ಮಂಜೇಶ್ವರ: ಕೋವಿಡ್-19 ನಿಯಂತ್ರಣದ ಕಾರಣವೊಡ್ಡಿ ಕಳೆದ 5 ತಿಂಗಳಿನಿಂದ ಕಾನೂನುಬಾಹಿರವಾಗಿ ವರ್ಕಾಡಿ ಪಂಚಾಯತಿನ ವಿವಿದೆಡೆಗಳಲ್ಲಿ ಮುಚ್ಚಲಾಗಿದ್ದ ಗಡಿಗಳನ್ನು ಬಲವಂತವಾಗಿ ತೆರೆದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಆನೆಕಲ್ಲು, ತಲೆಕ್ಕಿ , ಪಾತೂರು, ಸುಳ್ಯಮೆ, ನಂದಾರ್ ಪದವು ಮುಂತಾದೆಡೆಗಳಲ್ಲಿ ಗಡಿತೆರವುಗೊಳಿಸಿ ಪ್ರತಿಭಟನೆ ನಡೆಸಲಾಯಿತು. ಯೂತ್ ಕಾಂಗ್ರೆಸ್ ಮುಖಂಡರಾದ ಶರೀಫ್ ಅರಿಬೈಲು, ಇಮ್ತಿಯಾಝ್, ಇಕ್ಬಾಲ್ ಕಳಿಯೂರು, ಮುಖಂಡರಾದ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಉಮ್ಮರ್ ಬೋರ್ಕಳ, ದಿವಾಕರ್ ಎಸ್.ಜೆ, ಸದಾಶಿವ.ಕೆ, ಹಮೀದ್ ಕಣಿಯೂರು, ಸುಧಾಕರ ಉಜಿರೆ, ಖಾಲಿದ್, ಕರೀಂ.ಕೆ.ಪಿ, ಅಫ್ವಾನ್ ಮುಂತಾದವರು ಉಪಸ್ಥಿತರಿದ್ದರು.


