ಮಂಜೇಶ್ವರ:ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂಬ
ಕೇಂದ್ರ ಸರ್ಕಾರದ ನಿರ್ದೇಶವಿದ್ದರೂ ಕೇರಳ ಸರಕಾರ ಅದರ ವಿರುದ್ಧವಾಗಿ ಕರ್ನಾಟಕಕ್ಕೆ ಹೋಗಲು ಪಾಸ್ ಮೂಲಕ ನಿಯಂತ್ರಣ ಮಾಡುವ ಕ್ರಮದ ವಿರುದ್ಧ ಬಿಜೆಪಿ ಇಂದು ಆಗಸ್ಟ್ 25ರಿಂದ ಪಾಸ್ ಉಲ್ಲಂಘನಾ ಆಂದೋಲನ ಆರಂಭಿಸಿತು.
ಅನಗತ್ಯ ಪಾಸು ಮತ್ತು ನಿಯಂತ್ರಣ ಹೇರುವುದರಿಂದ ನೂರಾರು ಮಂದಿ ತಮ್ಮ ಉದ್ಯೋಗ ಮತ್ತು ವ್ಯಾಪಾರ ನಡೆಸಲಾಗದೆ ಕಷ್ಟಪಡುತ್ತಿದ್ದಾರೆ. ಆದರೂ ಕರ್ನಾಟಕಕ್ಕೆ ಮುಕ್ತ ಪ್ರವೇಶ ನಿಷೇಧಿಸಿರುವ ಕೇರಳ ರಾಜ್ಯ ಸರಕಾರದ ನಿಲುವಿನ ವಿರುದ್ಧ ಉಗ್ರ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮೇಲ್ಪಟ್ಟು ನೇತಾರರ ಸಭೆ ಈ ಬಗ್ಗೆ ನಿರ್ಣಯ ಕೈಗೊಂಡಿದೆ. ಇಂದು ಮಂಗಳವಾರ ಬೆಳಿಗ್ಗೆ ನಡೆದ ಪ್ರತಿ ಭಟನಾ ಆಂದೋಲನವನ್ನು ತಲಪಾಡಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಮಣಿಕಂಠ ರೈ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ನೇತಾರರಾದ ಸುಧಾಮ ಗೋ ಸಾಡ, ಪದ್ಮನಾಭ ಕಡಪ್ಪುರ, ಯಾದವ ಬಡಾಜೆ ಮೊದಲಾದವರು ನೇತ್ರತ್ವ ನೀಡಿದರು.

