ತಿರುವನಂತಪುರ: ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇಂದ್ರವು ಶಿಖಂಡಿ ಬಂಡವಾಳಶಾಹಿಗಳಿಗೆ ಪುಕ್ಸಟೆ ಬೆಲೆಗೆ ಹಸ್ತಾಂತರಿಸಿದೆ ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ಕೋವಿಡ್ ಮರೆಯಲ್ಲಿ ಬಿಜೆಪಿ ಎಸಗುತ್ತಿರುವ ಮತ್ತೊಂದು ದರೋಡೆ ಎಂದು ಅವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ. "ಅದಾನಿ ಗ್ರೂಪ್ ನಮ್ಮ ತೆರಿಗೆ ಹಣದಿಂದ ನಮ್ಮ 365 ಎಕರೆ ಭೂಮಿಯಲ್ಲಿ ನಿರ್ಮಿಸಿ ಅಭಿವೃದ್ಧಿಪಡಿಸಿದ ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ಗುತ್ತಿಗೆಗೆ ನೀಡಿದೆ. ತಿರುವನಂತಪುರಕ್ಕೆ ಹೆಮ್ಮೆಯಿದ್ದ ವಿಮಾನ ನಿಲ್ದಾಣ ಇದೀಗ ಪರಭಾರೆಯಾಗಿರುವುದರ ನಷ್ಟವು ಭರಿಸಲಾಗದ ನಷ್ಟವಾಗಿದೆ" ಎಂದು ಐಸಾಕ್ ಬರೆದಿರುವರು.
"ಈ ವಿಮಾನ ನಿಲ್ದಾಣವನ್ನು ನಮ್ಮ ಸಾರ್ವಜನಿಕ ಆಸ್ತಿಯಾಗಿಡಲು ಕೇರಳ ಸರ್ಕಾರ ಕೊನೆಯ ಕ್ಷಣದವರೆಗೂ ಹೋರಾಡಿದೆ. ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಯವರು ಅದನ್ನು ನಮಗೆ ಉಳಿಸಿಕೊಡುವುದಾಗಿ ಮುಖ್ಯಮಂತ್ರಿಗೆ ಭರವಸೆ ನೀಡಿದ್ದರು. ಟೆಂಡರ್ ಕರೆದಾಗ ಅದಾನಿ ಗ್ರೂಪ್ ಪ್ರಯಾಣಿಕರಿಗೆ 168 ರೂ. ನಿಗದಿಗೊಳಿಸಿತು. ಅದಕ್ಕಾಗಿಯೇ ಖಾಸಗಿ ಉದ್ಯಮಿಗಳಿಗೆ ಹಸ್ತಾಂತರಿಸಿದ ಮೊದಲ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತಿರುವನಂತಪುರ ಸೇರಿಸಲಾಗಿಲ್ಲ ಎಂದು ಐಸಾಕ್ ಹೇಳಿರುವರು.
"ಈಗ ತಳೆದಿರುವ ನಿರ್ಧಾರ ಅನಿರೀಕ್ಷಿತವಾದುದು. ಒಡಂಬಡಿಕೆ ಅದಾನಿ ಗ್ರೂಪ್ ನೊಂದಿಗೆ ಆಗಿದೆ. ವಯಸ್ಕರಿಗೆ 168 ರೂ.ಗಳ ಗುತ್ತಿಗೆಗೆ ಅದಾನಿ 50 ವರ್ಷಗಳ ಕಾಲ ವಿಮಾನ ನಿಲ್ದಾಣವನ್ನು ವಹಿಸಿಕೊಳ್ಳಲಿದ್ದಾರೆ. ಬಿಜೆಪಿಯ ಮಿತ್ರ ನಮ್ಮ ಭೂಮಿಯಲ್ಲಿ ನಾವು ನಿರ್ಮಿಸಿರುವ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುವವನು. ಕಳೆದ ವರ್ಷ ತಿರುವನಂತಪುರದಲ್ಲಿ 380 ಕೋಟಿ ರೂ. ಬಿಕ್ಕಟ್ಟಿನ ನಡುವೆಯೂ ಕಂಪನಿಯು 170 ಕೋಟಿ ರೂ. ಲಾಭ ಗಳಿಸಿದೆ. ಈ ಕುರಿತು ತೀವ್ರ ಪ್ರತಿಭಟನೆ ನಡೆಸಬೇಕೆಂದು ಅವರು ಒತ್ತಾಯಿಸಿಸಿರುವರು.


