ಮಂಜೇಶ್ವರ: ರಿದಂ ಕಲ್ಚರಲ್ ವಿಂಗ್ಸ್ ನ ನೇತೃತ್ವದಲ್ಲಿ ನಡೆದ ದ್ವಿತೀಯ ವರ್ಷದ ಸ್ನೇಹಾಂಜಲಿ ಸೀಸನ್ -2 ಎಂಬ ಸಂಗೀತ ಸ್ಪರ್ಧೆಯು ಕನಿಲದ ಇಂಚರಾ ಸ್ಟುಡಿಯೋದಲ್ಲಿ ಗ್ರಾಂಡ್ ಫೀನಾಲೆಯ ಮೂಲಕ
ಸಂಪನ್ನಗೊಂಡಿತು.
ಕೋವಿಡ್19 ನಿಬಂಧನೆಗಳಿಂದಾಗಿ ಈ ಬಾರಿ ವಾಟ್ಸಪ್ ಆನ್ ಲೈನ್ ಆಡಿಯೋ ಸಂಗೀತ ಸ್ಪರ್ಧೆಯನ್ನಾಗಿ ಸ್ನೇಹಾಂಜಲಿ ಸೀಸನ್ -2ನ್ನು ನಡೆಸಲಾಗಿದ್ದು ಕಾಸರಗೋಡು ಜಿಲ್ಲೆಯ ಸುಮಾರು 150 ಮಂದಿ ಗಾಯಕರು ಪ್ರಥಮ ಹಂತಕ್ಕೆ ಹೆಸರು ನೊಂದಾಯಿಸಿದ್ದರು.
ಬಳಿಕ ವಾಟ್ಸಪ್ ಆನ್ ಲೈನ್ ಮೂಲಕ ಆಡೀಯೋ ಸಂಗೀತ ಸ್ಪರ್ಧೆ ನಡೆದಿದ್ದು ಸಂಗೀತ ಶಿಕ್ಷಕಿ,ಗಾಯಕಿ ಪ್ರಜ್ಞಾ ನಾಯಕ್, ಸಂಗೀತ ನಿರ್ದೇಶಕ ಕೇಶವ ಕನಿಲ,ಸಾಹಿತಿ ಹರೀಶ್ ಕುಂಬಳೆ,ಗಾಯಕಿ ದೀಕ್ಷಾ ಶೆಟ್ಟಿ ಆನ್ ಲೈನ್ ತೀರ್ಪುಗಾರರಾಗಿ ಪೈನಲ್ ಹಂತಕ್ಕೆ ಆರು ಮಂದಿ ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಿದ್ದರು.
ಇದರಂತೆ ಕೋವಿಡ್19 ಸರ್ಕಾರದ ನಿಬಂಧನೆಗಳೊಂದಿಗೆ ಸ್ನೇಹಾಂಜಲಿ ಸೀಸನ್ -2 ರ ಗ್ರೇಂಡ್ ಫಿನಾಲೆ ರಿಯಾಲಿಟಿ ಶೋ ಇಂಚರಾ ಸ್ಟುಡಿಯೋದಲ್ಲಿ ಏರ್ಪಡಿಸಲಾಗಿತ್ತು.
ಫೈನಲ್ ಹಂತದ ಐದು ಗಾಯಕ ಸ್ಪರ್ಧಾರ್ಥಿಗಳಲ್ಲಿ ಬದಿಯಡ್ಕ ಸಮೀಪದ ಪೆರಡಾಲದ ವಿಷ್ಣು ಶರ್ಮಾ ಪ್ರಥಮ ಸ್ಥಾನ ಗಳಿಸಿಕೊಂಡರು. ಚೇರ್ಕೂಡ್ಲು ಪಂಜರಿಕೆಯ ಸುಧಾಕರ ಭಟ್-ವಿನೀತ ದಂಪತಿಗಳ ಪುತ್ರನಾದ ವಿಷ್ಣು ಶರ್ಮ ಕಾಸರಗೋಡು ಸರಕಾರಿ ಕಾಲೇಜು ವಿದ್ಯಾರ್ಥಿಯಾಗಿದ್ದು ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮರ ಬಳಿ ಸಂಗೀತಾಭ್ಯಾಸ ನಡೆಸಿದ್ದರು.
ಸ್ನೇಹಾಂಜಲಿ ಸೀಸನ್-2ನ ದ್ವಿತೀಯ ಸ್ಥಾನವನ್ನು ಮೀಯಪದವು ಸಮೀಪದ ಬೆಜ್ಜಂಗಳದ ವಿಕ್ರಮ್ ಭಾರದ್ವಾಜ್ ಪಡೆದುಕೊಂಡರು. ಮೀಯಪದವು ವಿದ್ಯಾವರ್ಧಕ ಶಾಲಾ ವಿದ್ಯಾರ್ಥಿಯಾದ ವಿಕ್ರಮ್ ವೆಂಕಟೇಶ್ ಪ್ರಸಾದ್-ಸ್ವಪ್ನಾ ದಂಪತಿಗಳ ಪುತ್ರನಾಗಿದ್ದು ಶಿಲ್ಪಾ ಭಟ್ ಹಾಗೂ ಟಿ.ವಿ.ಗಿರಿ ಅವರ ಬಳಿ ಸಂಗೀತ ಅಭ್ಯಾಸಿಸುತ್ತಿದ್ದಾನೆ.
ಸ್ಪರ್ಧೆಯ ತೃತೀಯ ಸ್ಥಾನವನ್ನು ಮಂಜುಷಾ ಪೆರ್ಲ ಗಳಿಸಿಕೊಂಡಿದ್ದಾರೆ. ಮನೋಜ್ -ಉಷಾ ದಂಪತಿಗಳ ಪುತ್ರಿಯಾದ ಮಂಜುಷಾ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿಯಾಗಿದ್ದಾಳೆ. ಸಂಗೀತ ಸ್ಪರ್ಧೆಯ ಬೆಸ್ಟ್ ಸಿಂಗರ್ ಆಗಿ ಅನನ್ಯ ಭಟ್, ಬೆಸ್ಟ್ ಫರ್ ಫೋರ್ಮರ್ ಆಗಿ ಚಿಂತನಾ ಅಯ್ಕೆಗೊಂಡರು.
ಗಾಯಕರಾದ ಕೇಶವ ಕನಿಲ,ಪತ್ರಕರ್ತ,ಸಂಘಟಕ ಜಯಮಣಿಯಂಪಾರೆ ಹಾಗೂ ಸಂಗಿತ ಶಿಕ್ಷಕಿ,ಗಾಯಕಿ ಪ್ರಜ್ಞಾ ನಾಯಕ್ ತೀರ್ಪುಗಾರರಾಗಿ ಸಹಕರಿಸಿದರು.
ಅಂತರ್ ದೇಶಿಯ ಮಟ್ಟದ ಖ್ಯಾತ ಸಂಗೀತ ನಿರ್ದೇಶಕ ,ಗಾಯಕ ಸಿದ್ದೀಕ್ ಮಂಜೇಶ್ವರ ನಿರ್ದೇಶನದಲ್ಲಿ ಜರುಗಿದ ಸಂಗೀತ ರಿಯಾಲಿಟಿ ಶೋದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ರಿದಂ ಕಲ್ಚರಲ್ ವಿಂಗ್ಸ್ ಅಧ್ಯಕ್ಷರಾದ ಶಿವಶಂಕರ ಕಟ್ಟೆ ಬಜಾರ್,ಕನ್ವೀನರ್ ನಿತಿನ್ ಕನಿಲ,ಕಾರ್ಯದರ್ಶಿ ಎನ್.ಕೆ.ಕುಲಾಲ್ ಬೇಕೂರು,ಗಾಯಕರಾದ ಸುಚಿನ್ ಮಂಗಲ್ಪಾಡಿ,ಕಾರ್ತಿಕ್ ಲಾಲ್ ಬಾಗ್,,ಶಿವ ಕುಮಾರ್,ರವಿಚಂದ್ರ,ಗಗನ್ ಕಡಂಬಾರ್,ರಿದಂ ತಂಡದ ಗಾಯಕರು ಮತ್ತು ಇಂಚರಾ ಮೇಲೋಡಿಸ್ ಗಾಯಕರು,ಸ್ಪರ್ಧಾಳುಗಳ ಪೋಷಕರೂ, ಉಪಸ್ಥಿತರಿದ್ದರು.



