ಕೊಚ್ಚಿ: ತನ್ನ ಬೆತ್ತಲೆ ದೇಹದ ಮೇಲೆ ಮಕ್ಕಳಿಂದ ಚಿತ್ರ ಬರೆಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಸಾಮಾಜಿಕ ಕಾರ್ಯಕರ್ತೆ ರಹನಾ ಫಾತಿಮಾಳಿಗೆ ಬುಧವಾರ ಜಾಮೀನು ನೀಡಲಾಗಿದೆ. ಎರ್ನಾಕುಳಂ ಪೆÇಕ್ಸೊ ನ್ಯಾಯಾಲಯವು ರಹಾನಾಗೆ ಜಾಮೀನು ನೀಡಿತು. ಈ ಪ್ರಕರಣದಲ್ಲಿ ಜಾಮೀನು ಕೋರಿ ರಹನಾ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು.
ರಹನಾ ಫಾತಿಮಾ ತನ್ನ ಅಪ್ರಾಪ್ತ ಮಗನಿಂದ ತನ್ನ ದೇಹದ ಮೇಲೆ ಬೆತ್ತಲೆಯಾಗಿ ಚಿತ್ರ ಬರೆಸಿದ್ದಳು. ಈ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಈ ಪ್ರಕರಣವನ್ನು ಪೆÇೀಕ್ಸೊ ಮತ್ತು ಐಟಿ ಕಾನೂನುಗಳ ಅಡಿಯಲ್ಲಿ ದಾಖಲಿಸಲಾಯಿತು. ಪೆÇೀಕ್ಸೊ ಮತ್ತು ಐಟಿ ಕಾನೂನಿನಡಿಯಲ್ಲಿ ಪೆÇಲೀಸರು ರಹನಾ ವಿರುದ್ಧ ಪ್ರಕರಣ ದಾಖಲಿಸಿದರು. ಬಳಿಕ ಎರ್ನಾಕುಳಂ ದಕ್ಷಿಣ ಪೆÇಲೀಸರ ಮುಂದೆ ಹಾಜರಾದರು. ತಿರುವಲ್ಲಾದ ವಕೀಲರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ರಹಾನಾ ಫಾತಿಮಾ ಅವರನ್ನು ಬಂಧಿಸಲಾಯಿತು.
ತನ್ನ ಪುತ್ರ ಅರ್ಧ ಬೆತ್ತಲೆ ದೇಹದ ಮೇಲೆ ಚಿತ್ರಿಸುವ ದೃಶ್ಯಗಳನ್ನು ರಹನಾ ಫಾತಿಮಾ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ರಹಾನ ಯೂಟ್ಯೂಬ್ ಮತ್ತು ಫೇಸ್‍ಬುಕ್‍ನಲ್ಲಿ 'ದೇಹ ಮತ್ತು ರಾಜಕೀಯ' ಎಂಬ ವೀಡಿಯೊವನ್ನು ಪೆÇೀಸ್ಟ್ ಮಾಡಿದ್ದರು. ಮಹಿಳೆಯರ ದೇಹದ ಬಗ್ಗೆ ಮತ್ತು ಲೈಂಗಿಕತೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳ ವಿರುದ್ಧ ರೆಹನಾ ಫಾತಿಮಾ ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದರು.


