ಕಾಸರಗೋಡು: ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ನಿತ್ಯ ಪ್ರಯಾಣ ನಡೆಸುವ ಮಂದಿಗೆ ಪಾಸ್ ಮಂಜೂರಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಇದೇ ವೇಳೆ ಈ ಪಾಸ್ ಮಂಜೂರಾತಿಗೆ ರೆಗ್ಯುಲರ್ ಪಾಸ್ ಮಂಜೂರಾತಿಗೆ ರ್.ಟಿ.ಪಿ.ಸಿ.ಆರ್. ತಪಾಸಣೆ ನಡೆಸಿ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು ಎಂಬ ನಿಬಂಧನೆಯಲ್ಲಿ ಬದಲಾವಣೆ ತರಲಾಗಿದೆ. ಬದಲಾಗಿ ಆಂಟಿಜೆನ್ ಟೆಸ್ಟ್ ನಡೆಸಿದರೆ ಸಾಕು ಎಂದು ನಿರ್ಧರಿಸಲಾಗಿದೆ. ಬಿ.ಪಿ.ಎಲ್. ವಿಭಾಗದ ಮಂದಿಗೆ ಮಾತ್ರ ತಲಪ್ಪಾಡಿಯಲ್ಲಿ ತಪಾಸಣೆ ನಡೆಸಲಾಗುವುದು ಎಂಬ ನಿರ್ಧಾರವನ್ನು ಬದಲಿಸಿ ಎಲ್ಲರಿಗೂ ಈ ಸೌಲಭ್ಯ ಏರ್ಪಡಿಸಲಾಗಿದೆ. ಇದರ ಅಂಗವಾಗಿ ತಲಪ್ಪಾಡಿಯಲ್ಲಿ ಎಲ್ಲ ರೀತಿಯ ಸಜ್ಜೀಕರಣ ಬುಧವಾರ ಆರಂಭಗೊಂಡಿದೆ. ಈ ಸಂಬಂಧ ಏಕೀಕರಣದ ಹೊಣೆಗಾರಿಕೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಮಂಜೇಶ್ವರ ತಹಸೀಲ್ದಾರರಿಗೂ ನೀಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಟೋಕನ್ ಸಂಪ್ರದಾಯದಲ್ಲಿ 100 ಮಂದಿಗೆ ಒಂದಿ ದಿನ ಪಾಸ್ ಮಂಜೂರು ಮಾಡಲಾಗುವುದು. ಈ ರೀತಿ ಲಭಿಸುವ ಪಾಸ್ ಗೆ 21 ದಿನದ ಕಾಲಾವಧಿ ಇರುವುದು. ಪಾಸ್ ಲಭಿಸಿದವರು 21 ದನಕಳೆದು ಮರಳಿ ಆಂಟಿಜೆನ್ ಟೆಸ್ಟ್ ಗೆ ಒಳಗಾಗಿ ಮತ್ತೆ ಪಾಸ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಾಣತ್ತೂರು ಗಡಿ ರಸ್ತೆ ಮೂಲಕ ಜಿಲ್ಲೆಗೆ ಜನ ಆಗಮಿಸುವ ನಿಟ್ಟಿನಲ್ಲಿ ಚೆಕ್ ಪೆÇೀಸ್ಟ್ ಸಹಿತ ಸೌಲಭ್ಯ ಸಜ್ಜುಗೊಳಿಸುವ ನಿಟ್ಟಿನಲ್ಲಿ ಪನತ್ತಡಿ ಪಂಚಾಯತ್ ಮತ್ತು ಕರ್ನಟಕದ ಕರಿಕ್ಕೆ ಪಂಚಾಯತ್ ಪದಾಧಿಕಾರಿಗಳು ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಹೊಣೆಯನ್ನು ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಅವರಿಗೆ ನೀಡಿಲಾಗಿದೆ. ತರಬೇತಿಗೆ ಅಗತ್ಯವಿರುವ ತಾತ್ರಿಕ ಸಹಾಯವನ್ನು ಜಿಲ್ಲಾ ವೈದ್ಯಾಧಿಕಾರಿ ಅವರ ನೇತೃತ್ವದಲ್ಲಿ ಲಭಿಸಲಿದೆ ಎಂದು ಸಭೆ ತಿಳಿಸಿದೆ.
ರಾಜ್ಯ ಹೆದ್ದಾರಿ 55 ಜಾಲ್ಸೂರು ರಸ್ತೆಯಲ್ಲಿ ಇದೇ ಮಾದರಿಯಲ್ಲಿ ಚೆಕ್ ಪೆÇೀಸ್ಟ್ ಸಹಿತ ಸೌಲಭ್ಯ ಸಜ್ಜುಗೊಳಿಸಲು ಸ್ಥಳೀಯ ಗ್ರಾಮಪಂಚಾಯತ್ ಗಳು ತೀರ್ಮಾನ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.
ಅಂತ್ಯೋದಯ ಅನ್ನ ಯೋಜನೆ ವಿಭಾಗಕ್ಕೆ 30 ಸಾವಿರ ಆಹಾರ ಕಿಟ್ ಗಳ ವಿತರಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಮಂದಿಗೆ ಕಿಟ್ ಗಳ ವಿತರಣೆ ನಡೆಯಲಿದೆ ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿದರು.
ಮೀನು ಮಾರುಕಟ್ಟೆಯ ಮೀನು ಮಾರಾಟ ಪ್ರಕ್ರಿಯೆಗೆ ಬದಲು ಸ್ಥಳೀಯಾಡಳಿತೆ ಸಂಸ್ಥೆಗಳು ಮಂಜೂರು ಮಾಡುವ ಜಾಗದಲ್ಲಿ ಮೀನು ಮಾರಾಟಕ್ಕೆ ಅನುಮತಿ ನೀಡಲಾಗುವುದು ಎಂದು ಸಭೆ ತಿಳಿಸಿದೆ.


