ಕಾಸರಗೋಡು: ವಾರಗಳ ಬಳಿಕ ಇಂದು ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಕುಂಠಿತತೆ ಕಂಡುಬಂದಿದೆ. ರಾಜ್ಯದಲ್ಲಿ ಇಂದು 593 ಮಂದಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಕೋವಿಡ್ ಬಾಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸಾವು ಪ್ರಕರಣ ದಾಖಲಾಗಿದೆ. ಇದರೊಂದಿಗೆ ಕೇರಳ ರಾಜ್ಯದಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 39 ಕ್ಕೇರಿದೆ.
ಉಪ್ಪಳ ಹಿದಾಯತ್‍ನಗರ ಮದಕದ ದಿ.ಇಬ್ರಾಹಿಂ ಅವರ ಪತ್ನಿ ನಫೀಸ(72) ಜು.17 ರಂದು ರಾತ್ರಿ 11 ಗಂಟೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾದರು. ಹೃದಯ ಸಂಬಂಧ ಅಸೌಖ್ಯದಿಂದ ಬಳಲುತ್ತಿದ್ದ ಅವರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಂತೆ ಉಸಿರಾಟದ ತೊಂದರೆ ತೀವ್ರಗೊಂಡು ಸಾವು ಸಂಭವಿಸಿತು.
ಕೋವಿಡ್ ಬಾ„ಸಿ ಕಾಸರಗೋಡು ಜಿಲ್ಲೆಯಲ್ಲಿ ವರದಿಯಾದ ಪ್ರಥಮ ಸಾವಾಗಿದೆ. ಈ ಹಿಂದೆ ಮೊಗ್ರಾಲ್ ಪುತ್ತೂರು ನಿವಾಸಿ ಕೋವಿಡ್‍ನಿಂದಾಗಿ ಸಾವಿಗೀಡಾಗಿದ್ದರೂ ಇದನ್ನು ಜಿಲ್ಲೆಯಲ್ಲಿ ಸಂಭವಿಸಿದ ಸಾವಾಗಿ ಅ„ಕೃತವಾಗಿ ದೃಢೀಕರಿಸಿಲ್ಲ. ಕರ್ನಾಟಕದ ಹುಬ್ಬಳ್ಳಿಯಿಂದ ಕಾರಿನಲ್ಲಿ ಬರುತ್ತಿರುವಾಗಲೇ ಸಾವು ಸಂಭವಿಸಿತ್ತು. ಅನಂತರ ಗಂಟಲ ದ್ರವ ತಪಾಸಣೆಯಲ್ಲಿ ಅವರಿಗೆ ಕೋವಿಡ್ ಬಾ„ಸಿರುವುದು ದೃಢಗೊಂಡಿತ್ತು.
ಮನೆಯ ಎಲ್ಲ ಸದಸ್ಯರಿಗೆ ಕೋವಿಡ್ :
ಕೋವಿಡ್‍ನಿಂದ ಸಾವಿಗೀಡಾದ ನಫೀಸ ಅವರ ಮನೆಯ ಎಲ್ಲ ಸದಸ್ಯರಿಗೂ ಕೋವಿಡ್ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಸಂಬಂ„ಕ ಸಹಿತ 8 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಕರ್ನಾಕದಿಂದ ಬಂದ ಸಂಬಂಧಿಕರಿಂದ ಇವರಿಗೆ ಸಂಪರ್ಕ ಮೂಲಕ ರೋಗ ತಗಲಿದೆಯೆಂದು ಶಂಕಿಸಲಾಗಿದೆ.
ಕಾಸರಗೋಡು 29 ಮಂದಿಗೆ ಸೋಂಕು : ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 29 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 9 ಮಂದಿ ರೋಗಮುಕ್ತರಾಗಿದ್ದಾರೆ. 22 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ಐದು ಮಂದಿ ಇತರ ರಾಜ್ಯಗಳಿಂದ ಬಂದವರು ಮತ್ತು ಇಬ್ಬರು ವಿದೇಶದಿಂದ ಬಂದವರು.
ಬಲಿ ತರ್ಪಣ ಆಚರಣೆಗೆ ಅನುಮತಿಯಿಲ್ಲ : ಜಿಲ್ಲಾಧಿಕಾರಿ
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜು.19 ಮತ್ತು 20ರಂದು ತ್ರಿಕನ್ನಾಡಿನಲ್ಲಿ ನಡೆಯಲಿದ್ದ ಆಷಾಡ ಅಮವಾಸ್ಯೆ ಬಲಿ ತರ್ಪಣ ಆಚರಣೆಗೆ ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಾರಿಗೊಳಿಸುವ ಕಟ್ಟುನಿಟ್ಟಿಗೆ ಸಾರ್ವಜನಿಕರು ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ವಿನಂತಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಜು.24 ವರೆಗೆ ಮೀನುಗಾರಿಕೆ ನಿಷೇಧ: ಜಿಲ್ಲಾಧಿಕಾರಿ:
ಕಾಸರಗೋಡು ಜಿಲ್ಲೆಯಲ್ಲಿ ಜು.24 ವರೆಗೆ ಮೀನುಗಾರಿಕೆ ನಿಷೇ„ಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಸದ್ರಿ ಮೀನುಗಾರಿಕೆಗಾಗಿ ಹೊರಟಿರುವ ಫೈಬರ್ ಬೋಟುಗಳು ತೈಕಡಪ್ಪುರಂ, ಮಂಜೇಶ್ವರ ಪ್ರದೇಶಗಳ ಸಮುದ್ರ ದಡವನ್ನು ಸೇರಬೇಕು. ಸಣ್ಣ ದೋಣಿಗಳು ಪಳ್ಳಿಕ್ಕರೆ, ಕೀಯೂರು, ತ್ರಿಕನ್ನಾಡು, ಅಜಾನೂರು, ಕುಂಬಳೆ, ಕೊಯಿಪ್ಪಾಡಿ, ಉಪ್ಪಳ, ಆರಿಕ್ಕಾಡಿ, ಕಾಂಞಂಗಾಡ್ ಮೀನಾಪೀಸ್, ಬೇಕಲ ಪ್ರದೇಶಗಳಲ್ಲಿ ಹಿಂದಿರುಗಿ ಬರಬೇಕು. ಈ ನಿಷೇಧಾಜ್ಞೆ ಹಿಂತೆಗೆತ ಬಗ್ಗೆ ನಂತರ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ„ಕಾರಿ ತಿಳಿಸಿದರು. ಕೋವಿಡ್ 19ರ ಹಿನ್ನೆಲೆಯಲ್ಲಿ ಮೀನುಗಾರಿಕೆ ವಲಯದಲ್ಲಿ ಕಟ್ಟುನಿಟ್ಟು, ಸಂರಕ್ಷಣೆ ಏರ್ಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಮೀನುಗಾರರ ಸಂಘಟನೆಗಳ ಪ್ರತಿನಿ„ಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕೇರಳದಲ್ಲಿ 593 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶನಿವಾರ 593 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 204 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
364 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ 116 ಮಂದಿ ವಿದೇಶದಿಂದಲೂ, 90 ಮಂದಿ ಇತರ ರಾಜ್ಯಗಳಿಂದ ಬಂದವರು. 9 ಮಂದಿ ಆರೋಗ್ಯ ಕಾರ್ಯಕರ್ತರು. ಶನಿವಾರ ತಿರುವನಂತಪುರದಲ್ಲಿ ಅರುಣ್ ದಾಸ್ ಮತ್ತು ಬಾಬು ರಾಜ್ ಸಾವಿಗೀಡಾದರು.
ತಿರುವನಂತಪುರ-173, ಕೊಲ್ಲಂ-53, ಪತ್ತನಂತಿಟ್ಟ-28, ಆಲಪ್ಪುಳ-42, ಕೋಟ್ಟಯಂ-16, ಇಡುಕ್ಕಿ-28, ಎರ್ನಾಕುಳಂ-44, ತೃಶ್ಶೂರು-21, ಪಾಲ್ಘಾಟ್-49, ಮಲಪ್ಪುರಂ-19, ಕಲ್ಲಿಕೋಟೆ-26, ವಯನಾಡು-26, ಕಣ್ಣೂರು-39, ಕಾಸರಗೋಡು-29 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-7, ಪತ್ತನಂತಿಟ್ಟ-18, ಆಲಪ್ಪುಳ-36, ಕೋಟ್ಟಯಂ-6, ಇಡುಕ್ಕಿ-6, ಎರ್ನಾಕುಳಂ-9, ತೃಶ್ಶೂರು011, ಪಾಲ್ಘಾಟ್-25, ಮಲಪ್ಪುರಂ-26, ಕಲ್ಲಿಕೋಟೆ-9, ವಯನಾಡು-4, ಕಣ್ಣೂರು-38, ಕಾಸರಗೋಡು-9 ಎಂಬಂತೆ ಗುಣಮುಖರಾಗಿದ್ದಾರೆ.


