HEALTH TIPS

ಆತಂಕಕಾರಿ ಆಗಿಯೇ ಮುಂದುವರಿದ ಸೋಂಕು-ಇಂದು ರಾಜ್ಯಾದ್ಯಂತ 1983 ಹೊಸ ಸೋಮಕಿತರು-1777 ಮಂದಿಗೆ ಸಂಪರ್ಕದಿಂದ!:-ಕಾಸರಗೋಡು : 105 ಮಂದಿಗೆ ಸೋಂಕು

  

      ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 105 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 34 ಮಂದಿ ಗುಣಮುಖರಾಗಿದ್ದಾರೆ. 95 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. 9 ಮಂದಿ ವಿದೇಶದಿಂದ ಹಾಗು ಒಬ್ಬರು ಇತರ ರಾಜ್ಯದಿಂದ ಬಂದವರು. 

      ರೋಗ ಬಾಧಿತರು : ಪುತ್ತಿಗೆ-3, ಪಿಲಿಕೋಡು-3, ಚೆಮ್ನಾಡ್-28, ಕಾಸರಗೋಡು-3, ಮಧೂರು-1, ಅಜಾನೂರು-4, ಪಳ್ಳಿಕೆರೆ-4, ವರ್ಕಾಡಿ-3, ಮಂಗಲ್ಪಾಡಿ-1, ಮಂಜೇಶ್ವರ-2, ಕಾಂಞಂಗಾಡ್-12, ನೀಲೇಶ್ವರ-1, ವಲಿಯಪರಂಬ-4, ಕಯ್ಯೂರು-ಚೀಮೇನಿ-1, ಉದುಮ-17, ಚೆಂಗಳ-2, ಚೆರ್ವತ್ತೂರು-5, ಮೊಗ್ರಾಲ್‍ಪುತ್ತೂರು-1, ಕೋಡೋಂ ಬೇಳೂರು-2, ಪುಲ್ಲೂರು ಪೆರಿಯ-3, ಬದಿಯಡ್ಕ-2, ಪೈವಳಿಕೆ-1, ಪಡನ್ನ-2 ಎಂಬಂತೆ ರೋಗ ಬಾಧಿಸಿದೆ. 

        ಇಬ್ಬರ ಸಾವು : ಕೊರೊನಾ ಸೋಂಕಿನಿಂದ ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರು ಸಾವಿಗೀಡಾದರು. 74 ವರ್ಷ ಪ್ರಾಯದ ಪೈವಳಿಕೆ ಸುಂಕದಕಟ್ಟೆ ತಿಮಿರಡ್ಕ ನಿವಾಸಿ ಹಾಗು 55 ವರ್ಷ ಪ್ರಾಯದ ಉದಿನೂರು ಇಯ್ಯಕುಟ್ಟಿ ನಿವಾಸಿ ಸಾವಿಗೀಡಾದರು. 

       ಕೇರಳದಲ್ಲಿ 1983 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಶುಕ್ರವಾರ 1983 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ರೋಗ ಬಾಧಿತರಲ್ಲಿ 64 ಮಂದಿ ವಿದೇಶದಿಂದ, 99 ಮಂದಿ ಇತರ ರಾಜ್ಯಗಳಿಂದ ಬಂದವರು. 1777 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 35 ಮಂದಿ ಆರೋಗ್ಯ ಕಾರ್ಯಕರ್ತರು, 7 ಮಂದಿ ಐಎನ್‍ಎಚ್‍ಎಸ್ ಸಿಬ್ಬಂದಿಗಳಿಗೆ, ಒಬ್ಬರು ಡಿಎಸ್‍ಸಿ ಸಿಬ್ಬಂದಿಗೆ ರೋಗ ಬಾಧಿಸಿದೆ.

        ರೋಗ ಬಾಧಿತರು ಜಿಲ್ಲಾವಾರು: ತಿರುವನಂತಪುರ-429, ಮಲಪ್ಪುರ-335, ಎರ್ನಾಕುಳಂ-165, ಕಲ್ಲಿಕೋಟೆ-158, ಆಲಪ್ಪುಳ-155, ಕೋಟ್ಟಯಂ-136, ತೃಶ್ಶೂರು-119, ಕಾಸರಗೋಡು-105, ಪಾಲ್ಘಾಟ್-83, ಕೊಲ್ಲಂ-82, ಪತ್ತನಂತಿಟ್ಟ-78, ಕಣ್ಣೂರು-78, ಇಡುಕ್ಕಿ-34, ವಯನಾಡು-26 ಎಂಬಂತೆ ರೋಗ ಬಾಧಿಸಿದೆ. 

         12 ಮಂದಿಯ ಸಾವಿಗೆ ಕಾರಣ ಕೋವಿಡ್-19 ಎಂಬುದಾಗಿ ಖಾತರಿಗೊಳಿಸಲಾಗಿದೆ. ಇದರೊಂದಿಗೆ ಕೇರಳದಲ್ಲಿ ಒಟ್ಟು ಸತ್ತವರ ಸಂಖ್ಯೆ 203 ಕ್ಕೇರಿತು.

    ಗುಣಮುಖ : ತಿರುವನಂತಪುರ-258, ಕೊಲ್ಲಂ-54, ಪತ್ತನಂತಿಟ್ಟ-37, ಆಲಪ್ಪುಳ-67, ಕೋಟ್ಟಯಂ-93, ಇಡುಕ್ಕಿ-18, ಎರ್ನಾಕುಳಂ-89, ತೃಶ್ಶೂರು-55, ಪಾಲ್ಘಾಟ್-144, ಮಲಪ್ಪುರಂ-319, ಕಲ್ಲಿಕೋಟೆ-163, ವಯನಾಡು-44, ಕಣ್ಣೂರು-44, ಕಾಸರಗೋಡು-34 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 18,673 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 35247 ಮಂದಿ ಗುಣಮುಖರಾಗಿದ್ದಾರೆ.

         ಮಾಸ್ಕ್ ಧರಿಸದ 402 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 402 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 23765 ಆಗಿದೆ.  

       ಲಾಕ್‍ಡೌನ್ ಉಲ್ಲಂಘನೆ : 61 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 61 ಕೇಸುಗಳನ್ನು ದಾಖಲಿಸಲಾಗಿದೆ. 90 ಮಂದಿಯನ್ನು ಬಂಧಿಸಲಾಗಿದೆ. ಒಂದು ವಾಹನವನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 3, ಕಾಸರಗೋಡು 3, ವಿದ್ಯಾನಗರ 3, ಬದಿಯಡ್ಕ 2, ಆದೂರು 3, ಬೇಡಗಂ 1, ಮೇಲ್ಪರಂಬ 5, ಬೇಕಲ 3, ಅಂಬಲತ್ತರ 4, ಹೊಸದುರ್ಗ 8, ನೀಲೇಶ್ವರ 5, ಚಂದೇರ 4, ಚೀಮೇನಿ 4, ಚಿತ್ತಾರಿಕಲ್ 4, ವೆಳ್ಳರಿಕುಂಡ್ 4, ರಾಜಪುರಂ 3 ಕೇಸು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಒಟ್ಟು ಸಂಖ್ಯೆ 3700 ಆಗಿದೆ. 4994 ಮಂದಿಯನ್ನು ಬಂಧಿಸಲಾಗಿದ್ದು, 1325 ವಾಹನಗಳನ್ನು ವಶಪಡಿಸಲಾಗಿದೆ. 

        ಕ್ವಾರೆಂಟೈನ್ ಉಲ್ಲಂಘನೆ : 877 ಕೇಸುಗಳು : ಕಾಸರಗೋಡು ಜಿಲ್ಲೆಯಲ್ಲಿ ಕ್ವಾರೆಂಟೈನ್ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಈ ವರೆಗೆ ಒಟ್ಟು 877 ಕೇಸುಗಳನ್ನು ದಾಖಲಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries