HEALTH TIPS

ಯುವಮೋರ್ಚಾದಿಂದ ಕೆ.ಎಸ್.ಇ.ಬಿ.ಮಾರ್ಚ್ ಇಂದು

      ಮಂಜೇಶ್ವರ:
ವರ್ಕಾಡಿ ಸಮೀಪದ ಬೋಳಂತಕೋಡಿಯಲ್ಲಿ ಮನೆ ಹಿಂಭಾಗದಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ-ಮಗು ಮರಣಹೊಂದಿದ ವಿಷಯದಲ್ಲಿ ಸ್ಪಷ್ಟವಾಗಿ ವರ್ಕಾಡಿ ಭಾಗದ ವಿದ್ಯುತ್ ಇಲಾಖೆಯ ಅಧಿಕಾರಿಗಳ ಅನಾಸ್ಥೆ ಕಾರಣವಾಗಿದೆ ಎಂದು ಬಿಜೆಪಿ ಯುವಮೋರ್ಚಾ ಆರೋಪಿಸಿದೆ. 
      ಹಲವಾರು ಸಮಯದಿಂದ ಇಂತಹ ಸಮಸ್ಯೆಗಳ ಬಗ್ಗೆ ಇಲಾಖೆಯ ಗಮನಕ್ಕೆ ತಂದರೂ ಕಾರ್ಯಪ್ರವೃತ್ತವಾಗದೇ ಇದ್ದದ್ದು ಈ ದೊಡ್ಡ ದುರಂತಕ್ಕೆ ಪ್ರಮುಖ ಕಾರಣ ಎಂದು ಅದು ತಿಳಿಸಿದೆ. 

      ಇದು ಈ ಭಾಗದಲ್ಲಿ ಇದೇ ಮೊದಲಲ್ಲ, ಹಲವು ವರ್ಷಗಳ ಹಿಂದೆ ಬಜಿಲಕರಿಯ ದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕೆಲವು ಮುಗ್ಧ ಮಕ್ಕಳು ಇದೇ ರೀತಿಯಲ್ಲಿ ಮೃತರಾಗಿದ್ದು, ಇದಲ್ಲದೆ ಕೆಲವು ಮರಣಗಳು ಇದೇ ರೀತಿಯಲ್ಲಿ ನಡೆದುಹೋಗಿದೆ. 

    ಇಷ್ಟಾದರೂ ಇಲ್ಲಿನ ಅಧಿಕಾರಿಗಳು ದುರಸ್ತಿ ಹಾಗೂ ಅಪಘಾತ ವಲಯಗಳಲ್ಲಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇನ್ನಷ್ಟು ದುರಂತಗಳು ನಡೆಯಲು ಅವಕಾಶ ಮಾಡಿಕೊಡುತ್ತಿದ್ದಾರೆ.
     ಕೂಡಲೇ ಈ ಭಾಗದ ಇಲಾಖೆಯ ಅಧಿಕಾರಿಗಳು ಇನ್ನಾದರೂ ಎಚ್ಚರಗೊಂಡು ಇಂತಹ ಅಪಘಾತ ಇನ್ನು ಮುಂದೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಮಂಜೇಶ್ವರ ಮಂಡಲ ನೇತೃತ್ವದಲ್ಲಿ  ಇಂದು( 25/8/ಮಂಗಳವಾರ) ಬೆಳಿಗ್ಗೆ 10 ಗಂಟೆಗೆ, ವರ್ಕಾಡಿ ವಿದ್ಯುತ್
 ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಿದೆ ಎಂದು
ಯುವಮೋರ್ಚಾ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries