ವಿಟ್ಲ: ಸಾಮಾಜಿಕ ಹರಿಕಾರ, ಅಳಿಕೆ ಶ್ರೀಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು.ಗಂಗಾಧರ ಭಟ್(90)ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯ ಕಾರಣ ದೇರಳಕಟ್ಟೆಯ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ವಿಧಿವಶರಾದರು.
ಶ್ರೀಸತ್ಯಸಾಯಿ ಬಾಬಾರ ಭಕ್ತರಾಗಿ, ಮಡಿಯಾಲ ನಾರಾಯಣ ಭಟ್ ಅವರ ಜೊತೆಗೆ ಅಳಿಕೆ ಹಾಗೂ ಮುದ್ದೇನಹಳ್ಳಿಯಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಉತ್ತಮ ವಾಗ್ಮಿಯಾಗಿದ್ದ ಯು.ಗಂಗಾಧರ ಭಟ್ ಸಾಮಾಜಿಕ ಐಕ್ಯತೆ, ಸುಧಾರಣೆ ಹಾಗೂ ಸಾಮರಸ್ಯಗಳಿಗೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಅಳಿಕೆಯವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿವೆ.


