HEALTH TIPS

ನಿರೀಕ್ಷಿಸಿದಂತೆ-ಗೇಟ್ ತೆರೆಯುವ ಪ್ರತೀಕ್ಷೆಯಲ್ಲಿರುವಾಗ ಏರಿತು ಕೋವಿಡ್ ರೇಟ್!-ಕಾಸರಗೋಡು : 231 ಮಂದಿಗೆ ಸೋಂಕು ದೃಢ

      

          ಕಾಸರಗೋಡು: ಗಡಿನಾಡು ಕಾಸರಗೋಡು ಜಿಲ್ಲೆ ಒಂದಿಲ್ಲೊಂದು ಕಾರಣಗಳಿಂದ ತೆಂಕಣ ಮಲೆಯಾಳಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ನಲುಗುತ್ತಿದ್ದು ಅದು ಕೋವಿಡ್ ಕಾಲದಲ್ಲೂ ಮುಂದುವರಿಯುತ್ತಿರುವುದು ತೀವ್ರ ಬೇಸರ, ಹತಾಶೆಗೆ ಕಾರಣವಾಗಿದೆ. 

      ಜಿಲ್ಲೆಯ ಕೋವಿಡ್ ದೈನಂದಿನ ವರದಿಗಳು ಬಹುತೇಕ ಈವರೆಗೆ 100 ಕ್ಕಿಂತ ಕೆಳಗಿರುತ್ತಿತ್ತು. ಆದರೆ ಸರ್ಕಾರದ ಕೋವಿಡ್ ವಿರುದ್ದ ಕಾರ್ಯಾಚರಣೆಗಳು ಇನ್ನೇನನ್ನೋ ಸೂಚಿಸುತ್ತಿರುವಂತಿತ್ತು. ಈ ಮಧ್ಯೆ ಬುಧವಾರ ರಾಜ್ಯ ಉಚ್ಚ ನ್ಯಾಯಾಲಯ ಕಾಸರಗೋಡು ಸಹಿತ ರಾಜ್ಯದ ವಿವಿಧ ಗಡಿಗಳಲ್ಲಿ ಮುಕ್ತ ಸಂಚಾರಾನುಮತಿ ನೀಡಿದ್ದರ ಬೆನ್ನಿಗೆ ಇಂದು ಕೋವಿಡ್ ಫಲಿತಾಂಶ 200 ಮೀರಿದೆ!. ಇದು ಅನಿರೀಕ್ಷಿತವೇನೂ ಅಲ್ಲ. ಈ ಬಗ್ಗೆ ಈಗಾಗಲೇ ಜನಸಾಮಾನ್ಯರು ಇಂತಹದೊಂದು ಪ್ರತಿತಂತ್ರವನ್ನು ಜಿಲ್ಲಾಡಳಿತದಿಂದ ನಿರೀಕ್ಷಿಸಿದ್ದರು. ಯಾಕೆಂದರೆ ಇಲ್ಲಿಯ ಬಹುಸಂಖ್ಯಾತ ಕನ್ನಡಿಗರು, ಜೊತೆಗೆ ಎಲ್ಲಾ ಜನವರ್ಗ ದಕ್ಷಿಣ ಕನ್ನಡದೊಂದಿಗೆ ಸಂಪರ್ಕ ಮಲೆಯಾಳಿಗರಿಗೆ ನುಂಗಲಾರದ ತುತ್ತಾಗಿ ಏನನ್ನೋ ಕಳಕೊಳ್ಳುವ, ಪ್ರತಿಷ್ಠೆಗೆ ವೃಣದಂತಾಗುವ ಭಾವ ಮಡುಗಟ್ಟಿರುವುದು ವೇದ್ಯವಾಗಿತ್ತು. ಹೈಕೋರ್ಟ್ ತೀರ್ಪು ಜಾರಿಯಾಗಬಾರದೆಂದು ಇದೀಗ ಕೋವಿಡ್ ಫಲಿತಾಂಶವನ್ನು ಏರಿಸಿರಬೇಕೆಂಬ ಗುಹಾನಿ ಎಲ್ಲೆಡೆ ಬಲವಾಗಿದೆ!

        ಜಿಲ್ಲೆಯಲ್ಲಿ ಗುರುವಾರ 231 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 223 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಮೂವರು ಇತರ ರಾಜ್ಯಗಳಿಂದ ಹಾಗು 5 ಮಂದಿ ವಿದೇಶದಿಂದ ಬಂದವರಿಗೆ ರೋಗ ಬಾಧಿಸಿದೆ. 85 ಮಂದಿ ಗುಣಮುಖರಾಗಿದ್ದಾರೆ. 

    ರೋಗ ಬಾಧಿತರು : ಅಜಾನೂರು-34, ಬಳಾಲ್-4, ಮಂಜೇಶ್ವರ-5, ಬದಿಯಡ್ಕ-4, ಕಾಸರಗೋಡು-21, ಎಣ್ಮಕಜೆ-2, ಪಳ್ಳಿಕೆರೆ-22, ಚೆಂಗಳ-7, ಮಧೂರು-10, ಬೇಡಡ್ಕ-1, ಚೆಮ್ನಾಡ್-10, ಮೊಗ್ರಾಲ್‍ಪುತ್ತೂರು-3, ಮಂಗಲ್ಪಾಡಿ-2, ಪೈವಳಿಕೆ-3, ಕುಂಬಳೆ-5, ಕಾಂಞಂಗಾಡ್-12, ಕಳ್ಳಾರ್-2, ನೀಲೇಶ್ವರ-8, ಕಯ್ಯೂರು ಚೀಮೇನಿ-3, ಪಡನ್ನ-1, ಕಿನಾನೂರು-2, ಮಡಿಕೈ-2, ಕಾರಡ್ಕ-13, ಪಿಲಿಕೋಡ್-2, ಕೋಡೋಂ ಬೇಳೂರು-11, ವಲಿಯಪರಂಬ-25, ವೆಸ್ಟ್ ಎಳೇರಿ-1, ಚೆರ್ವತ್ತೂರು-2, ಪುತ್ತಿಗೆ-1, ಉದುಮ-13 ಎಂಬಂತೆ ರೋಗ ಬಾಧಿಸಿದೆ. 

      5532 ಮಂದಿ ನಿಗಾದಲ್ಲಿ  : ಕಾಸರಗೋಡು ಜಿಲ್ಲೆಯಲ್ಲಿ 5532 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮನೆಗಳಲ್ಲಿ 4497 ಮಂದಿ, ಸಾಂಸ್ಥಿಕವಾಗಿ 1035 ಮಂದಿ ನಿಗಾದಲ್ಲಿರುವರು. ನೂತನವಾಗಿ 488 ಮಂದಿ ನಿಗಾ ಪ್ರವೇಶಿಸಿದ್ದಾರೆ. 386 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1504 ಮಂದಿ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 969 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 

    ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಕೋವಿಡ್ ಪಾಸಿಟಿವ್ :  ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಕೋವಿಡ್ ಪಾಸಿಟಿವ್ ಖಚಿತಗೊಂಡ ದಿನ ಗುರುವಾರ(ಆ.27) ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

         ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ 200ರ ಸಂಖ್ಯೆ ದಾಟಿದೆ. ಗುರುವಾರ 231 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದಕ್ಕೂ ಮೊದಲು ಆ.19ರಂದು 174 ಮಂದಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಜು.22 ರಿಂದ ಈ ವರೆಗೆ 17 ಬಾರಿ ನೂರಕ್ಕಿಂತ ಅಧಿಕ ಪಾಸಿಟಿವ್ ಕೇಸುಗಳು ವರದಿಯಾಗಿವೆ ಎಂದವರು ಹೇಳಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries