HEALTH TIPS

ಪುಟ್ಟ ಪಾದಗಳ ದಿಟ್ಟಹೆಜ್ಜೆಗೆ ಇನ್ನು ನಾಲ್ಕರ ಹರೆಯ-ಸಮರಸ ಸುದ್ದಿಯಶಸ್ವಿಯಾಗಿಪೂರೈಸಿದ್ದು ಮೂರನೇ ವರ್ಷ!

   

     ಸಹೃದಯ ಓದುಗ ಮಿತ್ರರೇ, ಸಮರಸ ಸುದ್ದಿ ಯಶಸ್ವಿಯಾಗಿ ಮೂರನೇ ವರ್ಷ ಪೂರೈಸಿ ಇಂದೀಗ ನಾಲ್ಕನೇ ವರ್ಷಕ್ಕೆ ಕಾಲಿರಿಸುತ್ತಿದೆ.

  ಗಡಿನಾಡು ಕಾಸರಗೋಡಿನ ಕನ್ನಡ-ತುಳು ಸಹಿತ ಭಾಷಾ ವೈವಿಧ್ಯತೆಗಳ ಬೃಂದಾವನದಲ್ಲಿ ಸಮರಸ ಸುದ್ದಿ ಕಳೆದ ಮೂರು ವರ್ಷಗಳಲ್ಲಿ ಸಾಗಿಬಂದ ಹಾದಿ ರೋಚಕ!. ಯಾವುದೇ ವ್ಯಾವಹಾರಿಕ ಉದ್ದೇಶಗಳಿಲ್ಲದೆ ಕೇವಲ ಸುದ್ದಿ ವಿತರಣೆ ಉದ್ದೇಶದಿಂದಷ್ಟೇ ಕಾರ್ಯನಿರ್ವಹಿಸಿದ ಈ ನಮ್ಮ ಪ್ರಯತ್ನ ನಿಮಗೆಲ್ಲ ತೃಪ್ತಿ ನೀಡಿದೆಯೆಂದೇ ಭಾವಿಸುತ್ತೇವೆ.

     ಆದರೆ ಇಂದೀಗ ಬದಲಾದ ವರ್ತಮಾನದ ಪ್ರಪಂಚದಲ್ಲಿ ಸಮರಸ ಸುದ್ದಿಯೂ ಬದಲಾಗಬೇಕಾದುದು ಧರ್ಮ. ಈ ಹಿನ್ನೆಲೆಯಲ್ಲಿ ಈಗಾಗಲೇ ಗಮನಿಸಿದಂತೆ ಕಳೆದೊಂದು ತಿಂಗಳಿಂದ ವ್ಯಾವಹಾರಿಕ ಎಂದೆನ್ನಲಾಗದಿದ್ದರೂ ಆ ಪ್ರಯತ್ನವೊಂದಕ್ಕೆ ನಿಮ್ಮೆಲ್ಲರ ಸಹಕಾರದೊಂದಿಗೆ ತೊಡಗಿಸಿಕೊಂಡಿರುವುದು ಹೌದು. ಮುಂದೆ ಓದುಗರಿಗೆ ಮುಜುಗರ, ತೊಂದರೆಗಳಾಗದಂತೆ ಜಾಹೀರಾತುಗಳು ನಿಯಮಿತವಾಗಿ ಪ್ರಕಟಗೊಳ್ಳಲಿದೆ ಎನ್ನುವ ಭರವಸೆ ನೀಡಬಲ್ಲೆವು.

      ಪ್ರಸ್ತುತ ಸಮರಸ ಸುದ್ದಿ ಸಾಕಷ್ಟು ವಿಸ್ತಾರವಾಗಿದ್ದು ಎಲ್ಲಾ ವಿಭಾಗದ ಸುದ್ದಿಗಳನ್ನೂ ನಿಖರವಾಗಿ ಸಕಾಲದಲ್ಲಿ ಪ್ರಕಟಿಸುತ್ತಿರುವುದು ನಿಮ್ಮೆಲ್ಲರ ಬೆಂಬಲದಿಂದ. ಆದರೂ ಅಲ್ಪ ತಪ್ಪುಗಳಿರುವುದಾದರೂ ಸಹಿಸುವಿರೆಂದೂ ಭಾವಿಸಬಹುದಲ್ಲವೇ. ಹೆಚ್ಚಾಗಿ ಅಕ್ಷರ ತಂತ್ರಾಂಶಗಳಲ್ಲಾಗುವ ತಪ್ಪುಗಳನ್ನು ಇನ್ನೂ ಒಂದಷ್ಟು ಕಾಲ ಸಹಿಸಬೇಕೆಂದು ಕೇಳಿಕೊಳ್ಳುತ್ತೇವೆ.

    ಧರ್ಮ, ಮತ, ರಾಜಕೀಯ, ಜಾತಿಗಳಿಗೆ ಅತೀತವಾಗಿ ಸುದ್ದಿ ಪ್ರಕಟಿಸುವ ನಿಮ್ಮ ಈ ಸಮಸರಸ ಸುದ್ದಿ ಮುಂದಿನ ದಿನಗಳಲ್ಲಿ ಹೇಗಿರಬೇಕೆಂಬ ಬಗ್ಗೆ ಓದುಗರಿಂದ ಮುಕ್ತ ಸಲಹೆಗಳನ್ನು ಈ ಸಂದರ್ಭ ಬಯಸುತ್ತೇವೆ. ಸಮರಸ ಸುದ್ದಿಯ ವಾಟ್ಸ್ ಆಫ್ ಗುಂಪುಗಳನ್ನು ಇಂದು ಅಡ್ಮಿನ್ ಓನ್ಲೀ ಮೋಡ್ ನಿಂದ ಮುಕ್ತಗೊಳಿಸಿ ಸಲಹೆಗಳನ್ನು ನಿಮ್ಮಿಂದ ನಾವು ಬಯಸುತ್ತೇವೆ. ಸಹೃದಯರು ಸಲಹೆಗಳನ್ನು ಇಂದು ರಾತ್ರಿ 10ರ ವರೆಗೆ ಗ್ರೂಪ್ ನಲ್ಲಿ ಅಥವಾ ವೈಯುಕ್ತಿವಾಗಿ ನೀಡಬಹುದು. ವಂದನೆಗಳು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries