HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ವಿಸ್ತೃತಗೊಂಡಿರುವ ಇ-ಸಂಜೀವಿನಿ ಸೇವೆ

        

     ಕಾಸರಗೋಡು: ಇ-ಸಂಜೀವಿನಿ ಸೇವೆ ಕಾಸರಗೋಡು ಜಿಲ್ಲೆಯಲ್ಲಿ ವಿಸ್ತೃತಗೊಂಡಿದೆ. 

         ಕೋವಿಡ್ ಸೋಂಕು ಹರಡುತ್ತಿರುವ ವೇಳೆ ಮನೆಗಳಲ್ಲಿದ್ದುಕೊಂಡೇ ಆನ್ ಲೈನ್ ಮೂಲಕ ವೈದ್ಯರ ಸೇವೆ ಪಡೆಯುವ ನಿಟ್ಟಿನಲ್ಲಿ ಆರಂಭಿಸಲಾದ ಸೇವೆಯಿದು. ಈ ಸೇವೆಯನ್ನು ಇನ್ನಷ್ಟು ಜನಪರಗೊಳಿಸುವ ಮತ್ತು ಸೂಕ್ತ ಪ್ರಚಾರ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

         ಸಾರ್ವಜನಿಕರು ಇ-ಸಂಜೀವಿನಿ ಸೇವೆ ಬಳಸುವ ಮೂಲಕ ಅನಾವಶ್ಯಕವಾಗೊ ಆಸ್ಪತ್ರೆಗಳಿಗೆ ಭೇಟಿ ನೀಡುವ ಪ್ರಮೇಯವನ್ನು ಕೈಬಿಡಬೇಕು. ವಯೋವೃದ್ಧರು, ಶಾಶ್ವತ ರೋಗಿಗಳು ಮೊದಲಾದವರಿಗೆ ಈ ಸೇವೆ ತುಂಬ ಪ್ರಯೋಜನಕಾರಿಯಾಗಿದೆ. ಈ ವಿಭಾಗಕ್ಕೆ ಸೇರಿರುವ ರೋಗಿಗಳು ಈ ಸೇವೆ ಬಳಸುವ ಮೂಲಕ ಡಾಕ್ಟರರು ಸೂಚಿಸಿದಾಗ ಮಾತ್ರ ಆಸ್ಪತ್ರೆಗೆ ತೆರಳಬೇಕು. ಈ ಸೇವೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿ ಲಭಿಸಿರುವ ವೈದ್ಯಕೀಯ ತಂಡವನ್ನು ಕಾಸರಗೋಡು ಜಿಲ್ಲೆಯಲ್ಲಿ ಸಜ್ಜುಗೊಳಿಸಲಾಗಿದೆ ಎಂದವರು ನುಡಿದರು. 

      ಇ-ಸಂಜೀವಿನಿ ಯೋಜನೆ ಮೂಲಕ ಸ್ಪಷ್ಯಲಿಸ್ಟ್ ಡಾಕ್ಟರರ ಸೇವೆಯೂ ಲಭ್ಯವಿದೆ. ಈ ಸಂಬಂಧ ಮುಂಬರುವ ದಿನಗಳಲ್ಲಿ ಜಿಲ್ಲೆಯ ಕ್ಷೇತ್ರ ಮಟ್ಟದ ಆರೋಗ್ಯ ಕಾರ್ಯಕರ್ತರಿಗೂ ತರಬೇತಿ ನೀಡಲಾಗುವುದು. ಈ ಯೋಜನೆಯ ಜಿಲ್ಲಾ ನೋಡೆಲ್ ಅಧಿಕಾರಿಯಾಗಿ ಡಾ.ವಿ.ವಿ.ಸುಷೋಬ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದರು. 

        ಈ-ಸಂಜೀವಿನಿ ಸೇವೆ ಬಳಕೆಯ ನಿಟ್ಟಿಒನಲ್ಲಿ ಇಂಟರ್ ನೆಟ್ ಸೌಲಭ್ಯವಿರುವ ಮೊಬೈಲ್ ಫೆÇೀನ್ ಯಾ ಲಾಪ್ ಟಾಪ್ ಇರಬೇಕು.  ' esanjeevaniopd.in ' ಎಂಬ ಸೈಟ್ ಮೂಲಕ ಸೇವೆ ಲಭಿಸುತ್ತದೆ. ಈ ಪುಟ ತೆರೆದ ನಂತರ ರೋಗಿಯ ಪೂರ್ಣ ಮಾಹಿತಿ ನಮೂದಿಸಬೇಕು. ಪ್ರಯೋಗಾಲಯ ವರದಿ, ಎಕ್ಸ್ ರೇ, ಸ್ಕ್ಯಾನಿಂಗ್ ಸಹಿತ ಮೆಡಿಕಲ್ ರಿಪೆÇೀರ್ಟ್ ಅಪ್ ಲೋಡ್ ನಡೆಸುವ ಸೌಲಭ್ಯವೂ ಇದರಲ್ಲಿದೆ. ವೀಡಿಯೋ ಕಾಲ್, ವಾಯಿಸ್ ಕಾಲ್, ಚಾಟಿಂಗ್ ಇತ್ಯಾದಿಗಳ ಮೂಲಕ ಡಾಕ್ಟರರೊಂದಿಗೆ ಸಂವಾದ ನಡೆಸಬಹುದಾಗಿದೆ. ನಿಮಗೆ ಅಗತ್ಯವಿರುವ ಔಷಧಗಳ ರಶೀದಿಯನ್ನು ಸಿದ್ಧ ಪಡಿಸಿ ಇ-ಸಂಜೀವಿನಿ ಪೆÇೀರ್ಟಲ್ ಮೂಲಕ ಅಪ್ ಲೋಡ್ ನಡೆಸಲಾಗುವುದು. ಇದನ್ನು ಡೌನ್ ಲೋಡ್ ನಡೆಸಿ ಸಮೀಪದ ಸರಕಾರಿ ಆರೋಗ್ಯ ಸಂಸ್ಥೆಗೆ ತೆರಳಿ ಔಷಧ ಪಡೆದುಕೊಳ್ಳಬಹುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries