ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 97 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 170 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 90 ಮಂದಿಗೆ ರೋಗ ಬಾಧಿಸಿದೆ.
ಕಾಸರಗೋಡು ನಗರಸಭೆ 6, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಕಾರಡ್ಕ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 24, ವರ್ಕಾಡಿ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 1, ಕಾಂಞಂಗಾಡ್ ನಗರಸಭೆ 9, ಪಡನ್ನ ಪಂಚಾಯತ್ 1, ಮಡಿಕೈ ಪಂಚಾಯತ್ 4, ಕಳ್ಳಾರ್ ಪಂಚಾಯತ್ 1, ಅಜಾನೂರು ಪಂಚಾಯತ್ 5, ಪಳ್ಳಿಕ್ಕರೆ ಪಂಚಾಯತ್ 3, ನೀಲೇಶ್ವರ ನಗರಸಭೆ 15, ಕಯ್ಯೂರು - ಚೀಮೇನಿ ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 2, ಚೆರುವತ್ತೂರು ಪಂಚಾಯತ್ 4, ತ್ರಿಕರಿಪುರ ಪಂಚಾಯತ್ 5, ವಲಿಯಪರಂಬ ಪಂಚಾಯತ್ 4, ಪಿಲಿಕೋಡ್ ಪಂಚಾಯತ್ 2, ವೆಸ್ಟ್ ಎಳೇರಿ-1, (ಕಣ್ಣೂರು ಜಿಲ್ಲೆಯಲ್ಲಿ ಈಗ ಇರುವ ಮಂದಿಯ ಗಣನೆ-)ಪರಿಯಾರಂ ಪಂಚಾಯತ್ 1, ಕುತ್ತಿಕೋಲ್ ಪಂಚಾಯತ್ 1, ಪಯ್ಯನ್ನೂರು ಪಂಚಾಯತ್ 1 ಮಂದಿ ಸೋಂಕು ಪಾಸಿಟಿವ್ ಆದವರು.
ಜಿಲ್ಲೆಯಲ್ಲಿ ಸೋಮವಾರ 174 ಮಂದಿಗೆ ಕೋವಿಡ್ ನೆಗೆಟಿವ್ ವಿವರ:
ಜಿಲ್ಲೆಯಲ್ಲಿ ಸೋಮವಾರ 174 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸೋಂಕು ಗುಣಹೊಂದಿದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 36, ಮೊಗ್ರಾಲ್ಪುತ್ತೂರು ಪಂಚಾಯತ್ 36, ಮಂಗಲ್ಪಾಡಿ ಪಂಚಾಯತ್ 10, ಮೀಂಜ ಪಂಚಾಯತ್ 7, ಮಧೂರು ಪಂಚಾಯತ್ 2, ವರ್ಕಾಡಿ ಪಂಚಾಯತ್ 3, ಕುಂಬಳೆ ಪಂಚಾಯತ್ 5, ಕಾಞಂಗಾಡ್ ನಗರಸಭೆ 5, ಚೆರುವತ್ತೂರು ಪಂಚಾಯತ್ 2, ಮಡಿಕೈ ಪಂಚಾಯತ್ 2, ಪಿಲಿಕೋಡ್ ಪಂಚಾಯತ್ 2, ಬಳಾಲ್ ಪಂಚಾಯತ್ 1, ವೆಸ್ಟ್ ಏಳೇರಿ ಪಂಚಾಯತ್ 1, ಬೇಡಡ್ಕ ಪಂಚಾಯತ್ 1, ಉದುಮಾ ಪಂಚಾಯತ್ 21, ಅಜಾನೂರು ಪಂಚಾಯತ್ 12, ಪಳ್ಳಿಕ್ಕರೆ ಪಂಚಾಯತ್ 29, ನೀಲೇಶ್ವರ ನಗರಸಭೆ 9, ಪಯ್ಯನ್ನೂರು ಪಂಚಾಯತ್ 1, ಕೋಡೋಂ-ಬೇಳೂರು ಪಂಚಾಯತ್ 1, ಕಾಂಕೋಲು ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 11, ಕಿನಾನೂರು-ಕರಿಂದಳಂ ಪಂಚಾಯತ್ 2 ಮಂದಿ ಗುಣಮುಖರಾದವರು.
ಜಿಲ್ಲೆಯಲ್ಲಿ 5108 ಮಂದಿ ನಿಗಾದಲ್ಲಿ:
ಜಿಲ್ಲೆಯಲ್ಲಿ 5108 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಮನೆಗಳಲ್ಲಿ 3935, ಸಾಂಸ್ಥಿಕವಾಗಿ 1173 ಮಂದಿ ನಿಗಾದಲ್ಲಿರುವರು. ನೂತನವಾಗಿ 314 ಮಂದಿ ನಿಗಾ ಪ್ರವೇಶಿಸಿದ್ದಾರೆ. 301 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 25 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 711 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಸೋಮವಾರ ರಾಜ್ಯದಲ್ಲಿ ಒಟ್ಟು 13 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 169 ಕ್ಕೇರಿತು.
ಗುಣಮುಖ : ತಿರುವನಂತಪುರ-270, ಕಾಸರಗೋಡು-170, ಮಲಪ್ಪುರಂ-130, ಆಲಪ್ಪುಳ-110, ಕೊಲ್ಲಂ-89, ಕಲ್ಲಿಕೋಟೆ-76, ಎರ್ನಾಕುಳಂ-63, ಪಾಲ್ಘಾಟ್-53, ಕೋಟ್ಟಯಂ-46, ತೃಶ್ಶೂರು-42, ಪತ್ತನಂತಿಟ್ಟ-32, ಕಣ್ಣೂರು-22, ಇಡುಕ್ಕಿ-15, ವಯನಾಡು-13 ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಾಗಿ 15890 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 30029 ಮಂದಿ ಗುಣಮುಖರಾಗಿದ್ದಾರೆ.


