ಕಾಸರಗೋಡು: ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಂಬಂಧ ಸಂಭ್ರಮಾಚರಣೆ ಇತ್ಯಾದಿಗಳು ನಡೆಸಕೂಡದು. ಜಿಲ್ಲೆಯಲ್ಲಿ ಜಿಮ್ ಗಳನ್ನು ತೆರೆಯಲು ಅನುಮತಿ ನೀಡುವಂತೆ ಮನವಿಗಳು ಸತತವಾಗಿ ಸಲ್ಲಿಕೆಯಾಗುತ್ತಿದ್ದರೂ, ರಾಜ್ಯ ಸರಕಾರ ಮಟ್ಟದಲ್ಲಿ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ. ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ಲಭಿಸಿತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಡಿ.ಡಿ.ಇ. ಸಲ್ಲಿಸಿರುವ ವರದಿ ಪರಿಶೀಲಿಸಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಈ ವಿಚಾರ ಪರಿಶೀಲನೆಯಲ್ಲಿದ್ದು, ಅಂತಿಮ ತೀರ್ಪು ಬಂದ ಮೇಲೆ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಕಂಟೈ ನ್ಮೆಂಟ್ ಝೋನ್ಗಳಲ್ಲಿ ಕಚೇರಿಗಳೂ, ಬ್ಯಾಂಕ್ ಗಳೂ ಚಟುವಟಿಕೆ ನಡೆಸಬಹುದು ಎಂದು ಅವರು ನುಡಿದರು. ಕಾಸರಗೋಡು ನಗರದಲ್ಲಿ ಚಟುವಟಿಕೆ ನಡೆಸುತ್ತಿರುವ ರಬ್ಬರ್ ಬೋರ್ಡ್ ಕಚೇರಿಯನ್ನು ಕಂಟೈ ನ್ಮೆಂಟ್ ಜೋನ್ ಎಂದು ತಿಳಿಸಿ ಮುಚ್ಚುಗಡೆ ನಡೆಸಿದ ಕ್ರಮ ತಪ್ಪು ಎಂದು ಜಿಲ್ಲಾಧಿಕಾರಿ ಹೇಳಿದರು. ಇಂಥಾ ಕಚೇರಿಗಳ ಚಟುವಟಿಕೆಗಳನ್ನು ನಿಷೇಧಿಸಿಲ್ಲ. ಯಾವುದಾದರೂ ಕಚೇರಿಯಲ್ಲಿ ಕೊರೋನಾ ಪಾಸಿಟಿವ್ ಕೇಸ್ ವರದಿಯಾದಲ್ಲಿ ಆರೋಗ್ಯ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ಮಾತ್ರ ಆ ವ್ಯಕ್ತಿಯ ಸಂಪರ್ಕ ಹೊಂದಿದ್ದವರು ಕ್ವಾರೆಂ ಟೈನ್ ಗೆ ತೆರಳಬೇಕಾಗಿದೆ. ರೋಗಾಣುಮುಕ್ತ ಚಟುವಟಿಕೆ ನಡೆಸಿದ ನಂತರ ಕಚೇರಿ ತೆರೆಯಬಹುದಾಗಿದೆ ಎಂದರು.
ಕಂಟೈ ನ್ಮೆಂಟ್ ಝೋನ್ ಪ್ರದೇಶಗಳ ಕಚೇರಿಗಳ ಚಟುವಟಿಕೆಗಳ ಅಂಗವಾಗಿ ಸಭೆ ಸೇರಬಹುದು. ವೀಡೀಯೋ ಕಾನ್ ಫೆರೆನ್ಸ್ ಮೂಲಕದ ಸಭೆ ನಡೆಸುವ ಬಗ್ಗೆ ಗರಿಷ್ಠ ಮಟ್ಟದ ಯತ್ನ ನಡೆಸಬೇಕು. ಅದು ಅಸಾಧ್ಯವಾದಲ್ಲಿ ಮಾತ್ರ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿ ಸಭೆ ನಡೆಸಬೇಕು. ಕಚೇರಿ ಚಟುವಟಿಕೆಗಳವೇಳೆಯೂ ಮಾಸ್ಕ್, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತಾದಿ ಕಡ್ಡಾಯ. ಯಾವ ಕಾರಣಕ್ಕೂ ಎ.ಸಿ. ಬಳಸಕೂಡದು ಎಂದವರು ನುಡಿದರು.
ಅಂತರ್ ರಾಜ್ಯ ಬಸ್ ಸಂಚಾರಕ್ಕೆ ರಾಜ್ಯ ಸರಕಾರದ ಅನುಮತಿ ಇನ್ನೂ ಲಭಿಸಿಲ್ಲ. ಈ ಕಾರಣದಿಂದ ಮಂಗಳೂರಿನಲ್ಲಿ ನೌಕರಿ ನಡೆಸುತ್ತಿರುವವರಿಗಾಗಿ ನಿತ್ಯ ಸಂಚಾರಕ್ಕೆ ಬಸ್ ಸೌಲಭ್ಯಕ್ಕೆ ಅನುಮತಿಯಿಲ್ಲ ಎಂದರು.
ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಮಂದಿಗೆ ಕೋವಿಡ್ ತಪಾಸಣೆ ಕಡ್ಡಾಯ ಮಾಡಬೇಕಿಲ್ಲ ಎಂದು ರಾಜ್ಯ ಸರಕಾರ ಆದೇಶಿಸಿದೆ. ಆದರೆ ಅವರು ಯಾವ ಕಡೆಯಿಂದ ತೆರಳಿದ್ದಾರೋ, ಅದೇ ದಡಕ್ಕೆ ಮರಳಿ ಬರಬೇಕಿರುವುದು ಕಡ್ಡಾಯ ಎಂದು ಸಭೆ ತಿಳಿಸಿದೆ.


