HEALTH TIPS

ಮಾರುಕಟ್ಟೆಗೆ ಲಗ್ಗೆ ಇಟ್ಟ ದೇಶದ ಮೊಟ್ಟಮೊದಲ ಸ್ವದೇಶೀ Social Media ಆಪ್ Elyments... ಇಲ್ಲಿವೆ ಅದರ ವೈಶಿಷ್ಟ್ಯಗಳು

           ನವದೆಹಲಿ: ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾನುವಾರ ಭಾರತದ ಮೊಟ್ಟಮೊದಲ ಸ್ವದೇಶೀ ನಿರ್ಮಿತ ಸಾಮಾಜಿಕ ಮಾಧ್ಯಮ ಆಪ್ 'ಎಲಿಮೆಂಟ್ಸ್ (Elyments) ಬಿಡುಗಡೆಗೊಳಿಸಿದ್ದಾರೆ. ಬಳಕೆದಾರರು ಇದೀಗ ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಗಲಾಗಿರುವ ವೆಂಕಯ್ಯ ನಾಯ್ಡು ಅವರು ಈ ಆಪ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಈ ಆಪ್ ಬಿಡುಗಡೆ ಸಮಾರಂಭದ ವೇಳೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಕೂಡ ಉಪಸ್ಥಿತರಿದ್ದರು.
        ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಡೌನ್ಲೋಡ್
ಈ ಆಪ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಡೌನ್ಲೋಡ್ ಗಳನ್ನು ಪಡೆಯಲು ಯಶಸಿವ್ಯಾಗಿದೆ. ಆರಂಭದಲ್ಲಿ ಈ ಆಪ್ ದೇಶದ ಒಟ್ಟು 8 ಭಾಷೆಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ಆಡಿಯೋ-ವಿಡಿಯೋ ಕಾಲಿಂಗ್ ಸೌಲಭ್ಯ ಕೂಡ ಒದಗಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ವೈಶಿಷ್ಟ್ಯಗಳನ್ನು ಒಂದುಗೂಡಿಸಿ ಒಂದೇ ಆಪ್ ನ ಅಡಿ ಬಳಕೆದಾರರಿಗೆ ನೀಡುವುದು ಈ ಆಪ್ ನ ಪ್ರಮುಖ ಉದ್ದೇಶವಾಗಿದೆ.
       ಪ್ರೈವೆಸಿಯ ವಿಶೇಷ ಕಾಳಜಿ ವಹಿಸಲಾಗಿದೆ.
     ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳ ಮೇಲೆ ಬಳಕೆದಾರರ ಖಾಸಗಿತನದ ಕುರಿತು ಹಲವಾರು ಪ್ರಶ್ನೆಗಳು ಕೇಳಿಬಂದಿವೆ. ಹೀಗಾಗಿ ಈ ಆಪ್ ನಲ್ಲಿ ವಿಶೇಷವಾಗಿ ಡೇಟಾ ಪ್ರೈವೆಸಿಯನ್ನು ಮುಂಚೂಣಿಯಲ್ಲಿರಿಸಲಾಗಿದೆ.
           ಸಿಗಲಿವೆ ಹಲವು ವೈಶಿಷ್ಟ್ಯಗಳು
       ಉತ್ತಮ ಫೋಟೋಗ್ರಾಫಿ ಅನುಭವ ನೀಡಲು ಬಳಕೆದಾರರಿಗೆ ಇದರಲ್ಲಿ ಏರ್ ಕನೆಕ್ಟರ್ ಸೇರಿದಂತೆ ಇನ್ ಬಿಲ್ಟ್ ಫಿಲ್ಟರ್ಸ್ ಗಳ ಸಪೋರ್ಟ್ ಸಿಗಲಿದೆ. ಇದಲ್ಲದೆ ಈ ಆಪ್ ನಲ್ಲಿ ಬಳಕೆದಾರರ ಡೇಟಾ ಸುರಕ್ಷತೆಗಾಗಿ ಎಂಡ್ ಯುಸರ್ ಎನ್ಕ್ರಿಪ್ಶನ್ ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಆಪ್ ನ ವಿಶೇಷತೆ ಎಂದರೆ, ಬಳಕೆದಾರರ ಅನುಮತಿ ಇಲ್ಲದೆ ಬಳಕೆದಾರರ ಯಾವುದೇ ಮಾಹಿತಿಯನ್ನು ಇದ್ರಲ್ಲಿ ಥರ್ಡ್ ಪಾರ್ಟಿಗೆ ನೀಡಲಾಗುವುದಿಲ್ಲ. 
          ಬಿಡುಗಡೆಯಾಗಿದೆ ಭಾರತೀಯ ಆಪ್
           ಭಾರತದಲ್ಲಿ ಇಂದು ಅತಿ ದೊಡ್ಡ ಸಂಖ್ಯೆಯಲ್ಲಿ ಜನರು ಸಾಮಾಜಿಕ ಮಾಧ್ಯಮ ಆಪ್ ಗಳನ್ನು ಬಳಸುತ್ತಾರೆ. ಆದರೆ ಇನ್ನೊಂದೆಡೆ ಸಾಮಾಜಿಕ ಮಾಧ್ಯಮ ಆಪ್ ಕ್ಷೇತ್ರದಲ್ಲಿ ಬಹುತೇಕ ಮುಂಚೂಣಿಯಲ್ಲಿರುವ ಕಂಪನಿಗಳು ವಿದೇಶಿ ಕಂಪನಿಗಳಾಗಿವೆ. ಈ ಹಿನ್ನೆಲೆಯಲ್ಲಿ ಜುಲೈ 5 ರಂದು ದೇಶದಲ್ಲಿದೇಶದ ಮೊದಲ 'ಸುಪರ್ ಸೋಶಿಯಲ್ ಮೀಡಿಯಾ ಆಪ್' Elyments ಬಿಡುಗಡೆಗೊಳಿಸಲಾಗಿದೆ.
On the occasion of Guru Purnima, the Vice President, Shri M Venkaiah Naidu virtually launched an indigenously developed social media super app- Elyments.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries