HEALTH TIPS

ಇನ್ನು ಝೂಂ ಔಟ್!!-ಚೀನೀ ಅಪ್ಲಿಕೇಶನ್‍ಗಳಿಗೆ ಎದುರಾಗಿ ಆಲಪ್ಪುಳದಿಂದ ಚೆಕ್: ವೀಡಿಯೊ ಕಾನ್ಫರೆನ್ಸಿಂಗ್ ಹೊಸ ಸಾಫ್ಟ್‍ವೇರ್ ನ್ನು ಕೇಂದ್ರದಿಂದ ಅನುಮೋದನೆ

  

       ಆಲಪ್ಪುಳ:  ಪ್ರಧಾನಮಂತ್ರಿ ನರೇಂದ್ರಮೋದಿ ನೀಡಿದ್ದ ವಿಡಿಯೋ ಕಾನ್ಫರೆನ್ಸಿಂಗ್ ಸಾಫ್ಟ್‍ವೇರ್‍ನ ಇನ್ನೋವೇಶನ್ ಚಾಲೆಂಜ್‍ನಲ್ಲಿ ಭಾಗವಹಿಸಿದ ಕೇರಳದ ಸ್ಟಾರ್ಟ್ ಅಪ್ ಕಂಪನಿಗೆ ಕೇಂದ್ರವು ಅನುಮೋದನೆ ನೀಡಿದೆ. ಆಲಪ್ಪುಳ ಮೂಲದ ಜಾಯ್ ಸೆಬಾಸ್ಟಿಯನ್ ನೇತೃತ್ವದ 'ಟೆಕ್ಜೆನ್ಸಿಯಾ' ಕಂಪನಿಯು ಕೇಂದ್ರ ಸರ್ಕಾರದಿಂದ 1 ಕೋಟಿ ರೂ. ಮತ್ತು ಮೂರು ವರ್ಷಗಳ ಒಪ್ಪಂದವನ್ನು ಪಡೆದಿದೆ. ವಿಜೇತರನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಘೋಷಿಸಿದ್ದಾರೆ.

     ಜಾಯ್ ಸೆಬಾಸ್ಟಿಯನ್ ಅವರ ಕಂಪನಿಯನ್ನು ಸ್ಪರ್ಧೆಯಲ್ಲಿದ್ದ 12,000 ಕ್ಕೂ ಹೆಚ್ಚು ಕಂಪನಿಗಳಿಂದ ಆಯ್ಕೆ ಮಾಡಲಾಗಿದೆ. ಅಪ್ಲಿಕೇಶನ್‍ನ ಹೆಸರು 'ವಿ ಕನ್ಸೋಲ್'. ಇದರೊಂದಿಗೆ ವೀ ಕನ್ಸೋಲ್ ಭಾರತದ ಅಧಿಕೃತ ವಿಡಿಯೋ ಕಾನ್ಫರೆನ್ಸಿಂಗ್ ಸಾಫ್ಟ್‍ವೇರ್ ಆಗಲಿದೆ.  ಟೆಕ್ಜನ್ಶಿಯಾ ಚೆರ್ತಲಾ ಮಾಹಿತಿ ಉದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ಸಚಿವ ಥಾಮಸ್ ಐಸಾಕ್ ಪ್ರಶಸ್ತಿ ಪುರಸ್ಕøತ ಜೋಯಿ ಮತ್ತು ತಂಡವನ್ನು ಅಭಿನಂದಿಸಿರುವರು.

     ಪ್ರಸ್ತುತ, ಜೂಮ್ ಅಪ್ಲಿಕೇಶನ್ ನ್ನು ಮುಖ್ಯವಾಗಿ ದೇಶದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ಗಾಗಿ ಬಳಸಲಾಗುತ್ತಿದೆ. ಗೌಪ್ಯತೆ ಸಮಸ್ಯೆಗಳ ಆರೋಪಗಳು ಬೆಳಕಿಗೆ ಬಂದ ನಂತರ ಕೇಂದ್ರವು ತನ್ನದೇ ಆದ ಸಾಫ್ಟ್‍ವೇರ್ ಅನ್ನು ನಿರ್ಮಿಸಲು ಯೋಜಿಸಿತು. ಈ ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರವು 'ಇನ್ನೋವೇಶನ್ ಚಾಲೆಂಜ್' ಘೋಷಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries