ಕಾಸರಗೋಡು: "ನಮ್ಮೊಳಗಿದೆ ಓಣಂ" ಎಂಬ ಕಿರುಚಿತ್ರದ ಬಿಡುಗಡೆ ನಡೆಯಿತು. ಓಣಂ ಹಬ್ಬಾಚರಣೆ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಮೆಡಿಕಲ್ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ ಜಂಟಿಯಾಗಿ ನಿರ್ಮಿಸಿರುವ ಜನಜಾಗೃತಿ ಮೂಡಿಸುವ ಕಿರುಚಿತ್ರ ಇದಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧೂಸೂದನನ್ ಎಂ., ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್, ಉಪಸ್ಥಿತರಿದ್ದರು.

