HEALTH TIPS

ಕೋವಿಡ್ ರೋಗಿಗಳ ಕರೆಗಳ ವಿವರ ಪಡೆಯುವುದು ಸಂಪರ್ಕ ಪಟ್ಟಿಗಾಗಿ ಮಾತ್ರ- ಹೈಕೋರ್ಟ್‍ನಲ್ಲಿ ಸರ್ಕಾರ


        ತಿರುವನಂತಪುರ: ಕೋವಿಡ್ ಬಾಧಿತರ ಖಾಸಗೀ ಮಾಹಿತಿಗಳು, ದೂರವಾಣಿ ದಾಖಲೆಗಳು ಸರ್ಕಾರಕ್ಕೆ ಅಗತ್ಯವಿಲ್ಲ ಎಂದು ಹೈಕೋರ್ಟ್‍ನಲ್ಲಿ ಸರ್ಕಾರದ ತಿಳಿಸಿದೆ. ಆದರೆ ಕೋವಿಡ್ ಬಾಧಿತರ ಸಂಪರ್ಕ ಪಟ್ಟಿ ಸಿದ್ದಪಡಿಸಲು ಟವರ್ ಲೊಕೇಶನ್ ಮಾಹಿತಿಗಳನ್ನು ಪಡೆಯುವುದಾಗಿ ಸರ್ಕಾರ ತಿಳಿಸಿದೆ. ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸರ್ಕಾರ ನ್ಯಾಯಾಲಯದಲ್ಲಿ ಸ್ಪಷ್ಟನೆ ನೀಡಿತು. ಸದ್ಯ ಫೆÇೀನ್ ಕರೆ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

     ಬಾಧಿತರ ಸಂಪರ್ಕ ಮೂಲ ಪತ್ತೆಗಾಗಿ ಮಾತ್ರ ಮೊಬೈಲ್ ಟವರ್ ನಿರೀಕ್ಷಿಸುದಾದರೆ ತೊಂದರೆಯಾಗದು, ಆದರೆ ಅದಕ್ಕಿಂತ ಹೆಚ್ಚು ಸರ್ಕಾರ ಬಯಸುತ್ತಿದ್ದರೆ ನ್ಯಾಯಾಲಯದಲ್ಲಿ ಮಾತು ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ಕೋವಿಡ್ ರೋಗಿಗಳ ದೂರವಾಣಿ ಮಾಹಿತಿಯನ್ನು ಸಂಗ್ರಹಿಸಲು ಪೆÇಲೀಸ್ ನಿರ್ಧಾರ ಪ್ರಕಟಿಸಿದ ಬೆನ್ನಿಗೆ  ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅರ್ಜಿಯನ್ನು ಸಲ್ಲಿಸಿದ್ದರು. ಈ ವಿಷಯದಲ್ಲಿ ಏನಾದರೂ ಬದಲಾವಣೆಗಳಿದ್ದರೆ ವಿವರವಾದ ವರದಿಯನ್ನು ಶುಕ್ರವಾರದೊಳಗೆ ಸಲ್ಲಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಈ ಪ್ರಕರಣವನ್ನು ಮತ್ತೆ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries