ನವದೆಹಲಿ,: ಭಾರತದಲ್ಲಿ ಅಭಿವೃದ್ಧಿಪಡಿಸಿಲಾಗಿರುವ 249 ಕೊರೊನಾ ಪರೀಕ್ಷಾ ಕಿಟ್‌ಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾನ್ಯತೆ ನೀಡಿದೆ.ಈ ಕುರಿತಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್, ಕೊವಿಡ್-19 ಪರೀಕ್ಷೆಗೆ ಇದುವರೆಗೆ 726 ವಿವಿಧ ಪರೀಕ್ಷಾ ಕಿಟ್‌ಗಳನ್ನು ಮೌಲ್ಯಮಾಪನ ಮಾಡಲಾಗಿದೆ.
ಈ ಪೈಕಿ 382 ಪರೀಕ್ಷಾ ಕಿಟ್ಗಳಿಗೆ ಮಾನ್ಯತೆ ನೀಡಲಾಗಿದ್ದು, ಇವುಗಳಲ್ಲಿ 249 ದೇಶೀಯವಾಗಿ ತಯಾರಿಸಲ್ಪಟ್ಟಿದ್ದಾಗಿವೆ. ಪರೀಕ್ಷಾ ಕಿಟ್‌ಗಳನ್ನು ದೇಶೀಯವಾಗಿ ತಯಾರಿಸಿದ್ದರಿಂದ ಅವುಗಳ ವೆಚ್ಚ ಗಣನೀಯವಾಗಿ ಕಡಿಮೆಯಾಗಿದ್ದು, ಹೆಚ್ಚಿನ ಖರೀದಿಗೆ ಕಾರಣವಾಗಿದೆ. ಇದು ಕೊರೊನಾ ಪರೀಕ್ಷೆಗಳಲ್ಲಿ ಪರೀಕ್ಷಾ ವೇಗವನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಆತ್ಮನಿರ್ಭರ ಭಾರತವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇದೀಗ 249 ಕೊರೊನಾ ಪರೀಕ್ಷಾ ಕಿಟ್ಗಳಿಗೆ ಮಾನ್ಯತೆ ನೀಡಿದ್ದು, ಆ ಮೂಲಕ ಐಸಿಎಂಆರ್ ಅನುಮತಿ ನೀಡಿದ ಪರೀಕ್ಷಾ ಕಿಟ್ ಗಳ ಸಂಖ್ಯೆ 382ಕ್ಕೆ ಏರಿಕೆಯಾಗಿದೆ. ಈ ಪೈಕಿ 249 ದೇಶೀಯ ನಿರ್ಮಿತ ಪರೀಕ್ಷಾ ಕಿಟ್ ಗಳಾಗಿವೆ ಎಂದು ತಿಳಿದುಬಂದಿದೆ.
ಇವುಗಳ ಮಾರಾಟ ಅಥವಾ ಬಳಕೆ ಹೆಚ್ಚಿನ ಪ್ರಮಾಣದಲ್ಲಾಗುವ ನಿರೀಕ್ಷೆ ಇದೆ. ಇದರಿಂದ ಹೆಚ್ಚೆಚ್ಚು ಪರೀಕ್ಷೆ ನಡೆಸಲು ಅನುಕೂಲವಾಗುತ್ತದೆ ಎಂದು ಬಲರಾಮ್ ಭಾರ್ಗವ್ ಹೇಳಿದ್ದಾರೆ.
ಹಾಗೆಯೇ ಈವರೆಗೂ ಐಸಿಎಂಆರ್ 726 ವಿವಿಧ ಬಗೆಯ ಕೊರೊನಾ ಪರೀಕ್ಷೆ ಕಿಟ್ ಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಈ ಪೈಕಿ 382 ಪರೀಕ್ಷಾ ಕಿಟ್ಗಳಿಗೆ ಮಾನ್ಯತೆ ನೀಡಲಾಗಿದೆ.
ಇದರಲ್ಲೂ 249 ಪರೀಕ್ಷಾ ಕಿಟ್ ಗಳು ದೇಶೀಯ ನಿರ್ಮಿತವಾದದ್ದು. ವಿದೇಶಿ ಕಿಟ್ ಗಳಿಗೆ ಹೋಲಿಕೆ ಮಾಡಿದರೆ ದೇಶೀಯ ನಿರ್ಮಿತ ಪರೀಕ್ಷಾ ಕಿಟ್ ಗಳ ದರ ಗಣನೀಯವಾಗಿ ಕಡಿಮೆ ಇದೆ.


