ನವದೆಹಲಿ: ಸೆಪ್ಟೆಂಬರ್‍ನಿಂದ ದೇಶ ಸಹಜ ಸ್ಥಿತಿಗೆ ಮರಳಲಿದೆ ಎಂದು ಕೇಂದ್ರ ಸೂಚನೆ ನೀಡಿದೆ. ಯಾವುದೇ ಲಾಕ್‍ಡೌನ್‍ಗಳು ಇರುವುದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಕರೋನಾ ಭೀತಿಯಲ್ಲಿ ದೈನಂದಿನ ವ್ಯವಸ್ಥೆಗಳಿಗೆ ನಿಯಂತ್ರಣ ಹೇರಲು ಸಾಧ್ಯವಿಲ್ಲ ಎಂದು ಕೇಂದ್ರವು ಗಮನಸೆಳೆದಿದೆ.
ಅನ್ಲಾಕ್ ಮಾಡುವ ನಾಲ್ಕನೇ ಹಂತದಲ್ಲಿ ಕೇಂದ್ರ ಸರ್ಕಾರ ಮೆಟ್ರೋ ರೈಲು ಸೇವೆಗಳನ್ನು ಪುನರಾರಂಭಿಸುವ ನಿರೀಕ್ಷೆಯಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಲಿದೆ. ಮೆಟ್ರೊ ಸೇವೆಗಳನ್ನು ಪುನರಾರಂಭಿಸಲು ಹಲವಾರು ರಾಜ್ಯಗಳು ಬೇಡಿಕೆ ಮುಂದಿರಿಸಿದೆ. ಈ ಬಗ್ಗೆ ಧನಾತ್ಮಕ ನಿರ್ಣಯ ಕೈಗೊಳ್ಳುವ ಸೂಚನೆಗಳಿವೆ.
ಚಿತ್ರಮಂದಿರಗಳನ್ನು ತೆರೆಯಬೇಕೆ ಎಂಬ ಚರ್ಚೆಯೂ ಸಕ್ರಿಯವಾಗಿದೆ. ಮೆಟ್ರೊ ರೈಲು ಸಂಚಾರಾನುಮತಿಯಲ್ಲಿ ಈಗಾಗಲೇ ನಿಗದಿತ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜನರು ಮೆಟ್ರೊ ರೈಲುಗಳಲ್ಲಿ ಒಂದು ಗಂಟೆಗಿಂತ ಹೆಚ್ಚು ಸಮಯವನ್ನು ಕಳೆಬಾರದೆಂಬ ನಿಯಮ ಸೂಚಿಸುವ ಸಾಧ್ಯತೆಯಿದೆ. ಆದ್ದರಿಂದ ಕಟ್ಟುನಿಟ್ಟಾದ ಮುನ್ನೆಚ್ಚರಿಕೆಗಳೊಂದಿಗೆ ಸೇವೆಗಳನ್ನು ಪುನರಾರಂಭಿಸಲು ಸಾಧ್ಯವಾಗಲಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಅಂತರರಾಜ್ಯ ಪ್ರಯಾಣವನ್ನು ನಿಬರ್ಂಧಿಸಬೇಡಿ ಎಂಬ ಸೂಚನೆ ನೀಡಿದ್ದಾರೆ. ಮಂಗಳವಾರದಿಂದ ಹವಾನಿಯಂತ್ರಿತ ಬಸ್ಸುಗಳು ಸೇರಿದಂತೆ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಬಸ್ ಸೇವೆಗಳನ್ನು ಹಲವು ರಾಜ್ಯಗಳಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಜನಸಾಮಾನ್ಯರ ಸಂಚಾರ ಮತ್ತೆ ಈ ಹಿಂದಿನಂತೆ ಸಾಮಾನ್ಯ ಸ್ಥಿತಿಗೆ ಮರಳಲಿದೆ.
ಈ ಮಧ್ಯೆ ಸಂಪರ್ಕದ ಮೂಲಕ ಕೋವಿಡ್ ಹೆಚ್ಚುತ್ತಿರುವ ವರದಿಗಳಾಗುತ್ತಿದ್ದು ಇವೆಲ್ಲವೂ ಕೋವಿಡ್ ಹರಡುವಿಕೆಯನ್ನು ಹೆಚ್ಚಿಸಬಹುದು ಎಂಬ ಕಳವಳವೂ ಸಕ್ರಿಯವಾಗಿದೆ.
ಶಿಕ್ಷಣ ಸಂಸ್ಥೆಗಳು ಮತ್ತು ಚಿತ್ರಮಂದಿರಗಳು ತೆರೆಯುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಕೇಂದ್ರವು ರಿಯಾಯಿತಿಗಳನ್ನು ಘೋಷಿಸಿದರೂ, ಹೆಚ್ಚಿನ ನಿಬರ್ಂಧಗಳನ್ನು ವಿಧಿಸುವ ಅಧಿಕಾರ ರಾಜ್ಯಗಳಿಗೆ ಇರುತ್ತದೆ.
ಆದರೆ ರಿಯಾಯಿತಿ ಅಗತ್ಯ ಎಂದು ಕೇರಳ ಸೇರಿದಂತೆ ರಾಜ್ಯಗಳ ಅಭಿಪ್ರಾಯ ವ್ಯಕ್ತಪಡಿಸಿದೆ. ಶಾಲೆಗಳು ಮತ್ತು ಕಾಲೇಜುಗಳು ಕೂಡಲೇ ತೆರೆಯಲಾಗುವುದಿಲ್ಲ ಎಂದು ಹೆಚ್ಚಿನ ರಾಜ್ಯಗಳೂ ತಿಳಿಸಿವೆ. ಬಾರ್‍ಗಳನ್ನು ಸಾರ್ವಜನಿಕ ಮುಕ್ತ ಕಾರ್ಯನಿರ್ವಹಿಸಲು ಸಹ ಅನುಮತಿಸಲಾಗುವುದಿಲ್ಲ. ಆದರೆ ಕೌಂಟರ್‍ನಲ್ಲಿ ಮದ್ಯ ಮಾರಾಟ ಮುಂದುವರೆದಿದೆ ಎಂದು ವರದಿಯಾಗಿದೆ.
ರಾಷ್ಟ್ರಕ್ಕೆ ಮಾರಕ ಕೋವಿಡ್ ಹಬ್ಬುತ್ತಿರುವಂತೆ ಮಾರ್ಚ್ 24 ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಲಾಗಿತ್ತು. ಮೂರು ಹಂತಗಳ ಲಾಕ್ ಡೌನ್ ಮತ್ತು ಆ ಬಳಿಕ ಇದೀಗ ಅನ್ ಲಾಕ್ 4ನೇ ಹಂತದಲ್ಲಿ ಲಾಕ್‍ಡೌನ್‍ನಲ್ಲಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ.


