HEALTH TIPS

ಸೆಕ್ರಟರಿಯೇಟ್ ದುರಂತ-ಪೂರ್ವಯೋಜಿತ-ಚೆನ್ನಿತ್ತಲ-ಎನ್ ಐ ಎ ತನಿಖೆಯಾಗಲಿ-ಒತ್ತಾಯ

    

   

      ತಿರುವನಂತಪುರ: ಸಚಿವಾಲಯದಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಎನ್.ಐ.ಎ. ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ನಾಶಪಡಿಸುವ ಸಂಚಾಗಿತ್ತು. ಇದರಹಿಂದೆ ಕೈಜೋಡಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಮತ್ತು ಇದನ್ನು ಪ್ರತಿಭಟಿಸಿ ಇಂದು(ಬುಧವಾರ) ಯುಡಿಎಫ್ ಕರಿ ದಿನವನ್ನು ಆಚರಿಸಲಿದೆ ಎಂದರು.

     ಎನ್.ಐ.ಎ. ತನಿಖೆ ನಡೆಸಿದರೆ ಮಾತ್ರ ಬೆಂಕಿಯ ಕಾರಣ ಬಹಿರಂಗವಾಗುವುದು. ಪ್ರಮುಖ ಸಾಕ್ಷ್ಯಗಳನ್ನು ನಾಶಮಾಡುವ ಪ್ರಜ್ಞಾಪೂರ್ವಕ ಪ್ರಯತ್ನ ನಡೆಯಿತು. ಸೆಕ್ರೆಟರಿಯಟ್‍ನ ಈ ಭಾಗದಲ್ಲಿ ಅತಿ ತುರ್ತು ಫೈಲ್‍ಗಳನ್ನು ಏಕೆ ನಾಶಪಟ್ಟಿತು ಎಂಬ ಬಗ್ಗೆ ಸರ್ಕಾರ ತಿಳಿಸಿದ ಸಮಜಾಯಿಶಿ ಯುಡಿಎಫ್‍ಗೆ ಸ್ವೀಕಾರಾರ್ಹವಲ್ಲ. ಅಧಿಕಾರಿಗಳು ಸರ್ಕಾರ ಸೂಚಿಸಿದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಚೆನ್ನಿತ್ತಲ ಹೇಳಿದರು.

       ಮೂರು ಸೆಷನ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅನೇಕ ರಹಸ್ಯ ಫೈಲ್‍ಗಳನ್ನು ಸುಡಲ್ಪಟ್ಟಿವೆ. ಪ್ರತಿ ಪಕ್ಷದ ಮುಖಂಡರು, ಶಾಸಕರು ಮತ್ತು ಮಾಧ್ಯಮಗಳನ್ನು ಘಟನಾ ಸ್ಥಳದಿಂದ ದೂರವಿಡಲಾಗಿತ್ತು. ಇದು ರಾಜನ ಆಡಳಿತದ ನಿಯಮವೇ ಎಂದು ಚೆನ್ನಿತ್ತಲ ಕೇಳಿದರು. ಕೇರಳ ಆಳಲ್ಪಡುವುದು ಸ್ಟಾಲಿನ್ ನಿಂದಲೇ? ನಲವತ್ತು ಮೀಟರ್‍ವರೆಗಿನ ಫೈಲ್‍ಗಳು ನಾಶಪಡಿಸಲಾಗಿದೆ. ನೌಕರರು ಕಚೇರಿಯಲ್ಲಿ ಇಲ್ಲದಿದ್ದಾಗ ಬೆಂಕಿ ಹೇಗೆ ಹತ್ತಿಕೊಂಡಿತು  ಎಂಬುದು ನಿಗೂಢವಾಗಿದೆ ಎಂದು ಚೆನ್ನಿತ್ತಲ ಹೇಳಿದರು.

      ಫ್ಯಾನ್ ಗಳ ಸ್ವಿಚ್‍ನಿಂದ ಬೆಂಕಿ ಪ್ರಾರಂಭವಾಯಿತು ಎಂಬ ವಿವರಣೆಯನ್ನು ಯಾವುದೇ ಕಾರಣಕ್ಕೂ ನಂಬಲಾಗದು. ಬಹಳ ಗಂಭೀರ ಸಮಸ್ಯೆಗಳಿದ್ದವು. ವಿವಿಐಪಿಗಳು, ವಿದೇಶಿ ಪ್ರಯಾಣದ ಫೈಲ್‍ಗಳು ಮತ್ತು ರಾಜಕೀಯ ಮಹತ್ವದ ಹಲವಾರು ರಹಸ್ಯ ಫೈಲ್‍ಗಳಂತಹ ಗೊತ್ತುಪಡಿಸಿದ ಫೈಲ್‍ಗಳನ್ನು ನಾಶಪಡಿಸಿದ ಪಿಣರಾಯಿ ವಿಜಯನ್ ಅವರ ತಂತ್ರಗಾರಿಕೆ ಹೇಯವಾದುದು ಎಂದು ಚೆನ್ನಿತ್ತಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries