HEALTH TIPS

ಆಧುನಿಕ ವಿದ್ಯುತ್ ಮತ್ತು ಅನಿಲ ಸ್ಮಶಾನಗಳಿಂದ ಸ್ಥಳಾವಕಾಶ ಮತ್ತು ತ್ಯಾಜ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ- ಸಚಿವ ಎ.ಸಿ.ಮೊಯ್ದೀನ್


         ಕಾಸರಗೋಡು: ಸ್ಥಳಾವಕಾಶ ಮತ್ತು ತ್ಯಾಜ್ಯ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ವಿದ್ಯುತ್ ಮತ್ತು ಅನಿಲ ಸ್ಮಶಾನಗಳನ್ನು ಸ್ಥಾಪಿಸಲಾಗುವುದು ಎಂದು ಸ್ಥಳೀಯ ಆಡಳಿತ ರಾಜ್ಯ ಸಚಿವ ಎ.ಸಿ. ಮೊಯ್ದೀನ್ ಹೇಳಿದರು. 

       ಅವರು ಮೂರು ತ್ರಿಸ್ಥರ ಪಂಚಾಯಿತಿಗಳ ಜಂಟಿ ಉದ್ಯಮ ಯೋಜನೆಯಾದ ಉದಿನೂರ್ ಮಾಡರ್ನ್ ಗ್ಯಾಸ್ ಸ್ಮಶಾನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದರು. 

     ಪಡನ್ನ ಪಂಚಾಯತ್ ಆಡಳಿತ ಸಮಿತಿ ಮತ್ತು ಜನರು ಇಂದಿನ ಕಾಲಮಾನಕ್ಕೆ ಅನುಗುಣವಾಗಿ ಇಂತಹದೊಂದು ವ್ಯವಸ್ಥೆಯ ನಿರ್ಮಾಣವನ್ನು ಸಕಾಲಕ್ಕೆ ಪೂರ್ಣಗೊಳಿಸಿ ನಾಡಿಗೆ ಸಮರ್ಪಿಸಿರುವುದು ಅನುಕರಣೀಯವಾಗಿವೆ ಎಂದು ಅವರು ಹೇಳಿದರು. 

    ಈ ಮೂಲಕ ಜಿಲ್ಲೆಯಲ್ಲಿ ಮೊದಲ ಆಧುನಿಕ ಅನಿಲ ಸ್ಮಶಾನದ ನಿರ್ಮಾಣವು 75 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿದೆ.

       ಶಾಸಕ ರಾಜಗೋಪಾಲನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಎಂಜಿನಿಯರ್ ಕೆ ಅನಿತಾ ವರದಿ ಮಂಡಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್, ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ವಿ.ಪಿ.ಜಾರ್ಜ್ ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಸಿ.ಸುಬೈದಾ, ನೀಲೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯೆ ಕೆ.ಬಿಂದು, ಬ್ಲಾಕ್ ಪಂಚಾಯತ್ ಸದಸ್ಯ ಯು.ಕೆ. ಮುಷ್ತಾಕ್, ಪಡನ್ನ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಿ. ಮುತಾಲಿಬ್, ಕೆ.ವಿ.ಗೋಪಾಲನ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಟಿ.ವಿ.ನಿರ್ಮಲಾ, ವಿವಿಧ ಪಕ್ಷಗಳ ಮುಖಂಡರಾದ ಟಿ.ಕೆ.ಸಿ ಮುಹಮ್ಮದಾಲಿ ಹಾಜಿ, ಶಿವದಾಸನ್ ಮಾಸ್ಟರ್, ಪಿಕೆ ಫೈಸಲ್, ಸಿ ಗೋಪಾಲನ್ ಮತ್ತು ಕೆ ರಮೇಶನ್ ಉಪಸ್ಥಿತರಿದ್ದರು. ಪಡನ್ನ ಪಂಚಾಯತ್ ಅಧ್ಯಕ್ಷ ಪಿ.ಸಿ.ಫೌಜಿಯಾ ಅವರು ಸ್ವಾಗತಿಸಿ,  ವಾರ್ಡ್ ಸದಸ್ಯ ಪಿ ಕುಂಞÂ ಕೃಷ್ಣನ್ ಮಾಸ್ಟರ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries