HEALTH TIPS

ಕೋವಿಡ್ ನಿಯಂತ್ರಣ ಉಪಕ್ರಮಗಳಿಗೆ ರಾಜ್ಯಕ್ಕೇ ಕಾಸರಗೋಡು ಮಾದರಿ-ಸ್ವತಃ ಸಿಎಂ ಪ್ರಶಂಸೆ

  

     ಕಾಸರಗೋಡು: ಕೋವಿಡ್ ಅವಧಿಯಲ್ಲಿ ಕಾಸರಗೋಡು ಜಿಲ್ಲಾಡಳಿತ ಪರಿಚಯಿಸಿದ ಮಾದರಿಯು ಮತ್ತೆ ರಾಜ್ಯ ಮಟ್ಟದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕೋವಿಡ್ ನಿಯಂತ್ರಣ ಪ್ರಕ್ರಿಯೆಗಳಿಗಾಗಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಾರಂಭಿಸಲಾದ  ಓಣಂಗೆ 'ನಮ್ಮ ಹೋಂ ಮ್ಯಾಡ್ ಹೂಗಳು'(ಮನೆಯಲ್ಲಿ ಬೆಳೆಸಿದ ಹೂಗಳು) ಎಂಬ ಪರಿಕಲ್ಪನೆಯನ್ನು ಅಂತಿಮವಾಗಿ ರಾಜ್ಯ ಮಟ್ಟದಲ್ಲಿ ಜಾರಿಗೆ ತರಲಾಗುತ್ತಿದೆ. 

       ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಜಿಲ್ಲಾ ಮಟ್ಟದ ಕರೋನಾ ಕೋರ್ ಸಮಿತಿ ಸಭೆಯಲ್ಲಿ 'ನಮ್ಮ ಹೋಂ ಮ್ಯಾಡ್ ಫ್ಲವರ್ಸ್ ಫಾರ್ ಓಣಂ' ಎಂಬ ನೂತನ ಪರಿಕಲ್ಪನೆಯನ್ನು ಪರಿಚಯಿಸಿದರು. ಕೋವಿಡ್ ನಿಯಂತ್ರಣ ಸಮಿತಿಯು ಈ ನಿರ್ಧಾರವನ್ನು ಅಂಗೀಕರಿಸಿದ್ದರು. ಇದರ ಬೆನ್ನಿಗೇ ಬುಧವಾರ ಸಂಜೆ ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರೆದ ಸಭೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ತನ್ನ ನೂತನ ಪ್ರಸ್ತಾವನೆಯನ್ನು ಮಂಡಿಸಿದರು. ಇದನ್ನು ಆಲಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಲೇ ಈ ಪರಿಕಲ್ಪನೆಯಿಂದ ಆಕರ್ಷಿತರಾಗಿ  ಅದನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು. ಕೋವಿಡ್ ರೋಗದ ತೀವ್ರಗತಿಯ ಹಿನ್ನೆಲೆಯಲ್ಲಿ ತಡೆಗಟ್ಟುವ ಕ್ರಮಗಳ ಭಾಗವಾಗಿ ಈ ಅಭಿಯಾನವನ್ನು ಜಾರಿಗೊಳಿಸಲಾಗುತ್ತಿದೆ. ಇತರ ರಾಜ್ಯಗಳಿಂದ ಬರುವ ಹೂವುಗಳ ಮೂಲಕ ಕೋವಿಡ್ ಹರಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.

              ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಕಾಸರಗೋಡು  ಮಾದರಿಗಳು:

    ಕೋವಿಡ್ ರೋಗ ಹರಡುವುದನ್ನು ನಿಯಂತ್ರಿಸಲು ನಿಖರವಾದ ಯೋಜನೆ  ಮತ್ತು ಅನುಷ್ಠಾನದ ಮೂಲಕ ಕಾಸರಗೋಡು ಜಿಲ್ಲೆ ಈಗಾಗಲೇ ಮಾದರಿಯಾಗಿ ಗಮನ ಸೆಳೆದಿದ್ದವು. ಕೋವಿಡ್ ಆರಂಭ ಕಾಲದಲ್ಲಿ  ಜಿಲ್ಲೆಯಲ್ಲಿ ಭದ್ರತೆಯ ಉಸ್ತುವಾರಿ ವಹಿಸಿದ್ದ ಐ.ಜಿ.ವಿಜಯ್ ಸಖಾರೆ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಯನ್ನು ನಂತರ ಕಣ್ಣೂರು ಮತ್ತು ರಾಜಧಾನಿ ತಿರುವನಂತಪುರಂ ಸೇರಿದಂತೆ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಯಿತು.

        ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದ್ದ ಸಂದರ್ಭ ಜಿಲ್ಲಾ ಪೆÇಲೀಸ್ ಕಚೇರಿಯ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಮನೆ-ಮನೆ ಅಗತ್ಯ ವಸ್ತುಗಳ(ಔಷಧಿ)ವಿತರಣಾ ಯೋಜನೆ ಸಹ ಅಗತ್ಯತೆಗಳನ್ನು ಖರೀದಿಸಲು ಮನೆಗಳಿಂದ ಹೊರಬರಲು ಹೆಣಗಾಡುತ್ತಿರುವವರಿಗೆ ಓಯಸಿಸ್ ನಂತೆ ಯಶಸ್ವಿಯಾಗಿದೆ. ಅದರ ಯಶಸ್ಸಿನ ನಂತರ, ಈ ಯೋಜನೆಯನ್ನು ಇತರ ಹಲವು ಜಿಲ್ಲೆಗಳು ಅನುಸರಿಸಿತು.

          ಕೋವಿಡ್ ನ ಮೂರನೇ ಹಂತದಲ್ಲಿ ಜಿಲ್ಲೆಯಲ್ಲಿ ಜಾರಿಗೆ ತರಲಾದ ಮ್ಯಾಶ್ ಯೋಜನೆಯು ರಾಜ್ಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮತ್ತೊಂದು ಯೋಜನೆಯಾಗಿದೆ. ಯೋಜನೆಯಡಿ, ಕೋವಿಡ್ ಜಿಲ್ಲಾ ಪಂಚಾಯಿತಿಗಳ ಎಲ್ಲಾ ವಾರ್ಡ್‍ಗಳಲ್ಲಿ ಶಿಕ್ಷಕರನ್ನು ಜಾಗೃತಿಗಾಗಿ ನೇಮಿಸಿಕೊಳ್ಳಲಾಗಿತ್ತು. ಮಾಸ್ಕ್ ಮತ್ತು ಸ್ಯಾನಿಟೈಜರ್‍ಗಳ ಬಳಕೆ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಬಗ್ಗೆ ಶಿಕ್ಷಕರು ನಿರಂತರವಾಗಿ ಸಾರ್ವಜನಿಕರಿಗೆ ಶಿಕ್ಷಣ ನೀಡುತ್ತಿದ್ದಾರೆ.

     ಕೋವಿಡ್ ದೃಢಪಡಿಸಿದ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡುವ ಆರೋಗ್ಯ ಇಲಾಖೆಯ ಯೋಜನೆಯ ಅನುಷ್ಠಾನವನ್ನು ಮೊದಲ ಬಾರಿಗೆ ಕಾಸರಗೋಡು ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ 150 ಕ್ಕೂ ಹೆಚ್ಚು ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇಂತಹ ಅನುಕರಣೀಯ ಮತ್ತು ಅನುಸರಣೀಯ ಚಟುವಟಿಕೆಗಳನ್ನು ಜಾರಿಗೆ ತರಲು ಜಿಲ್ಲಾಧಿಕಾರಿ ಡಾ.ಡಿ.ಸಜೀತ್ ಬಾಬು ಮುಂದಾಗಿದ್ದರು. ವಿಶೇಷವೆಂದರೆ ಕೋವಿಡ್ ಸಂಕಷ್ಟದ ಸಮಯದಲ್ಲೂ ವಾರ್ಷಿಕ ಯೋಜನೆಗಳ ಅನುಷ್ಠಾನ, ಹೊಸ ಯೋಜನೆಗಳ ತಯಾರಿಯಲ್ಲೂ ಕಾಸರಗೋಡು ಜಿಲ್ಲೆ ಯಶಸ್ವಿಯಾಗಿ ನಿರ್ವಹಿಸಿರುವುದೂ ಗಮನಾರ್ಹವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries