HEALTH TIPS

ICSE, ISC Results 2020: ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 99.33, ಐಎಸ್​ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 96.84 ಫಲಿತಾಂಶ

          ನವದೆಹಲಿ: ಸಿಐಎಸ್​ಸಿಇ ಮಂಡಳಿಯ ಐಸಿಎಸ್​ಇ ಮತ್ತು ಐಎಸ್​ಸಿ ಪಠ್ಯಕ್ರಮದ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಐಸಿಎಸ್​ಇಯ 10ನೇ ತರಗತಿ ಪರೀಕ್ಷೆ ಹಾಗೂ ಐಎಸ್​ಸಿಯ 12ನೇ ತರಗತಿ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. 10ನೇ ತರಗತಿ ಪರೀಕ್ಷೆ ಬರೆದವರಲ್ಲಿ ಶೇ. 99.33 ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು, 12ನೇ ತರಗತಿ ಪರೀಕ್ಷೆಯಲ್ಲಿ ಶೇ. 96.84 ಫಲಿತಾಂಶ ಬಂದಿದೆ.
       ಐಸಿಎಸ್​ಇಯ 10ನೇ ತರಗತಿಯ ಪರೀಕ್ಷೆಯನ್ನ ದೇಶಾದ್ಯಂತ 2,07,902 ಮಕ್ಕಳು ಬರೆದಿದ್ದರು. ಇವರ ಪೈಕಿ 2,06,525 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 1377 ಮಂದಿ ಫೇಲ್ ಆಗಿದ್ದಾರೆ.
   ಐಎಸ್​ಸಿಯ 12ನೇ ತರಗತಿ ಪರೀಕ್ಷೆಯನ್ನ ಬರೆದ ಒಟ್ಟು 88,409 ವಿದ್ಯಾರ್ಥಿಗಳ ಪೈಕಿ 85,611 ಮಂದಿ ಪಾಸ್ ಆಗಿದ್ದಾರೆ. ಉಳಿದ 2,798 ಮಕ್ಕಳು ಅನುತ್ತೀರ್ಣಗೊಂಡಿದ್ದಾರೆ. ಇದರೊಂದಿಗೆ 12ನೇ ತರಗತಿ ಪರೀಕ್ಷೆಯಲ್ಲಿ ಪಾಸಿಂಗ್ ಪರ್ಸೆಂಟೇಜ್ ಶೇ. 96.84 ಇದೆ.

                    ಫಲಿತಾಂಶ ವೀಕ್ಷಿಸುವ ಮಾರ್ಗಗಳು:
1) ಈ ಮಂಡಳಿಗಳ ಪರೀಕ್ಷೆ ಬರೆದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು cisce.org ಮತ್ತು results.cisce.org ವೆಬ್ ಸೈಟ್​ಗಳಿಗೆ ಭೇಟಿ ನೀಡಬಹುದಾಗಿದೆ.
2) ಎಸ್ಸೆಮ್ಮೆಸ್ ಮೂಲಕವೂ ರಿಸಲ್ಟ್ ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಟೈಪ್ ಮಾಡಿ 9248082883ಗೆ ಮೆಸೇಜ್ ಕಳುಹಿಸಿದರೆ ಫಲಿತಾಂಶದ ವಿವರ ಸಿಗುತ್ತದೆ.

         ಅತ್ಯಧಿಕ ಪ್ರಮಾಣದಲ್ಲಿ ಜನರು ಭೇಟಿ ನೀಡುವುದರಿಂದ ಈ ಎರಡು ವೆಬ್​ಸೈಟ್​ಗಳು ಕ್ರ್ಯಾಷ್ ಆಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ವೆಬ್​ಸೈಟ್ ಕ್ರ್ಯಾಷ್ ಆದಲ್ಲಿ ಆತಂಕಪಡದಿರಿ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿದೆ.
       10ನೇ ತರಗತಿ ಪರೀಕ್ಷೆಯಲ್ಲಿ ಪ್ರತಿ ಸಬ್ಜೆಕ್ಟ್​ನಲ್ಲೂ ಪಾಸ್ ಆಗಲು ವಿದ್ಯಾರ್ಥಿಗಳು ಕನಿಷ್ಠ 33 ಅಂಕ ಪಡೆಯಬೇಕು. 12ನೇ ತರಗತಿ ಪರೀಕ್ಷೆ ತೇರ್ಗಡೆಯಾಗಲು ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 40 ಅಂಕ ಪಡೆಯಬೇಕು.
        ಈ ವರ್ಷ ಅನಿರೀಕ್ಷಿತ ಬಿಕ್ಕಟ್ಟು ಎದುರಾಗಿದ್ದರಿಂದ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಮೆರಿಟ್ ಲಿಸ್ಟ್ ಪ್ರಕಟಿಸುವುದಿಲ್ಲ ಎಂದು ದಿ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ಸ್ (ಸಿಐಎಸ್​ಸಿಇ) ಮಂಡಳಿ ಸ್ಪಷ್ಟಪಡಿಸಿದೆ.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries