HEALTH TIPS

ಕೋವಿಡ್-ಜಿಲ್ಲೆಯಲ್ಲಿ 20 ದಿನದಲ್ಲಿ 2022 ಸೋಂಕಿತರು-ಗುಣಮುಖರಾದವರು 1753-ಇಂದು 91 ಮಂದಿಗೆ ಸೋಂಕು ದೃಢ

     

      ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 91 ಮಂದಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಇದೇ ವೇಳೆ 156 ಮಂದಿ ಗುಣಮುಖರಾಗಿದ್ದಾರೆ. 82 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇಬ್ಬರು ವಿದೇಶದಿಂದ, 7 ಮಂದಿ ಇತರ ರಾಜ್ಯಗಳಿಂದ ಬಂದವರು. ಕಳೆದ 20 ದಿನಗಳಲ್ಲಿ ಈ ಮೂಲಕ 2022 ಹೊಸ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿರುವುದು ಆತಂಕಕ್ಕೂ ಕಾರಣವಾಗಿದೆ.

         ಪಂಚಾಯತಿವಾರು ವಿವರ:

    ಉದುಮ-5, ಚೆಮ್ನಾಡ್-4, ಕಾಸರಗೋಡು-13, ಮಧೂರು-4, ಕಯ್ಯೂರು-ಚೀಮೇನಿ-3, ಮೀಂಜ-3, ಕುಂಬ್ಡಾಜೆ-3, ಕುಂಬಳೆ-1, ಮಂಜೇಶ್ವರ-1, ಮಂಗಲ್ಪಾಡಿ-1, ಚೆರ್ವತ್ತೂರು-1, ಪುತ್ತಿಗೆ-1, ಪುಲ್ಲೂರು-ಪೆರಿಯ-9, ತೃಕ್ಕರಿಪುರ-1, ನೀಲೇಶ್ವರ-10, ಕಾಂಞಂಗಾಡ್-17, ಪಳ್ಳಿಕೆರೆ-1, ಮಡಿಕೈ-3, ಪಿಲಿಕೋಡು-2, ಕಿನಾನೂರು-1, ಕೋಡೋಂ ಬೇಳೂರು-1, ಬದಿಯಡ್ಕ-1, ಮುಳಿಯಾರು-1 ಹಾಗು ಇತರ ಜಿಲ್ಲೆಯ ನಾಲ್ವರಿಗೆ ರೋಗ ಬಾಧಿಸಿದೆ. 

    ಕಳೆದ 20 ದಿನಗಳಲ್ಲಿ ಎಂಟು ಬಾರಿ ಸೋಂಕು ಬಾಧಿತರಾಗಿರುವುಉದ ನೂರಕ್ಕಿಂತಲೂ ಮೇಲಾಗಿದೆ. ಆಗಸ್ಟ್ 1 ರಂದು 153, ಎರಡರಂದು 113, ಆ.5,6, 7 ರಂದು ಕ್ರಮವಾಗಿ 128, 153, 168, ಹತ್ತರಂದು 146, 11 ರಂದು 147, 19 ರಂದು 174 ಎಂದಿದೆ ಸೋಂಕು ಬಾಧಿತರಾದವರ ಅಂಕಿಅಂಶಗಳಾಗಿವೆ.ಆ.11 ರಂದು 266 ಸೋಂಕು ಮುಕ್ತರಾಗಿರುವುದಷ್ಟೇ ಅತೀ ಹೆಚ್ಚಿನ ಗುಣಮುಖರಾದ ಅಂಕಿಅಂಶವಾಗಿದೆ. ಜು.30 ರ ಬಳಿಕ ಜಿಲ್ಲೆಯ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಭರವಸೆ ಮೂಡಿಸಿದ್ದೂ ಹೌದು. ಜು.31 ರಂದು 129, ಆ.5 ರಂದು 105, ಏಳರಂದು 123 ಮಂದಿಗಳು ಗುಣಮುಖರಾಗಿರುವರು. ಆ.9 ರಂದು 115 ಮಂದಿ, 16,17,18 ರಂದು ನಿರಂತರವಾಗಿ ನೂರಕ್ಕಿಂತ ಮೇಲೆ ಗುಣಮುಖರಾಗಿರುವರು. ಅಂದರೆ 203,170, 124 ಎಂಬಂತೆ ಗುಣಮುಖರಾಗಿರುವರು. ನಿನ್ನೆ 81 ಮಂದಿಗಳಿಗೂ, ಇಂದು 156 ಮಂದಿಗಳೂ ಸೋಂಕು ಮುಕ್ತರಾಗಿರುವರು. 

         ಮಾಸ್ಕ್ ಧರಿಸದ 383 ಮಂದಿ ವಿರುದ್ಧ  ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 383 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 23363 ಆಗಿದೆ. 

       ಲಾಕ್‍ಡೌನ್ ಉಲ್ಲಂಘನೆ: 44 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 44 ಕೇಸುಗಳನ್ನು ದಾಖಲಿಸಲಾಗಿದೆ. 76 ಮಂದಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕುಂಬಳೆ 3, ಕಾಸರಗೋಡು 4, ವಿದ್ಯಾನಗರ 3, ಬದಿಯಡ್ಕ 4, ಆದೂರು 3, ಬೇಡಗಂ 1, ಮೇಲ್ಪರಂಬ 1, ಬೇಕಲ 2, ಅಂಬಲತ್ತರ 2, ಹೊಸದುರ್ಗ 9, ನೀಲೇಶ್ವರ 2, ಚಂದೇರ 3, ಚೀಮೇನಿ 2, ಚಿತ್ತಾರಿಕಲ್ 2, ರಾಜಪುರಂ 2 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3639 ಆಗಿದೆ. 4904 ಮಂದಿಯನ್ನು ಬಂಧಿಸಲಾಗಿದೆ. 1324 

ವಾಹನಗಳನ್ನು ವಶಪಡಿಸಲಾಗಿದೆ. 

        ಕ್ವಾರೆಂಟೈನ್ ಉಲ್ಲಂಘನೆ : 877 ಕೇಸು : ಕ್ವಾರೆಂಟೈನ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 877 ಮಂದಿ ವಿರುದ್ಧ ಕೇಸು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries