HEALTH TIPS

ಕಾಸರಗೋಡು ಜನರಲ್ ಆಸ್ಪತ್ರೆಗೆ ಎನ್.ಎಚ್.ಎಂ. ಮುಖಾಂತರ 20 ಲಕ್ಷ ರೂ. ಕೊಡುಗೆ

     

     ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಗೆ ಎನ್.ಎಚ್.ಎಂ. ಮುಖಾಂತರ 20 ಲಕ್ಷ ರೂ. ಕೊಡುಗೆ ಲಭಿಸಿದೆ. 

          ಕೋವಿಡ್ ಪ್ರತಿರೋಧದ ಎರಡನೇ ಹಂತದಲ್ಲಿ ತ್ಯಿಕ ಪ್ರಮಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರು ಗುಣಮುಖರಾಗುವಂತೆ ಮಾಡಿದ ಹೆಗ್ಗಳಿಕೆ ಕಾಸರಗೋಡು ಜನರ್ ಆಸ್ಪತ್ರೆಯದು. ಈ ಹಿನ್ನೆಲೆಯಲ್ಲಿ ಈ ನಿಧಿ ಲಭಿಸಿದ್ದು, ಕಾಸರಗೋಡು ನಗರಸಭೆ ಅಧ್ಯಕ್ಷೆ, ಚೇರ್ ಮ್ಯಾನ್ ಆಗಿರುವ, ಆಸ್ಪತ್ರೆಯ ವರಿಷ್ಠಾಧಿಕಾರಿ ಸಂಚಾಲಕರಾಗಿರುವ ಆಡಳಿತೆ ಸಮಿತಿಗೆ ಈ ನಿಧಿ ಹಸ್ತಾಂತರಗೊಂಡಿದೆ. 

       ಸಿಬ್ಬದಿ ವೇತನ, ರೋಗಿಗಳಿಗೆ ಅಗತ್ಯದ ಸೌಲಭ್ಯ ಹೆಚ್ಚಳ, ಬ್ಲಡ್ ಕಂಪೆÇೀಸ್ಟ್ ಸೆಪರೇಷನ್ ಯೂನಿಟ್ ಚಟುವಟಿಕೆ ನಡೆಸಲು ಬೇಕಿರುವ ಮೊಬಲಗು(4 ಲಕ್ಷ ರೂ.), ಕೋವಿಡ್ ಅವಧಿಯಲ್ಲಿ ಸಿಬ್ಬಂದಿ ಬಳಸುವ ಪಿ.ಪಿ.ಇ.ಕಿಟ್, ಎನ್.95 ಮಾಸ್ಕ್ ಇತ್ಯಾದಿಗಳ ವೆಚ್ಚ ಇತ್ಯಾದಿಗಳಿಗೆ ಈ ಮೊಬಲಗು ಪೂರಕವಾಗಲಿದೆ. ಈಗ ದಾಖಲಾಗಿರುವ ರೋಗಿಗಳಿಗೆ ಆಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದ್ದು, ಇದರ ವೆಚ್ಚಕ್ಕೆ ಈ ನಿಧಿಯಿಂದ ಮೊಬಲಗು ಮಂಜೂರು ಮಾಡಲಾಗುವುದು. 

          ಎನ್.ಎಚ್.ಎಂ. ನೀಡಿರುವ 20 ಲಕ್ಷ ರೂ. ಅಲ್ಲದೆ ಕಳೆದ 5 ವರ್ಷಗಳಿಂದ ಮುಂಗಡವಾಗಿ ಎಂ.ಆಂಡ್ ಎಸ್.ನಿಧಿ ರೂಪದಲ್ಲಿ ಲೆಬೋರೆಟರಿ ಕೆಮಿಕಲ್ಸ್ ಖರಿದಿಗೆ ವೆಚ್ಚವಾಗಿರುವ ಮೊಬಲಗು ರಾಜ್ಯ ಸರಕಾರ ಒದಗಿಸಿದೆ ಎಂದು ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಕೆ.ಕೆ.ರಾಜಾರಾಮ ತಿಳಿಸಿದರು. 

      ರಾಜ್ಯ ಮಟ್ಟದಲ್ಲಿ ವೇತನಸಹಿತ ವೆಚ್ಗಳಿಗಾಗಿ 33 ಕೋಟಿ ರೂ. ನ್ಯಾಷನಲ್ ಹೆಲ್ತ್ ಮಿಷನ್ ಮಂಜೂರುಮಾಡಿದೆ. ಅದರಲ್ಲಿ ಕಸರಗೋಡು ಜಿಲ್ಲೆಗೆ 33,91,838 ರೂ. ಲಭಿಸಿದೆ. ಜನರಲ್ ಆಸ್ಪತ್ರೆಯ ಜೊತೆಗೆ ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಗೆ 12,21,838 ರೂ. ಮವಿಲಾ ಕಡಪ್ಪುರಂ ಪಿ.ಎಚ್.ಸಿ.ಗೆ 60 ಸಾವಿರ ರೂ. ಪುಲ್ಲೂರಿಗೆ 10 ಸಾವಿರ ರೂ. ಇದೇ ರೂಪದಲ್ಲಿ ಲಭಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries