ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 101 ಮಂದಿಗೆ ಬುಧವಾರ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 90 ಮಂದಿಗೆ ಸಂಪರ್ಕದ ಮೂಲಕ ರೋಗ ರೋಗ ಬಾಧಿಸಿದೆ. . ಇಬ್ಬರು ಇತರ ರಾಜ್ಯಗಳಿಂದ ಹಾಗು 9 ಮಂದಿ ವಿದೇಶದಿಂದ ಬಂದವರು. ಇದೇ ವೇಳೆ 40 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ಅಜಾನೂರು-12, ಬೇಡಡ್ಕ-4, ಮಧೂರು-3, ಚೆಮ್ನಾಡ್-5, ಕಾಸರಗೋಡು-15, ಕುತ್ತಿಕ್ಕೋಲ್-1, ವರ್ಕಾಡಿ-1, ಕುಂಬಳೆ-8, ಮಂಗಲ್ಪಾಡಿ-3, ಎಣ್ಮಕಜೆ-1, ಮುಳಿಯಾರು-1, ಪಳ್ಳಿಕೆರೆ-4, ಪುಲ್ಲೂರು ಪೆರಿಯ-1, ಚೆಂಗಳ-6, ಪಿಲಿಕೋಡು-1, ಪಡನ್ನ-3, ಕಳ್ಳಾರ್-2, ಉದುಮ-15, ಕಾರಡ್ಕ-2, ತೃಕ್ಕರಿಪುರ-3, ಕಾಂಞಂಗಾಡ್-7, ವಲಿಯಪರಂಬ-1, ಪಯ್ಯನ್ನೂರು ನಗರಸಭೆ-1, ಕಾಂಕೋಲ್-1 ಎಂಬಂತೆ ರೋಗ ಬಾಧಿಸಿದೆ.
ಮೂವರ ಸಾವು : ಕೋವಿಡ್ ಬಾಧಿತ 37 ವರ್ಷದ ಪನಯಾಲ್ ನೆಲ್ಲಿಯಡ್ಕ ನಿವಾಸಿ ಸಾವಿಗೀಡಾದರು. ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಉದುಮ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆಸಿದ ತಪಾಸಣೆಯಲ್ಲಿ ಕೋವಿಡ್ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಕಾಂಞಂಗಾಡ್ ಅಜಾನೂರು ಮಾಟ್ಟುಮ್ಮಲ್‍ನ 55 ವರ್ಷದ ನಿವಾಸಿ ಕೋವಿಡ್‍ನಿಂದ ಸಾವಿಗೀಡಾದರು. ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ವೈರಸ್‍ನಿಂದ 95 ವರ್ಷದ ಕುಂಬಳೆ ಪೆÇಸಡ್ಕದ ವೃದ್ಧೆ ಸಾವಿಗೀಡಾದರು.
ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಸತ್ತವರ ಸಂಖ್ಯೆ 34 ಕ್ಕೇರಿತು. 1351 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 22344 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 41694 ಮಂದಿ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 432 ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 432 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 25062 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ : 72 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 63 ಕೇಸು ದಾಖಲಿಸಲಾಗಿದೆ. 82 ಮಂದಿಯನ್ನು ಬಂ„ಸಲಾಗಿದ್ದು, 2 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಣೆಯಲ್ಲಿ 4 ಕೇಸುಗಳು, ಕುಂಬಳೆ 5, ಕಾಸರಗೋಡು 7, ವಿದ್ಯಾನಗರ 5, ಬದಿಯಡ್ಕ 3, ಬೇಡಗಂ 3, ಆದೂರು 2, ಮೇಲ್ಪರಂಬ 3, ಬೇಕಲ 3, ಅಂಬಲತ್ತರ 3, ಹೊಸದುರ್ಗ 7, ನೀಲೇಶ್ವರ 4, ಚಂದೇರ 3, ಚೀಮೇನಿ 3, ಚಿತ್ತಾರಿಕಲ್ಲ್ 4, ವೆಳ್ಳರಿಕುಂಡ್ 2, ರಾಜಪುರಂ 2 ಕೇಸುಗಳು ದಾಖಲಾಗಿವೆ.
ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3998 ಆಗಿದೆ. 5486 ಮಂದಿಯನ್ನು ಬಂಧಿಸಲಾಗಿದೆ. 1333 ವಾಹನಗಳನ್ನು ವಶಪಡಿಸಲಾಗಿದೆ.
ಕ್ವಾರೆಂಟೈನ್ ಉಲ್ಲಂಘನೆ : 877 ಕೇಸು : ಕ್ವಾರೆಂಟೈನ್ ಆದೇಶ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 877 ಮಂದಿ ವಿರುದ್ಧ ಕೇಸು ದಾಖಲಾಗಿದೆ.


