ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಮಧೂರು ಸರಕಾರಿ ಕಿರಿಯ ಬುನಾದಿ ಶಾಲೆ(ಜಿ.ಜೆ.ಬಿ.ಎಸ್.)ಯ ನೂತನ ಬ್ಲಾಕ್ ನಿರ್ಮಾಣಕ್ಕೆ ಒಂದು ಕೋಟಿ ರೂ.ಮಂಜೂರು ಮಾಡಲಾಗಿದೆ.
6 ತರಗತಿ ಕೊಠಡಿಗಳೊಂದಿಗೆ ನಿರ್ಮಾಣಗೊಳ್ಳುವ ಈ ಬ್ಲೋಕ್ ಗೆ ಆಡಳಿತೆ ಅನುಮತಿ ನೀಡಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂ., ಮಧೂರು ಗ್ರಾಮ ಪಂಚಾಯತ್ ನ ಪಾಲು ರೂಪದಲ್ಲಿ ಒಂದು ಲಕ್ಷ ರೂ., ಉಳಿದ 74 ಲಕ್ಷ ರೂ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಧಿಯಿಂದ ಮಂಜೂರು ಮಾಡಲಾಗುವುದು.
ಲೋಕೋಪಯೋಗಿ ಕಟ್ಟಡ ನಿರ್ಮಾಣ ವಿಭಾಗ ಕಾರ್ಯಕಾರಿ ಇಂಜಿನಿಯರ್ ನಿರ್ವಹಣೆ ಹೊಣೆಹೊತ್ತಿರುವ ಈ ಯೋಜನೆಯಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಗೊಳ್ಳಲಿದೆ. ನೂತನ ಬ್ಲೋಕ್ ನಿರ್ಮಾಣ 10 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿರುವರು.


