ಕಾಸರಗೋಡು: ಕಂಪ್ಯೂಟರ್, ಮೊಬೈಲ್ ಪೆÇೀನ್ ತಂತ್ರಜ್ಞಾನ ಇತ್ಯಾದಿನೌಕರಿ ಕೇಂದ್ರಿತ ತರಬೇತಿ ಕೇಂದ್ರಗಳಿಗೆ ನಿಬಂಧನೆಗಳ ಅನ್ವಯ ಚಟುವಟಿಕೆಗೆ ಅನುಮತಿ ನೀಡಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿಯ ವೀಡೀಯೋ ಕಾನ್ ಫೆರೆನ್ಸ್ ನಲ್ಲಿ ನಿರ್ಧರಿಸಿದೆ. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಇವು ಚಟುವಟಿಕೆ ನಡೆಸಬೇಕು. ಈ ಬಗ್ಗೆ ತಪಾಸಣೆ ನಡೆಸಲು ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಐ.ಟಿ.ಐ.ಗಳ ಶಿಕ್ಷಕರನನು ನೇಮಿಸಲಾಗುವುದು. ಮೋಟಾರು ವಾಹನ ಚಾಲನೆ ತರಬೇತಿ ಕೇಂದ್ರಗಳೂ ಈ ರೀತಿ ಚಟುವಟಿಕೆ ನಡೆಸಬಹುದು. ಈ ಕೇಂದ್ರಗಳು ನಿಬಂಧನೆಗಳನ್ನು ಪಲಿಸುತ್ತಿವೆಯೇ ಎಂಬ ಬಗ್ಗೆ ಆರ್.ಟಿ.ಒ.ತಪಾಸಣೆ ನಡೆಸಬೇಕಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಮುಚ್ಚುಗಡೆ ಕ್ರಮ ಕೈಗೊಳ್ಳಬೇಕು ಎಂದು ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಿವಿಧ ಇಲಾಖೆ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.

