ಮುಳ್ಳೇರಿಯ: ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬೇಕಲ ಕೊಟಿಕುಳಂನ ಕರಾವಳಿ ಪ್ರದೇಶದ ಮೀನುಗಾರಿಕೆಯ ವರ್ಗ ತೀವ್ರ ಸಂಕಷ್ಟಕ್ಕೀಡಾಗಿದ್ದು ಅಕ್ಕರ ಫೌಂಡೇಶನ್ ಅಧ್ಯಕ್ಷ ಅಕ್ಕರ ಅಬ್ದುಲ್ ಅಜೀಜ್ ಹಾಜಿ ಅವರು ನೆರವು ನೀಡುವುದರ ಮೂಲಕ ಗಮನ ಸೆಳೆದಿದ್ದಾರೆ.
ಫೌಂಡೇಶನ್ ನ ಮೂಲಕ ಅಬ್ದುಲ್ ಅಜೀಜ್ ಹಾಜಿ ಅವರು 350 ಓಣಂ ಕಿಟ್ ಗಳನ್ನು ಹಾಗೂ ಕರೋನಾ ಹೆಲ್ತ್ ಕಿಟ್ (ಮಾಸ್ಕ್, ಮೊಟ್ಟೆ, ಹಾಲು, ಹಣ್ಣು)ಗಳನ್ನು ಕೋಟ್ಟಿಕುಳಂ ಶ್ರೀ ಕೂರುಂಬ ಭಗವತಿ ದೇವಸ್ಥಾನದ ಮೂಲಕ ಅಬ್ದುಲ್ ಅಜೀಜ್ ಅಕ್ಕರ ಅವರ ಪುತ್ರ ಮತ್ತು ಅಕ್ಕರ ಪ್ರತಿಷ್ಠಾನದ ನಿರ್ದೇಶಕ ಹಿನ್ಸನ್ ಅಕ್ಕರ ಉಪಸ್ಥಿತಿಯಲ್ಲಿ ಬೇಕಲ ಪೋಲೀಸ್ ಠಾಣಾಧಿಕಾರಿ ಅಜಿತ್ ಕುಮಾರ್ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಪ್ರತಿಷ್ಠಾನ ವ್ಯವಸ್ಥಾಪಕ ಮೊಹಮ್ಮದ್ ಯಾಸಿರ್, ಪದಾಧಿಕಾರಿಗಳಾದ ಮೊಯಿದ್ದೀನ್ ಪೂವಡ್ಕ, ಮೊಹಮ್ಮದ್ ಕುಂಞÂ ಮತ್ತು ಕಮಲ್ ಅಂಗಕಳರಿ ಮೊದಲಾದವರು ಉಪಸ್ಥಿತರಿದ್ದರು.


