HEALTH TIPS

ಅಂತರಾಜ್ಯ ಸಂಚಾರ ಅನುಮತಿಗೆ ಆಗ್ರಹಿಸಿ ಬಿಜೆಪಿಯಿಂದ ಕೊಟ್ಯಾಡಿಯಲ್ಲಿ ಪ್ರತಿಭಟನೆ

  

        ಮುಳ್ಳೇರಿಯ: ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಅಂತರ್ ರಾಜ್ಯ ರಸ್ತೆ ತಡೆಯನ್ನು ಹಿಂತೆಗೆಯಬೇಕೆಮದು ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಅವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ದೂರು ನೀಡಿದ್ದರ ಭಾಗವಾಗಿ ನ್ಯಾಯಾಲಯವು ಅಂತರ್ ರಾಜ್ಯ ಸಂಚಾರ ಮುಕ್ತಗೊಳಿಸಲು ಆದೇಶ ನೀಡಿದ್ದರೂ ಜಿಲ್ಲಾಡಳಿತ ಪೊಳ್ಳು ನೆವಗಳಿಂದ ಸಂಚಾರ ನಿಯಂತ್ರಣವನ್ನು ಮತ್ತಷ್ಟು ಬಿಗುಗೊಳಿಸಿದೆ.

     ಜಿಲ್ಲಾಡಳಿತದ ಅಸಾಂವಿಧಾನಿಕ ಕೋವಿಡ್ ನಿಯಂತ್ರಣವನ್ನು ಪ್ರತಿಭಟಿಸಿ ಶುಕ್ರವಾರ ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ಅಂತರ್ ರಾಜ್ಯ ರಸ್ತೆಯಾದ ಚೆರ್ಕಳ-ಜಾಲ್ಸೂರು ರಸ್ತೆಯ ಕೊಟ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

  ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ ಸಿ.ನಾಯ್ಕ್, ಮುಖಂಡರಾದ ಹರೀಶ್ ನಾರಂಪಾಡಿ, ಧನಂಜಯ ಮಧೂರು,ಪಿ.ಆರ್.ಸುನಿಲ್, ಸುಕುಮಾರ್ ಕುದ್ರೆಪ್ಪಾಡಿ, ಎಂ.ಜನನಿ, ವಸಂತ ಶೆಟ್ಟಿ, ಹರೀಶ್ ಗೋಸಾಡ, ರಕ್ಷಿತ್ ಕೆದಿಲಾಯ, ಪ್ರದೀಪ್ ನಾಯ್ಕ್ ಮೊದಲಾದವರು ನೇತೃತ್ವ ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries