ಕಾಸರಗೋಡು: ವಿಶ್ವ ಸೊಳ್ಳೆ ನಿವಾರಣೆ ದಿನಾಚರಣೆ: ವೆಬಿನಾರ್ ಮತ್ತು ಪುಸ್ತಕಬಿಡುಗಡೆ ಜರುಗಿತು. ಜಿಲ್ಲಾ ಮೆಡಿಕಲ್ ಆಫೀಸ್ ಮತ್ತು ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ಜಂಟಿ ವತಿಯಿಂದ ಈ ಸಮಾರಂಭ ನಡೆಯಿತು.
ಸೊಳ್ಳೆಗಳಿಂದ ಹರಡುವರೋಗಗಳ ಬಗ್ಗೆ ವೆಬಿನಾರ್ ನಡೆಯಿತು. ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ಸಿದ್ಧಪಡಿಸಿದ ಅಂಟುರೋಗಗಳ ಬಗೆಗಿನ ಕೈಹೊತ್ತಗೆಯನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಬಿಡುಗಡೆಗೊಳಿಸಿದರು. ಬಯಾಲಜಿಸ್ಟ್ ಕೆ.ಪ್ರಕಾಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಸಯನಾ, ತಾಂತ್ರಿಕ ಸಹಾಯಕ ಗೋಪಕುಮಾರ್, ಆರೋಗ್ಯ ಮೇಲ್ವಿಚಾರಕ ಇ.ರಾಧಾಕೃಷ್ಣನ್ ನಾಯರ್, ಆರೋಗ್ಯ ಇನ್ಸ್ ಪೆಕ್ಟರ್ ಜಾನ್ ವರ್ಗೀಸ್, ಹಿರಿಯ ಗುಮಾಸ್ತ ರಘುನಾಥನ್ ಉಪಸ್ಥಿತರಿದ್ದರು.


