HEALTH TIPS

ಕೋವಿಡ್ ನಿಯಂತ್ರಣ: ಮಾದರಿಯಾದ ಬೇಡಗಂ ಗ್ರಾಮಪಂಚಾಯತ್

     
          ಕಾಸರಗೋಡು: ಕೋವಿಡ್ ಸೋಂಕು ನಿಯಂತ್ರಣದ ಎರಡನೇ ಹಂತದ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲೆಯ ಬೇಡಗಂ ಗ್ರಾಮಪಂಚಾಯತ್ ಇತರರಿಗೆ ಮಾದರಿಯಾಗಿದೆ. 
      ರಾಜ್ಯ ಸರಕಾರದ "ಸನ್ನದ್ಧಂ" ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿ ಪ್ರತಿರೋಧ ಚಟುವಟಿಕೆಗಳಿಗೆ ರಂಗಕ್ಕಿಳಿದಿರುವ ಸ್ವಯಂ ಸೇವಕರನ್ನು ವಿಭಿನ್ನ ಹೆಸರುಗಳಲ್ಲಿ ವಿಂಗಡಿಸಿ ಪ್ರತ್ಯೇಕ ಜವಾಬ್ದಾರಿ ವಹಿಸಿ ತೊಡಗಿಸಿಕೊಂಡಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ವಿಚಾರವಾಗಿದೆ. ಮೆಡಿಸ್ಕ್ಯೂಟಿ, ರೇಷನ್ ಫ್ರೆಂಡ್ಸ್, ಸಾಮಾಜಿಕ ಅಡುಗೆಮನೆ, ಹರಿತಕ್ರಿಯಾ ಸೇನೆ, ಕುಟುಂಬಶ್ರೀ, ಪಾಲಿಯೇಟಿವ್...ಹೀಗೆ ನಾಡಿನ ಜನತೆಯ ನಾಡಿಯಾಗಿ ಕಾರ್ಯಕರ್ತರು ದುಡಿಯುತ್ತಿದ್ದಾರೆ. 
           ಮೆಡಿಸ್ಕ್ಯೂಟಿ: 
    ಮೆಡಿಸ್ಕ್ಯೂಟಿ ಎಂಬ ಹೆಸರಿನಲ್ಲಿ ಲಾಕ್ ಡೌನ್ ಆದೇಶ ಜಾರಿಯ ಹಿನ್ನೆಲೆಯಲ್ಲಿ ಮನೆಗಳಿಂದ ಹೊರಬರಲಾಗದ ಮಂದಿಗೆ ಮನೆಗಳಿಗೆ ಔಷಧ ತಲಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ತಂಡವೊಂದನ್ನು ರಚಿಸಲಾಗಿದೆ. ಪ್ರತಿದಿನ ಕಾಸರಗೋಡು, ಕಾಞಂಗಾಡ್ ಪೇಟೆಗಳಿಗೆ ತೆರಳಿ ಔಷಧಗಳನ್ನು ಖರೀದಿಸಿ ಮನೆಗಳಿಗೆ ತಲಪಿಸಲಾಗುತ್ತಿದೆ. ದಿನವೊಂದಕ್ಕೆ 8 ಸಾವಿರ ರೂ.ನಿಂದ 28 ಸಾವಿರ ರೂ. ಮೌಲ್ಯದ ಔಷಧಗಳನ್ನೂ ತಲಪಿಸಿದ ಸಂದರ್ಭಗಳಿವೆ. 2 ಸಾವಿರಕ್ಕೂ ಮಿಕ್ಕು ಮಂದಿ ಈ ತಂಡವನ್ನು ಆಶ್ರಯಿಸುತ್ತಿದ್ದಾರೆ. ಬೇಡಗಂ ಪಂಚಾಯತ್ ಮಟ್ಟದ ಯೂತ್ ಕಾರ್ಡಿನೇಷನ್ ಸಮಿತಿ ಈ ಚಟುವಟಿಕೆಗಳ ನೇತೃತ್ವ ವಹಿಸುತ್ತಿದೆ. 
           ರೇಷನ್ ಫ್ರೆಂಡ್ಸ್:
      ಪಡಿತರ ಸಾಮಾಗ್ರಿಗಳ ವಿತರಣೆ ಚಟುವಟಿಕೆ ಸುಗಮಗೊಳಿಸುವ ನಿಟ್ಟಿನಲ್ಲಿ ರೇಷನ್ ಫ್ರೆಂಡ್ಸ್ ಕಾರ್ಯಕರ್ತರ ತಂಡ ಕಾರ್ಯಪ್ರವೃತ್ತವಾಗಿದೆ. ಪಡಿತರ ಅಂಗಡಿಗಳಿಗೆ ಹೋಗಿ ಸಾಮಾಗ್ರಿ ಖರೀದಿ ಮಾಡಲು ಸಾಧ್ಯವಾಗದೇ ಇರುವ ಮಂದಿಗೆ ಮನೆಗಳಿಗೇ ಸಾಮಾಗ್ರಿ ತಲಪಿಸುವ ಕಾಯಕ ಇವರು ನಡೆಸುತ್ತಾರೆ. ಜೊತೆಗೆ ಸಿವಿಲ್ ಸಪ್ಲೈಸ್ ನ ಕಿಟ್ ಪ್ಯಾಕಿಂಗ್, ವಿತರಣೆ ಇತ್ಯಾದಿಗಳನ್ನು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಈ ತಂಡ ನಡೆಸಿದೆ. 
         ಸಾಮಾಜಿಕ ಅಡುಗೆಮನೆ:
   ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಸಾಮಾಜಿಕ ಅಡುಗೆಮನೆ 45 ದಿನಗಳ ಕಾಲ ಸತತ ಚಟುವಟಿಕೆ ನಡೆಸಿದೆ.ಇದಕ್ಕಾಗಿ 10 ಮಂದಿ ಹೊಣೆಹೊತ್ತಿದ್ದರು. 48 ಮಂದಿ ಸ್ವಯಂ ಸೇವಕರು ವಿತರಣೆ ಇತ್ಯಾದಿ ಚಟುವಟಿಕೆಗಳಿಗೆ ದುಡಿದಿದ್ದರು. ಈ ಅವಧಿಯಲ್ಲಿ ಪ್ರತಿದಿನ ಅಡುಗೆ ಸಿದ್ಧಪಡಿಸಿ, 11 ಸಾವಿರ ಭೋಜನ ಪೆÇಟ್ಟಣ ಸಿದ್ಧಪಡಿಸಿ, ಇತರರಾಜ್ಯಗಳಕಾರ್ಮಿಕರ ಸಹಿತ ಪಂಚಾಯತ್ ಮಟ್ಟದ ಅರ್ಹರಿಗೆ ವಿತರಣೆ ನಡೆಸಲಾಗಿದೆ. ಸ್ಥಳೀಯ ಸಂಘ-ಸಂಸ್ಥೆಗಳು ತರಕಾರಿ ಇತ್ಯಾದಿಗಳನ್ನು ಈ ತಂಡಕ್ಕೆ ಕೊಡುಗೆಯಾಗಿ ನೀಡಿವೆ. 
          ಸಮೃದ್ಧ ಕೇರಳಂ ಯೋಜನೆ:   
    ಕೋವಿಡ್ ತದನಂತರದ ದಿನಗಳಲ್ಲಿ ನಾಡಿನ ಆಹಾರ ಲಭ್ಯತೆಯ ದೂರದೃಷ್ಟಿಯೊಂದಿಗೆ ರಾಜ್ಯ ಸರಕಾರ ಜಾರಿಗೊಳಿಸಿರುವ ಜನಪರ ಯೋಜನೆ "ಸಮೃದ್ಧ ಕೇರಳಂ" ಇಲ್ಲಿ ಯಶಸ್ವಿಯಾಗಿ ಜಾರಿಗೊಂಡಿದೆ. ಈ ಯೋಜನೆಗಾಗಿ ಪಂಚಾಯತ್ ಮಟ್ಟದಲ್ಲಿ 316 ಎಕ್ರೆ ಜಾಗವನ್ನು ಪತ್ತೆಮಾಡಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಯೋಜನೆ ನಿರ್ವಹಣೆಗೆ ಬೇಡಗಂ ಅಗ್ರಿ ಯೂತ್ ಎಂಬ ತಂಡವನ್ನು ರಚಿಸಲಾಗಿದೆ.   
        ಬೇಸಗೆ ಮಳೆಯಲ್ಲಿ ಬೇಡಗಂ ಗ್ರಾಮಪಂಚಾಯತ್ ನಲ್ಲಿ ಸಾವಿರಾರು ಬಾಳೆ ಸಸಿಗಳು ಧರಾಶಾಯಿಯಾಗಿ ಕಂಗೆಟ್ಟಿದ್ದ ಕೃಷಿಕರ ಸಹಾಯಕ್ಕೆ ಗ್ರಾಮಪಂಚಾಯತ್ ಚಿಪ್ಸ್ ನಿರ್ಮಾಣ ಯೋಜನೆ ಜಾರಿಗೊಳಿಸಿದೆ. "ಬೇಡಗಂ ಚಿಪ್ಸ್" ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಈ ಉತ್ಪನ್ನದ ಮೊದಲ ಮರಾಟಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಚಾಲನೆ ನೀಡಿದರು.
         ಆನ್ ಲೈನ್ ಮೂಲಕ ಬೇಡಗಂ ಉತ್ಸವ: 
    ಜಾರಿಯಲ್ಲಿ ಕೋವಿಡ್ ಫಸ್ಟ್ ಲೈನ್ ಟ್ರೀಟ್ ಮೆಂಟ್ ಸೌಲಭ್ಯಕ್ಕಾಗಿ ಬೇಡಗಂ ತಾಲೂಕು ಆಸ್ಪತ್ರೆ ಆವರಣದ ಎಂಡೋಸಲ್ಫಾನ್ ಕಟ್ಟಡವನ್ನು ಸಜ್ಜುಗೊಳಿಸಲಾಗಿದೆ. ಜನಪರ ಒಗ್ಗಟ್ಟಿನ ಪ್ರತೀಕವಾಗಿ ನಡೆಸಲಾಗುತ್ತಿದ್ದ "ಬೇಡಗಂ ಉತ್ಸವ"ವನ್ನು ಈ ಬಾರಿ ಸೈಬರ್ ಸಧ್ಯತೆಗಳೊಂದಿಗೆ ನಡೆಸುವ ಯತ್ನಗಳು ನಡೆದಿದ್ದು, ಆ.7,8,9,10 ರಂದು ಕಲೋತ್ಸವ ಆನ್ ಲೈನ್ ರೂಪದಲ್ಲಿ ನಡೆಯಲಿವೆ. ಸಿದ್ಧತೆಗಳು ಮುಂದುವರಿಯುತ್ತಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries