ಕಾಸರಗೋಡು: ಸಿವಿಲ್ ಸಪ್ಲೈಸ್ ನಿಗಮದ ಓಣಂ ಫೇರ್ ಆ.21ರಿಂದ 30 ವರೆಗೆ ನಡೆಯಲಿದೆ. ಕಾಸರಗೋಡು ನಗರದ ಕೆ.ಪಿ.ಆರ್.ರಾವ್ ರಸ್ತೆಯ ಕೆ.ಎಸ್.ಆರ್.ಟಿ.ಸಿ. ಡಿಪೆÇೀ ಕಟ್ಟಡ ಬಳಿ ಚಟುವಟಿಕೆ ನಡೆಸುವ ಓಣಂ ಫೇರ್ 21ರಂದು ಸಂಜೆ 4 ಗಂಟೆಯಿಂದ ಚಟುವಟಿಕೆ ಆರಂಭಿಸಲಿದೆ. ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಓಣಂ ಫೇರ್ ಉದ್ಘಾಟಿಸುವರು. ಆಹಾರ ಸಚಿವ ಪಿ.ತಿಲೋತ್ತಮನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಜಿಲ್ಲಾ ಮಟ್ಟದ ಚಟುವಟಿಕೆಗೆ ಚಾಲನೆ ನೀಡುವರು. ಶಾಸಕ ಎನ್.ಎ.ನೆಲ್ಲಿಕುನ್ನು ಮೊದಲ ಮಾರಾಟ ನಡೆಸುವರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಮುಖ್ಯ ಅತಿಥಿಯಾಗಿರುವರು. ಸದಸ್ಯ ರವೀಂದ್ರ ಪೂಜಾರಿ ಉಪಸ್ಥಿತರಿರುವರು. ಕೋವಿಡ್ ಪ್ರತಿರೋಧ ಸಂಹಿತೆ ಪಾಲಿಕೆಯೊಂದಿಗೆ ಈ ಸಮಾರಂಭ ನಡೆಯಲಿದೆ.


