HEALTH TIPS

ಎರಡು ಸಾವಿರದ ಅಂಚಿಗೆ ಇಂದು ಕೋವಿಡ್-ಕೇರಳದಲ್ಲಿ 1725 ಸೋಂಕಿತರು- 1131 ಗುಣಮುಖ-ಕಾಸರಗೋಡಲ್ಲಿ 97 ಸೋಂಕಿತರು

 

        ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ತೀವ್ರ ಗತಿಯಲ್ಲಿ ಕಳವಳಕಾರಿಯಾಗಿ ಏರುಗತಿಯಲ್ಲಿದ್ದು ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಾಗಿ 1725 ಜನರಿಗೆ ಕೋವಿಡ್ ಖಚಿತವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಇಂದಿನ ಕೋವಿಡ್ ಅಂಕಿಅಂಶಗಳು ಹೊರಬಿದ್ದಿದೆ. 

              ಜಿಲ್ಲಾವಾರು ವಿವರ: 

      ರಾಜ್ಯದ ವಿವಿಧ ಜಿಲ್ಲೆಗಳ ಇಂದಿನ ಕೋವಿಡ್ ಧನಾತ್ಮಕ ವಿವರಗಳು: ತಿರುವನಂತಪುರ 461, ಮಲಪ್ಪುರಂ 306, ತ್ರಿಶೂರ್  156 , ಆಲಪ್ಪುಳ 139, ಪಾಲಕ್ಕಾಡ್  137 , ಎರ್ನಾಕುಳಂ 129, ಕಾಸರಗೋಡು 97, ಕೊಟ್ಟಾಯಂ 89,  ಕಣ್ಣೂರು 77, ಕೊಲ್ಲಂ 48, ಕೊಝಿಕ್ಕೋಡ್ 46, ಇಡುಕ್ಕಿ 23, ವಯನಾಡ್ 15 ಮತ್ತು ಪತ್ತನಂತಿಟ್ಟು 2 ಜನರಿಗೆ ಇಂದು ಸೋಂಕು ಪತ್ತೆಯಾಗಿದೆ.

              ಸೋಂಕು ನೆಗೆಟಿವ್ ಆದವರ ವಿವರ: 

     ಇಂದು ರಾಜ್ಯದಲ್ಲಿ 1131 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 270, ಕಾಸರಗೋಡು 170, ಮಲಪ್ಪುರಂ 130 , ಆಲಪ್ಪುಳ 110 , ಕೊಲ್ಲಂ 89, ಕೋಝಿಕ್ಕೋಡ್ 76, ಎರ್ನಾಕುಳಂ 63, ಪಾಲಕ್ಕಾಡ್ 53, ಕೊಟ್ಟಾಯಂ 46, ಪತ್ತನಂತಿಟ್ಟು 32, ಕಣ್ಣೂರು 22, ಇಡುಕ್ಕಿ 15 ಮತ್ತು ವಯನಾಡ್ ಜಿಲ್ಲೆಯಲ್ಲಿ 13 ನೆಗೆಟಿವ್ ಆಗಿದೆ. 15,890 ಜನರು ಪ್ರಸ್ತುತ ಸೋಂಕಿನ ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ 30,029 ಮಂದಿ ಕೋವಿಡ್ ನಿಂದ ಮುಕ್ತರಾಗಿದ್ದಾರೆ. 

            ಇಂದಿ 13 ಕೋವಿಡ್ ಮೃತ್ಯುಗಳು!: 

      ರಾಜ್ಯದಲ್ಲಿ 13 ಕೋವಿಡ್ ಸಾವುಗಳನ್ನು ಸರ್ಕಾರ ಇಂದು ದೃಢಪಡಿಸಿದೆ. ಕಣ್ಣೂರು ಪೈಸ್ಕರಿ ಮೂಲದ ವರ್ಗೀಸ್ (90) ಮತ್ತು ಆಲಪ್ಪುಳ ಮೂಲದ ಕೆ.ಜಿ ಆಗಸ್ಟ್ 7 ರಂದು ನಿಧನರಾಗಿದ್ದು ಅವರ ಕೋವಿಡ್ ಪರೀಕ್ಷಾ ವಿವರದಲ್ಲಿ ಕೋವಿಡ್ ದೃಢಪಡಿಸಲಾಗಿದೆ. ಪೊಕ್ಕುನ್ನಿನ ಚಂದ್ರನ್ (75), ಕೋಝಿಕ್ಕೋಡ್ ನ  ಬಿರ್ಕು (69), ಕಾಸರಗೋಡು ವರ್ಕಾಡಿಯ ಅಸ್ಮಾ (38), ಮಂಜೇಶ್ವರದ ಅಬ್ಬಾಸ್ (55) ಆಗಸ್ಟ್ 10 ರಂದು ನಿಧನರಾದವರಾಗಿದ್ದು ಅವರ ಫಲಿತಾಂಶದಲ್ಲಿ ಕೋವಿಡ್ ದೃಢಪಟ್ಟಿದೆ. ತಿರುವನಂತಪುರದ  ಕುರಿಯನ್ ಟೈಟಸ್ (42) ಆಗಸ್ಟ್ 13 ರಂದು ನಿಧನರಾಗಿದ್ದು ಅವರಲ್ಲೂ ಕೋವಿಡ್ ದೃಢಪಡಿಸಲಾಗಿದೆ. ಪಾರಾಶಾಲಾದ ಬಿಚಾವಾ ಹಾಜಿ (65), ತಿರುವನಂತಪುರದ ಸೆಲ್ವರಾಜ್ (58), ಕಾಸರಗೋಡು ಬೇಕಲ್ ಮೂಲದ ರಮೇಶನ್ (47), ಆಲಪ್ಪುಳ ಆಗಸ್ಟ್ 3 ರಂದು ನಿಧನರಾದ ರಾಜ್ ಎಸ್ ಪಿಳ್ಳೈ(76), ಮಂಜೇಶ್ವರದ ಮರಿಯಮ್ಮ (76), ಉಪ್ಪಳದ ರಿಸಾ ಫಾತಿಮಾ (7 ತಿಂಗಳು), ಆ.5 ರಂದು ತಿರುವನಂಪುರದಲ್ಲಿ ನಿಧನರಾದ ಸಿರುವಾಂತ (5) ಎಂಬವರ ಫಲಿತಾಂಶಗಳಲ್ಲಿ ಕೋವಿಡ್ ದೃಢಪಟ್ಟಿದೆ.

          ಆರೋಗ್ಯ ಕಾರ್ಯಕರ್ತರಿಗೂ ಸೋಂಕು: 

    ಕೋವಿಡ್ ಸೋಂಕು ರಾಜ್ಯದ ಆರೋಗ್ಯ ಕಾರ್ಯಕರ್ತರಲ್ಲಿ ದೃಢಪಟ್ಟಿದೆ. ಇಂದು ವಿವಿಧ ಜಿಲ್ಲೆಗಳ 31 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ತಿರುವನಂತಪುರ ಜಿಲ್ಲೆಯಲ್ಲಿ 15, ಕಣ್ಣೂರು ಜಿಲ್ಲೆಯಲ್ಲಿ ತಲಾ 5, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ 3, ಕೋಝಿಕ್ಕೋಡ್ ಜಿಲ್ಲೆಯಲ್ಲಿ ತಲಾ 2 ಮತ್ತು ಎರ್ನಾಕುಳಂ, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ 1 ಆರೋಗ್ಯ ವಿಭಾಗದ ಕಾರ್ಯಕರ್ತರಲ್ಲಿ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ 2 ಡಿ.ಎಸ್.ಸಿ. ನೌಕರರು ಸಹ ಕೋವಿಡ್ ಸೋಂಕಿಗೊಳಗಾಗಿದ್ದಾರೆ. 

         ಇಂದು ಮಾತ್ರ 8 ಮೃತ್ಯು: 

      ವರದಿಗಳ ಪ್ರಕಾರ, ರಾಜ್ಯದಲ್ಲಿ ಕೋವಿಡ್ ರೋಗನಿರ್ಣಯ ಮಾಡಿದವರಲ್ಲಿ  ಇಂದು ಮಾತ್ರ ಎಂಟು ಜನರು ಸಾವನ್ನಪ್ಪಿದ್ದಾರೆ. ಅಲುವಾದ ಸದಾನಂದನ್ (57), ವೃಂದಾ (54), ಲೀಲಾ (65), ವಡಕರ ಗ್ರಾಮೀಣ ಎಸ್‍ಪಿ ಕಚೇರಿಯ ಉದ್ಯೋಗಿ ಶಾಹಿನ್ ಬಾಬು, ಮಾವೂರ್‍ನ ಜುಲು, ಪೂಕೋಟೂರಿನ ಇಲಿಯಾಸ್ (47), ಮಲಪ್ಪುರಂನ ಪ್ರತಾಪನ್ ಮತ್ತು ಕಳಮಶ್ಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡಿನ ವಿಜಯ (31) ಇಂದು ಮೃತರಾಗಿರುವರು. 

              ಇಂದು 114 ಮಂದಿ ಸೋಂಕಿತರು ಪೂಜಾಪ್ಪುರ ಜೈಲಿನಲ್ಲಿ: 

     ಇಂದು, ಪೂಜಾಪ್ಪುರ ಜೈಲಿನಲ್ಲಿ 114 ಕೈದಿಗಳಿಗೂ ಸೋಂಕು ಪತ್ತೆಯಾಗಿದೆ. ಅಲ್ಲಿ ಕೋವಿಡ್ ಪ್ರಕರಣಗಳು ಕಳೆದೊಂದು ವಾರದಲ್ಲಿ ತೀವ್ರಗತಿಯಲ್ಲಿದೆ. 363 ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿದೆ. ಇದರೊಂದಿಗೆ, ಪೂಜಾಪ್ಪುರ ಜೈಲಿನಲ್ಲಿರುವ ಒಟ್ಟು 975 ರಲ್ಲಿ 477 ಕೋವಿಡ್ ದೃಢಪಡಿಸಲಾಗಿದೆ. ಚಿಕಿತ್ಸೆಯ ಬಳಿಕ ಕೈದಿಗಳು ಮುಂದೇನು ಮಾಡಲಿದ್ದಾರೆಂದು  ತಿಳಿದಿಲ್ಲ. ಅಧಿಕಾರಿಗಳು ಇನ್ನೂ ವಿವರಗಳನ್ನು ಬಿಡುಗಡೆ ಮಾಡಿಲ್ಲ. ರಾಜಧಾನಿಯಲ್ಲಿ ಕೋವಿಡ್ ಪೀಡಿತ ಪೆÇಲೀಸ್ ಅಧಿಕಾರಿಗಳ ಸಂಖ್ಯೆ ಹೆಚ್ಚುತ್ತಿದೆ.

               ಕೇರಳದಲ್ಲಿ ತೀವ್ರಗತಿಯ ಏರಿಕೆ: 

      ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ತೀವ್ರ ಸಂದಿಗ್ದತೆ ಉಂಟಾಗುವ ಹಂತ ತಲಪಿದೆ. ಸಂಪರ್ಕ ಮತ್ತು ಮೂಲ ಪತ್ತೆಯಾಗದ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು ಹೆಚ್ಚು ಹೆಚ್ಚು ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಡುತ್ತಿರುವುದು ನಿಯಂತ್ರಣ ಕ್ರಮಗಳಿಗೂ ಹಿನ್ನಡೆಯಾಗಿದೆ. ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಮಾಡುವ ಜನರ ಸಂಖ್ಯೆಯೂ ಹೆಚ್ಚಿದೆ. ಹಾಟ್‍ಸ್ಪಾಟ್‍ಗಳು ಮತ್ತು ಕಂಟೈನ್‍ಮೆಂಟ್ ವಲಯಗಳ ಸಂಖ್ಯೆಯು ಹೆಚ್ಚುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries