ತಿರುವನಂತಪುರ: ರಾಜ್ಯದ ಖಾಸಗಿ ಬಸ್‍ಗಳಿಗೆ ಮೂರು ತಿಂಗಳ ತೆರಿಗೆ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಶಾಲಾ ಬಸ್‍ಗಳಿಗೂ ಇದು ಅನ್ವಯವಾಗಲಿದೆ. ಇದರಿಂದ ಸರ್ಕಾರಕ್ಕೆ ಸುಮಾರು 90 ಕೋಟಿ ರೂ.ಗಳ ತೆರಿಗೆ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಕಾರಣ ಮೊಟಕುಗೊಂಡಿರುವ ಬಸ್ ಸಂಚಾರವನ್ನು ಎಲ್ಲಾ ಮಾರ್ಗಗಳಲ್ಲಿ ಮತ್ತೆ ಸಂಚಾರಕ್ಕೆ ತೊಡಗುವುದಾಗಿ ಬಸ್ ಮಾಲೀಕರ ಸಂಘಟನೆ ಮಾಹಿತಿ ನೀಡಿವೆ.
ತೆರಿಗೆ ವಿನಾಯಿತಿಯಿಂದಾಗಿ ಖಾಸಗಿ ಬಸ್ ಮಾಲೀಕರು ಸೇವೆಯನ್ನು ನಿರ್ವಹಿಸದಿದ್ದರೆ ಪರವಾನಗಿ ಹಿಂತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಹೇಳಿರುವರು.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಖಾಸಗಿ ಬಸ್ಸುಗಳು, ಕಾಂಟ್ರಾಕ್ಟ್ ಕ್ಯಾರಿಯೇಜ್ ಗಳು ಮತ್ತು ಶಾಲಾ ಬಸ್ಸುಗಳ ಮೂರು ತಿಂಗಳ ತೆರಿಗೆ ಕಡಿತಗೊಳಿಸಲಾಗುತ್ತದೆ. ತೆರಿಗೆ ವಿನಾಯಿತಿಯಿಂದಾಗಿ ಖಾಸಗಿ ಬಸ್ ಮಾಲೀಕರು ಸೇವೆಯನ್ನು ನಿರ್ವಹಿಸದಿದ್ದರೆ ಪರವಾನಗಿ ಹಿಂತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಹೇಳಿದರು.


