ಕಾಸರಗೋಡು: ವ್ಯಾಪಾರಿ ಸಂಸ್ಥೆಗಳಲ್ಲಿ ಕೋವಿಡ್ ಪ್ರತಿರೋಧ ಸಂಹಿತೆಗೆಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಮಾಸ್ಕ್, ಗೌಸ್, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ 14 ದಿನಗಳ ಅವಧಿಗೆ ಮುಚ್ಚುಗಡೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.
ಜಿಲ್ಲೆಯ ವ್ಯಾಪಾರಿ ವ್ಯವಸಾಯಿ ಪ್ರತಿನಿಧಿಗಳೊಂದಿಗೆ ಅವರು ವೀಡೀಯೋ ಕಾನ್ ಫೆರೆನ್ಸ್ ನಲ್ಲಿ ಅವರು ಮಾತನಾಡಿದರು.
65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, 10 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳು ಯಾವ ಕಾರಣಕ್ಕೂ ಪೇಟೆಗೆ ಆಗಮಿಸಕೂಡದು. ಅಂಗಡಿಯೊಳಗೆ ಏಕಕಾಲಕ್ಕೆ ಪ್ರವೇಶಿಸಬಹುದಾದ ಜನಗಳ ಸಂಖ್ಯೆಯನ್ನು ಅಂಗಡಿಯ ಹೊರಬದಿ ಬರೆದು ಲಗತ್ತಿಸಬೇಕು. ಅದಕ್ಕಿಂತ ಅಧಿಕ ಪ್ರಮಾಣದಲ್ಲಿ ಗ್ರಾಹಕರು ಬಂದಲ್ಲಿ ಟೋಕನ್ ಸಂಪ್ರದಾಯ ಮೂಲಕ ಸಾಮಾಗ್ರಿ ಖರೀದಿಗೆ ವ್ಯವಸ್ಥೆ ಮಾಡಬೇಕು. ಈ ವೇಳೆಯೂ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಾಗಿ ನಿಲ್ಲಬೇಕು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿದರು.
ಅಂಗಡಿಗಳಲ್ಲಿ ಯಾವ ಕಾರಣಕ್ಕೂ ಎ.ಸಿ.ಬಳಸಕೂಡದು. ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ರೂಂ ಗಳನ್ನು ಮುಚ್ಚುಗಡೆ ಮಾಡಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿದೆ.
ಜಿಲ್ಲೆಯ ಉದ್ದಿಮೆ ಸಂಸ್ಥೆಗಳ ಅಗತ್ಯಕ್ಕಾಗಿ ಕರ್ನಾಟಕದಿಂದ ಆಗಮಿಸುವ ತಂತ್ರಜ್ಞರು ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ಮೂಲಕ ನಿತ್ಯ ಪಾಸ್ಗೆ ಅರ್ಜಿ ಸಲ್ಲಿಸುವ ವೇಳೆ ಆಂಟಿಜೆನ್ ಟೆಸ್ಟ್ ರಿಸಲ್ಟ್ ಅಪ್ ಲೋಡ್ ನಡೆಸಿದರೆ ಪಾಸ್ ಮಂಜೂರು ಮಾಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.
ಬೀದಿಬದಿ, ವಾಹನಗಳ ಮೂಲಕ ಆಹಾರ ಪದಾರ್ಥಗಳನ್ನು ಮಾರಾಟ ನಡೆಸುವ, ಈ ಬಗ್ಗೆ ಪರವಾನಗಿ ಹೊಂದದೇ ಇರುವವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆ ತಿಳಿಸಿದೆ.
"ನಮ್ಮ ಓಣಂ ಹಬ್ಬಕ್ಕೆ ನಮ್ಮ ನಾಡ ಹೂವುಗಳು" ಎಂಬ ಹೆಸರಿನ ಅಭಿಯಾನವೊಂದು ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಇದರ ಅಂಗವಾಗಿ ಹಬ್ಬದ ವೇಳೆ ಇತರ ರಾಜ್ಯಗಳಿಂದ ಹೂವುಗಳನ್ನು ತರಿಸದೆ, ಸ್ಥಳೀಯ ಮಟ್ಟದಲ್ಲಿ ಬೆಳೆಯುವ ಹೂವುಗಳನ್ನು, ರಾಜ್ಯದಲ್ಲಿ ಲಭಿಸುವ ಹೂವುಗಳನ್ನು ಮಾತ್ರ ವ್ಯಾಪಾರಿಗಳು ಮಾರಾಟ ನಡೆಸುವರು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.


