HEALTH TIPS

ಇಂದು ಕೇರಳದಲ್ಲಿ 1908 ಸೋಂಕಿತರು-ಕಾಸರಗೋಡು : 85 ಮಂದಿಗೆ ಸೋಂಕು

   

         ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 85 ಮಂದಿಗೆ ಇಂದು ಕೋವಿಡ್ ಪಾಸಿಟಿವ್ ಆಗಿದೆ. 83 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಒಬ್ಬರು ವಿದೇಶದಿಂದ, ಒಬ್ಬರು ಇತರ ರಾಜ್ಯದಿಂದ ಬಂದವರು ಎಂದು ಜಿಲ್ಲಾ ವೈದ್ಯಾಆiಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಇದೇ ವೇಳೆ 44 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ನಗರಸಭೆ 3, ಮಂಗಲ್ಪಾಡಿ ಪಂಚಾಯತ್ 7,  ಚೆಮ್ನಾಡ್ ಪಂಚಾಯತ್ 17, ಚೆಂಗಳ ಪಂಚಾಯತ್ 1, ಮೊಗ್ರಾಲ್ ಪಂಚಾಯತ್ 2, ಬದಿಯಡ್ಕ ಪಂಚಾಯತ್ 1, ಮೀಂಜ ಪಂಚಾಯತ್ 2, ಕಾಂಞಂಗಾಡ್ ನಗರಸಭೆ 24, ಅಜಾನೂರು ಪಂಚಾಯತ್ 6, ಉದುಮ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 5, ಮಡಿಕೈ ಪಂಚಾಯತ್ 1, ನೀಲೇಶ್ವರ ನಗರಸಭೆ 1, ವಲಿಯಪರಂಬ ಪಂಚಾಯತ್ 10, ಚೆರುವತ್ತೂರು ಪಂಚಾಯತ್ 1, ಕೋಡೋಂ-ಬೇಳೂರು ಪಂಚಾಯತ್ 1, ವೆಸ್ಟ್ ಏಳೇರಿ ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 

        ಮಸ್ಕತ್‍ನಿಂದ ಆಗಮಿಸಿದ್ದ ವೆಸ್ಟ್ ಏಳೇರಿ ಪಂಚಾಯತ್‍ನ 37 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ. ಇತರ ರಾಜ್ಯ ಬಿಹಾರದಿಂದ ಬಂದಿದ್ದ ಅಜಾನೂರು ಪಂಚಾಯತ್‍ನ 25 ವರ್ಷದ ಯುವಕನಿಗೆ ಕೋವಿಡ್ ಪಾಸಿಟಿವ್ ಆಗಿದೆ.      

                 5336 ಮಂದಿ ನಿಗಾದಲ್ಲಿ: 

    ಕಾಸರಗೋಡು ಜಿಲ್ಲೆಯಲ್ಲಿ 5336 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮನೆಗಳಲ್ಲಿ 4342 ಮಂದಿ, ಸಾಂಸ್ಥಿಕವಾಗಿ 994 ಮಂದಿ ನಿಗಾದಲ್ಲಿರುವರು. ನೂತನವಾಗಿ 375 ಮಂದಿ ನಿಗಾ ಪ್ರವೇಶಿಸಿದ್ದಾರೆ. 441 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1273 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 676 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.  

       ಕೇರಳದಲ್ಲಿ 1908 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಭಾನುವಾರ 1908 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 1110 ಮಂದಿ ರೋಗ ಮುಕ್ತರಾಗಿದ್ದಾರೆ. ರೋಗ ಬಾಧಿತರ ಪೈಕಿ 35 ಮಂದಿ ವಿದೇಶದಿಂದ, 105 ಮಂದಿ ಇತರ ರಾಜ್ಯಗಳಿಂದ ಬಂದವರು. 1718 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 50 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. 

     ರೋಗ ಬಾಧಿತರು ಜಿಲ್ಲಾವಾರು ವಿವರ: ತಿರುವನಂತಪುರ-397, ಆಲಪ್ಪುಳ-241, 

ಎರ್ನಾಕುಳಂ-200, ಮಲಪ್ಪುರಂ-186, ಕಣ್ಣೂರು-143, ಕೊಲ್ಲಂ-133, ಕಲ್ಲಿಕೋಟೆ-119, ತೃಶ್ಶೂರು-116, ಕೋಟ್ಟಯಂ-106, ಪತ್ತನಂತಿಟ್ಟ-104, ಕಾಸರಗೋಡು-85, ಪಾಲ್ಘಾಟ್-39, ಇಡುಕ್ಕಿ-29, ವಯನಾಡು-10 ಎಂಬಂತೆ ರೋಗ ಬಾಧಿಸಿದೆ. 

        ಭಾನುವಾರ ಐವರ ಸಾವು ಕೊರೊನಾ ವೈರಸ್ ಸೋಂಕಿನಿಂದ ಎಂಬುದಾಗಿ ದೃಢೀಕರಿಸಲಾಗಿದೆ. ಇದರೊಂದಿಗೆ ಒಟ್ಟು ಸತ್ತವರ ಸಂಖ್ಯೆ 223 ಕ್ಕೇರಿತು. 

ರೋಗ ಮುಕ್ತ : ತಿರುವನಂತಪುರ-125, ಕೊಲ್ಲಂ-22, ಪತ್ತನಂತಿಟ್ಟ-45, ಆಲಪ್ಪುಳ-53, ಕೋಟ್ಟಯಂ-72, ಇಡುಕ್ಕಿ-19, ಎರ್ನಾಕುಳಂ-171, ತೃಶ್ಶೂರು-70, ಪಾಲ್ಘಾಟ್-250, ಮಲಪ್ಪುರಂ-100, ಕಲ್ಲಿಕೋಟೆ-12, ವಯನಾಡು-39, ಕಣ್ಣೂರು-88, ಕಾಸರಗೋಡು-44 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 20300 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 37649 ಮಂದಿ ರೋಗ ಮುಕ್ತರಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries