HEALTH TIPS

ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ನಿಲೇಶ್ವರ ನಿಗಮದ ಸಾಧನೆಗಳು ಶ್ಲಾಘನೀಯ - ಸಚಿವ ಇ.ಪಿ.ಜಯರಾಜನ್

  

     ಕಾಸರಗೋಡು: ಕಾಸರಗೋಡು ಜಿಲ್ಲೆಯ ಕ್ರೀಡಾ ಅಭಿವೃದ್ಧಿಗೆ ನಿಲೇಶ್ವರ ನಿಗಮದ ಯೋಜನೆಗಳು ಮತ್ತು ಚಟುವಟಿಕೆಗಳು ಶ್ಲಾಘನೀಯ ಮತ್ತು ದೇಶದ ಇತರ ಭಾಗಗಳಲ್ಲಿರುವವರಿಗೆ ಅನುಕರಣೀಯವಾಗಿದೆ ಕೈಗಾರಿಕೆ ಮತ್ತು ಕ್ರೀಡಾ ಸಚಿವ ಇ.ಪಿ.ಜಯರಾಜನ್ ತಿಳಿಸಿದರು. 

     ನೀಲೇಶ್ವರ ನಗರ ಸಭೆಯ ನೇತೃತ್ವದಲ್ಲಿ ಕಡಿಂಞÂ್ಞಮೂಲೆಯಲ್ಲಿ ನಿರ್ಮಿಸಿರುವ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

       ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಉತ್ತರ ಮಲಬಾರ್‍ನ ಮೊದಲ ಒಳಾಂಗಣ  ಕ್ರೀಡಾಂಗಣವನ್ನು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಅತ್ಯುತ್ತಮ ಕ್ರೀಡಾಪಟುಗಳನ್ನು ಪೆÇೀಷಿಸುವ ಉದ್ದೇಶದಿಂದ ನಿಗಮವು ಈ ಕ್ರೀಡಾಂಗಣವನ್ನು ನಿರ್ಮಿಸಿದೆ. ಕ್ರೀಡಾಪಟುಗಳನ್ನು ಕ್ರೀಡಾಪಟುಗಳು ಮತ್ತು ತಜ್ಞರನ್ನು ಒಳಗೊಂಡ ಸಮಿತಿಯು ನಿರ್ವಹಿಸಲಿದೆ.  ಶಟಲ್ ಕಾಕ್, ಬ್ಯಾಡ್ಮಿಂಟನ್ ಆಟದಲ್ಲಿ ಆಸಕ್ತಿ ಹೊಂದಿರುವ ಯುವಕರು ಮತ್ತು ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ತರಬೇತಿ ನೀಡುವ ಯೋಜನೆಯನ್ನು ಪುರಸಭೆಯು ಈ ಮೂಲಕ ಪೋಶಿಸಲಿದೆ. 

      ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಉಪಾಧ್ಯಕ್ಷ ವಿ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ.ಕುಂಞÂ ಕೃಷ್ಣನ್, ಪಿ.ಪಿ. ವೆಂಕಟ್, ಕುಂಞÂ ರಾಮನ್, ಸುರೇಶ್ ಪುತಿಯೆದಾತ್, ಕೈಪುರತ್ ಕೃಷ್ಣನ್ ನಂಬಿಯಾರ್ ಮತ್ತಿತರರು ಮಾತನಾಡಿದರು. ಪುರಸಭೆಯ ಅಧ್ಯಕ್ಷ ಪೆÇ್ರಫೆಸರ್ ಕೆ.ಪಿ.ಜಯರಾಜನ್ ಸ್ವಾಗತಿಸಿ,  ಪುರಸಭೆ ಕಾರ್ಯದರ್ಶಿ ಸಿ.ಕೆ.ಶಿವಾಜಿ ವಂದಿಸಿದರು. ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿದ ಗುತ್ತಿಗೆದಾರ ಕೆ.ಚಂದ್ರನ್ ಅವರನ್ನು ಶಾಸಕ ಎಂ.ರಾಜಾಗೋಪಾಲನ್  ಪಾರಿತೋಷಕಗಳನ್ನು ನೀಡಿ ಗೌರವಿಸಿದರು. ಪುರಸಭೆ ಎಂಜಿನಿಯರ್ ಸಿ ರಾಜೀಶ್ ಕುಮಾರ್ ಅವರು ವರದಿಯನ್ನು ಮಂಡಿಸಿದರು. ಶಾಸಕ ಎಂ.ರಾಜಗೋಪಾಲನ್ ಮತ್ತು ಪಿ.ಪಿ. ಮೊಹಮ್ಮದ್ ರಫಿ, ಪುರಸಭೆಯ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಮತ್ತು  ಶಾಲಾ ಮುಖ್ಯೋಪಾಧ್ಯಾಯ ಕೆ.ವಿ.ಅಶೋಕನ್ ಹೀಗೆ ಎರಡು ತಂಡಗಳಾಗಿ ಸೌಹಾರ್ಧ ಶಟಲ್ ಬಾಡ್ಮಿಂಟನ್ ಕ್ರೀಡಾ ಸ್ಪರ್ಧೆ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries