HEALTH TIPS

ಕೋವಿಡ್ 19: ಅಂತರ್ ರಾಜ್ಯ ಸಂಚಾರ ಒಂದಷ್ಟು ಮುಕ್ತ!-ಆಂಟಿಜನ್ ಪರೀಕ್ಷೆ ಬೇಡ-ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ಜಿಲ್ಲಾಡಳಿತ

  

         ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66 (ತಲಪಾಡಿ ಮೂಲಕ)ರ ಮೂಲಕ ಮಂಗಳೂರು ಮತ್ತು ಕಾಸರಗೋಡು ಜಿಲ್ಲೆಯಿಂದ ಕರ್ನಾಟಕದ ಜಾಲ್ಸೂರು, ಪೆರ್ಲ, ಮಣಿಮೂಲೆ, ಬಂದಡ್ಕ  ಮತ್ತು ಪಾಣತ್ತೂರು ರಸ್ತೆಗಳನ್ನು ಕೇರಳ ಹೈಕೋರ್ಟ್‍ನ ಆದೇಶದ ಮೂಲಕ ಈಗಾಗಲೇ ತೆರೆಯಲಾಗಿದೆ. 

          ಚಿಕಿತ್ಸೆಗಾಗಿ ತಲಪ್ಪಾಡಿ ಮೂಲಕ ತೆರಳಿ ಅದೇ ದಿನ ಹಿಂದಿರುಗುವ ರೋಗಿಗಳು, ಉದ್ಯೋಗಕ್ಕಾಗಿ ತೆರಳುವ ಉದ್ಯಮಿಗಳು ಮತ್ತು ಇತರರಿಗೆ ಆಂಟಿಜೆನ್ ಪರೀಕ್ಷೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿರುವರು.

         ಶುಕ್ರವಾರ ಜರಗಿದ ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ಮುಖ್ಯಸ್ಥೆ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ತುರ್ತು ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದು ಕಂದಾಯ ಸಚಿವ ಇ ಚಂದ್ರಶೇಖರನ್ ಅವರ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದಾರೂ, ಪ್ರತಿದಿನ ಕರ್ನಾಟಕಕ್ಕೆ ನಿಯಮಿತವಾಗಿ ಭೇಟಿ ನೀಡುವವರು 21 ದಿನಗಳಿಗೊಮ್ಮೆ ಕೋವಿಡ್ 19 ಜಾಗ್ರತಾ ವೆಬ್ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಆಂಟಿಜೆನ್ ಟೆಸ್ಟ್ ನಕಾರಾತ್ಮಕ ವರದಿಯನ್ನು ಅಪ್‍ಲೋಡ್ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries