HEALTH TIPS

ಸಿಪಿಐ(ಎಂ)-ಮುಸ್ಲಿಂ ಲೀಗ್ ನಡುವೆ ಮಾರಾಮಾರಿ: 15 ಜನರಿಗೆ ಗಾಯ, ಮಾರುಕಟ್ಟೆ ಧ್ವಂಸ,

           ಕೋಳಿಕೋಡ್: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಡುವೆ ನಡೆದ ಮಾರಾಮಾರಿಯಲ್ಲಿ 15 ಜನರು ಗಾಯಗೊಂಡಿದ್ದಾರೆ. 

      ಕೇರಳದ ಕೋಳಿಕೋಡ್ ನ ಪೇರಂಬ್ರ ಮೀನು ಮಾರುಕಟ್ಟೆ ಬಳಿ ಸಿಪಿಐ(ಎಂ) ಮತ್ತು ಮುಸ್ಲಿಂ ಲೀಗ್ ನ ಸುಮಾರು 600ರಿಂದ 700ಕ್ಕೂ ಹೆಚ್ಚು ಕಾರ್ಯಕರ್ತರು ಮುಖಾಮುಖಿಯಾಗಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ 15 ಜನರಿಗೆ ಗಾಯಗಳಾಗಿದೆ. ಅಲ್ಲದೆ ಮಾರುಕಟ್ಟೆಯನ್ನು ಧ್ವಂಸಗೊಳಿಸಿದ್ದಾರೆ. 

      ಮಾರಾಮಾರಿಗೆ ಕಾರಣವಾಗಿದ್ದು ಕೆಲ ಮುಸ್ಲಿಂ ಲೀಗ್ ನ ಕೆಲವರು ಪಕ್ಷಕ್ಕೆ ರಾಜಿನಾಮೆ ನೀಡಿ ಸಿಪಿಐ(ಎಂ) ಪಕ್ಷಕ್ಕೆ ಸೇರಿಕೊಳ್ಳುವವರಿದ್ದು ಇಂದು ಮುಂಜಾನೆ ವಾಹನದಲ್ಲಿ ಅವರು ತೆರಳುತ್ತಿರುವ ಮಾಹಿತಿ ಪಡೆದ ಮುಸ್ಲಿಂ ಲೀಗ್ ನ ಕಾರ್ಯಕರ್ತರು ವಾಹನವನ್ನು ತಡೆದಿದ್ದರು. 

     ಈ ವೇಳೆ ಎರಡು ಪಕ್ಷದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದು ಘರ್ಷಣೆಗೆ ಕಾರಣವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries