ಬಹುಮಹಡಿ ಕಟ್ಟಡದ ಮೂರು ಮಹಡಿಗಳು ಕುಸಿದುಬಿದ್ದ ನಂತರ ಇದುವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಸಚಿವ ಅದಿತಿ ಎಸ್ ತತ್ಕರೆ ಅವರು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಬಹುಮಹಡಿ ಕಟ್ಟಡದೊಳಗೆ ಸುಮಾರು 200 ಮಂದಿ ಸಿಲುಕಿರುವ ಸಾಧ್ಯತೆ ಇದೆ ತತ್ಕರೆ ಅವರು ತಿಳಿಸಿದ್ದಾರೆ.
ಇದುವರೆಗೆ 15 ಜನರನ್ನು ರಕ್ಷಿಸಲಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಐದು ರಕ್ಷಣಾ ತಂಡಗಳಿದ್ದು, ಹೆಚ್ಚಿನ ರಕ್ಷಣಾ ತಂಡಗಳು ಬರುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.
ಮಹದ್ ಕಜಲಪುರ್ ಪ್ರದೇಶದಲ್ಲಿರುವ ಈ ಬಹುಮಹಡಿ ಕಟ್ಟದಲ್ಲಿ 45 ಫ್ಲಾಟ್ ಗಳು ಇದ್ದು, ಸುಮಾರು 100 ಜನ ವಾಸವಾಗಿದ್ದರು. ಇಂದು ಸಂಜೆ 7 ಗಂಟೆಯ ಸುಮಾರಿಗೆ ಕಟ್ಟಡ ಕುಸಿದು ಬಿದ್ದಿದೆ ಎಂದು ರಾಯಗಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

