ಕಾಸರಗೋಡು:
ಕೋವಿಡ್ ಬಾಧಿಸಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದ 72ರ ವೃದ್ಧೆಯೋರ್ವರು ಮೃತಪಟ್ಟಿದ್ದಾರೆ. ಉಪ್ಪಳ ಹಿದಾಯತ್ ನಗರದ ನಫಿಸ ಮೃತಪಟ್ಟವರು.
ಕಾಸರಗೋಡಿನಲ್ಲಿ ಇದು ದ್ವಿತೀಯ ಪ್ರಕರಣವಾಗಿದೆ. ಮೃತ ಮಹಿಳೆ ಸಹಿತ ಒಂದೇ ಮನೆಯ 9 ಮಂದಿ ಸಂಪರ್ಕದಿಂದ ಕೋವಿಡ್ ಬಾಧಿತರಾಗಿ ಮೊನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಮೃತದೇಹವಸ್ಸು ಕುನ್ನಿಲ್ ಜುಮಾ ಮಸೀದಿ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರಗೈಯ್ಯಲಾಗುವುದು. ಸಂಬಂಧಿಯೋರ್ವರ ಸಂಪರ್ಕದಿಂದ ಮನೆಮಂದಿಗೆ ಕೋವಿಡ್ ಬಾಧಿಸಿತ್ತು.

