HEALTH TIPS

ಜಿಲ್ಲೆಯಲ್ಲಿ ಮತ್ತೆ ನೂರರ ಮೇಲೆ ನೆಗೆದ ಕೋವಿಡ್ ಬಾಧಿತರು ಇಂದು--ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 119 ಮಂದಿಗೆ ಕೋವಿಡ್ ಪಾಸಿಟಿವ್

   

      ಕಾಸರಗೋಡು:  ದಿನದಿಂದ ದಿನಕ್ಕೆ ಏರುಗತಿಯಲ್ಲಿರುವ ಜಿಲ್ಲೆಯ ಕೋವಿಡ್ ಬಾಧಿತರ ಸಂಖ್ಯೆ ಇಂದೀಗ ನೂರಕ್ಕೂ ಮೇಲೆ ಮತ್ತೆ ನೆಗೆದಿದ್ದು ವ್ಯಾಪಕ ಕಳವಳಕ್ಕೆ ಕಾರಣವಾಗುತ್ತಿದೆ.  ಜಿಲ್ಲೆಯಲ್ಲಿ ಶನಿವಾರ 119 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು. ಸಂಪರ್ಕದಿಂದ 116 ಮಂದಿಗೆ ಸೋಂಕು ತಗುಲಿದೆ. ಇಬ್ಬರು ವಿದೇಶದಿಂದ, ಒಬ್ಬರು ಇತರ ರಾಜ್ಯದಿಂದ ಆಗಮಿಸಿದವರು ಎಂದವರು ಮಾಹಿತಿ ನೀಡಿರುವರು. 

          ಸೋಂಕು ಖಚಿತಗೊಂಡವರ ಪಂಚಾಯತಿವಾರು ವಿವರ:  

        ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಸೋಂಕು ವರದಿಯಾಗಿದೆ.   

   ಕಾಸರಗೋಡು ನಗರಸಭೆ 32, ಮಧೂರು ಪಂಚಾಯತ್ 6, ಚೆಂಗಳ ಪಂಚಾಯತ್ 6, ಮೊಗ್ರಾಲ್ ಪುತ್ತೂರು ಪಂಚಾಯತ್ 4, ಬೇಡಡ್ಕ ಪಂಚಾಯತ್ 3, ಕುಂಬಳೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 7, ದೇಲಂಪಾಡಿ ಪಂಚಾಯತ್ 1, ಬದಿಯಡ್ಕ ಪಂಚಾಯತ್ 3, ಪೈವಳಿಕೆ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 1, ಕಾಞಂಗಾಡ್ ನಗರಸಭೆ 5, ಪಳಿಕ್ಕರೆ ಪಂಚಾಯತ್ 2, ಅಜಾನೂರು ಪಂಚಾಯತ್ 14, ತ್ರಿಕರಿಪುರ ಪಂಚಾಯತ್ 10, ಪುಲ್ಲೂರು-ಪೆರಿಯ ಪಂಚಾಯತ್ 3, ಕೋಡೋಂ-ಬೇಳೂರು ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 5, ಪಿಲಿಕೋಡ್ ಪಂಚಾಯತ್ 4, ಪನತ್ತಡಿ ಪಂಚಾಯತ್ 2 ಮಂದಿಗೆ ಸೋಂಕು ಖಚಿತವಾಗಿದೆ.

                     ವಿದೇಶ 

    ದುಬಾಯಿಯಿಂದ ಬಂದಿದ್ದ ಕಾಞಂಗಾಡ್ ನಗರಸಭೆಯ 37 ವರ್ಷದ ಪುರುಷ, ಷಾರ್ಜಾ ದಿಂದ ಆಗಮಿಸಿದ್ದ 25 ವರ್ಷದ ಪುರುಷರಿಗೆ ಕೋವಿಡ್ ಪಾಸಿಟಿವ್ ಆಗಿದೆ. 

           ಇತರ ರಾಜ್ಯ: 

     ಉತ್ತರಾಖಂಡ್ ನಿಂದ ಬಂದಿದ್ದ ತ್ರಿಕರಿಪುರ ಪಂಚಾಯತ್ ನ 25 ವರ್ಷದ ಪುರುಷನಿಗೆ ಸೋಂಕು ಬಾಧೆಯಾಗಿದೆ.   

        47 ಮಂದಿಗೆ ಕೋವಿಡ್ ನೆಗೆಟಿವ್:  

    ಕಾಸರಗೋಡು ಜಿಲ್ಲೆಯಲ್ಲಿ 47 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

            ನೆಗೆಟಿವ್ ಆದವರ ಪಂಚಾಯತಿ ಮಟ್ಟದ ಮಾಹಿತಿ:  

   ಇಂದು ಕೋವಿಡ್ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ನೆಗೆಟಿವ್ ಆದವರಲ್ಲಿ ಕಾಸರಗೋಡು ನಗರಸಭೆ 10, ಮಂಜೇಶ್ವರ ಪಂಚಾಯತ್ 6, ವರ್ಕಾಡಿ ಪಂಚಾಯತ್ 3, ಮಧೂರು ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 4, ಕಾರಡ್ಕ ಪಂಚಾಯತ್ 1, ಕಾಞಂಗಾಡ್ ನಗರಸಭೆ 1, ಪಳ್ಳಿಕ್ಕರೆ ಪಂಚಾಯತ್ 5, ಉದುಮಾ ಪಂಚಾಯತ್ 3, ಅಜಾನೂರು ಪಂಚಾಯತ್ 7, ನೀಲೇಶ್ವರ ನಗರಸಭೆ 2, ಕಯ್ಯೂರು-ಚೀಮೇನಿ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 2, ಪಯ್ಯನ್ನೂರು ಪಂಚಾಯತ್ 1 ಮಂದಿ ಗುಣಮುಖರಾದವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries