ಶರ್ಮಾ ಮಾಣಿತ್ತೋಡಿ ಕೈ ಚಳಕವಿದೆ. ಎಲ್ಲರೂ ತೌಳವರ ಗತ್ತಿನ ಸಾಮ್ರಾಜ್ಯವನ್ನು, ಕೌಟುಂಬಿಕ ಸಾಮರಸ್ಯದ ಹಾದಿಯನ್ನು ಜಗತ್ ಮೂಲಕ ನೋಡಿ ಆನಂದಿಸಬಹುದು ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಕಿರುಚಿತ್ರ ನಿರ್ಮಾಣಕ್ಕೆ ರೂ. 2 ಲಕ್ಷ ತಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಮೀಡಿಯಾ ಪಾಟ್ನರ್ಸ್- ಯೂ ಟ್ಯೂಬ್, ಫೇಸ್ಬುಕ್, ಕಾಸರಗೋಡು ಚಾನಲ್, ದೈಜಿ ವಲ್ರ್ಡ್, ಬಿ.ಎಂ.ಎನ್, ಕಾಸರಗೋಡು ವಾರ್ತಾ., ಆಕರ್ಷಣೆ-ಕಂಬಳ,ಆಟಿಕಳಂಜ, ಗುತ್ತಿನ ಗತ್ತಿನ ಮನೆ, ಪೆÇಸಡಿಗುಂಪೆ, ಗದ್ದೆ ತೋಟ. ಕಿರುಚಿತ್ರಕ್ಕೆ ವಿ.ಮನೋಹರ್ ಶುಭಾಶೀರ್ವಾದವಿದ್ದು, ಸಿನಿಮಾ ಇತ್ತೀಚೆಗೆ ಕನ್ನಡ ಚಿತ್ರರಂಗವನ್ನು ಅಗಲಿದ ಚಿರು ಸರ್ಜಾರಿಗೆ ಅರ್ಪಿಸಲ್ಪಟ್ಟಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.


