HEALTH TIPS

ಸುಭಿಕ್ಷ ಕೇರಳ ಯೋಜನೆ; ಕಾರಡ್ಕ ಬ್ಲಾಕ್ ಮಾದರಿ

    

            ಕಾಸರಗೋಡು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸುಭಿಕ್ಷ ಕೇರಳ ಯೋಜನೆಯಡಿ ಅನುಷ್ಠಾನ ಪ್ರಕ್ರಿಯೆಯಲ್ಲಿ ಕಾರಡ್ಕ ಬ್ಲಾಕ್ ಪಂಚಾಯತ್ ಉತ್ತಮ ಯಶಸ್ಸನ್ನು ಗಳಿಸಿದೆ. ಕಾರಡ್ಕ ಬ್ಲಾಕ್ ಪಂಚಾಯತ್ ನೇತೃತ್ವದಲ್ಲಿ ಭತ್ತದ ಕೃಷಿ, ಮರಗೆಣಸು, ತರಕಾರಿ, ಮೀನು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡು ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಬ್ಲಾಕ್ ವ್ಯಾಪ್ತಿಯ ವಿವಿಧ ಪಂಚಾಯಿತಿಗಳು ಉತ್ತಮ ಸಾರ್ವಜನಿಕ ಬೆಂಬಲದೊಂದಿಗೆ ಕೃಷಿಯನ್ನು ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ.

           ಸುಭೀಕ್ಷ ಕೇರಳ ಯೋಜನೆಯಡಿ, ಆಗಸ್ಟ್ 12 ರವರೆಗೆ ಕಾರಡ್ಕ ಬ್ಲಾಕ್ ನಲ್ಲಿ ಸಾಗುವಳಿಗಾಗಿ 280.659 ಎಕರೆ ಪಾಳುಭೂಮಿ ಭೂಮಿಯನ್ನು ಗುರುತಿಸಲಾಗಿದೆ. ಬೆಳ್ಳೂರು ಪಂಚಾಯತ್ 10.25 ಎಕರೆ, ಕುಂಬ್ಡಾಜೆ ಪಂಚಾಯತ್ 20.52 ಎಕರೆ, ಕಾರಡ್ಕ ಪಂಚಾಯತ್ 29.639 ಎಕರೆ, ಕುತ್ತಿಕೋಲ್ ಪಂಚಾಯತ್ 66.43 ಎಕರೆ, ಮುಳಿಯಾರ್ ಪಂಚಾಯತ್ 14.75 ಎಕರೆ, ದೇಲಂಪಾಡಿ ಪಂಚಾಯತ್ 10.98 ಎಕರೆ ಮತ್ತು ಬೇಡಡ್ಕ ಪಂಚಾಯತ್ 128.09 ಎಕರೆ ಪಾಳು ಭೂಮಿಯನ್ನು ಕೃಷಿಯೋಗ್ಯಗೊಳಿಸಲು ಗುರುತಿಸಲಾಗಿದೆ.

         ಕಾರಡ್ಕ ಬ್ಲಾಕ್ ನಲ್ಲಿ 54 ಹೆಕ್ಟೇರ್‍ನಲ್ಲಿ ಭತ್ತ, 71 ಹೆಕ್ಟೇರ್‍ನಲ್ಲಿ ಆಲೂಗಡ್ಡೆ, 17 ಹೆಕ್ಟೇರ್ ನಲ್ಲಿ ತರಕಾರಿಗಳು ಮತ್ತು 4 ಹೆಕ್ಟೇರ್‍ನಲ್ಲಿ ಬಾಳೆ ಕೃಷಿ ಆರಂಭಿಸಲಾಗಿದೆ. 

ಈ ಯೋಜನೆಗಾಗಿ ಬೇಡಡ್ಕ ಪಂಚಾಯತ್ 316 ಎಕರೆ ಭೂಮಿಯನ್ನು ಗುರುತಿಸಿದೆ. ಸಮೀಕ್ಷೆಯನ್ನು ಪೂರ್ಣಗೊಳಿಸಿದ ಮತ್ತು ಸುಭಿಕ್ಷ ಕೇರಳ ಆಪ್ ಬಳಸಿ ಹೆಚ್ಚು ಕೃಷಿ ಮಾಡಬಹುದಾದ ಪ್ರದೇಶವನ್ನು ಕಂಡುಕೊಂಡ ಪಂಚಾಯತಿಗಳ ಪೈಕಿ ಜಿಲ್ಲೆಯಲ್ಲೇ ಬೇಡಡ್ಕ ಪಂಚಾಯತಿ ಮೊದಲನೆಯದು. ಒಂದು ವಾರದೊಳಗೆ 316 ಎಕರೆ ಕೃಷಿಯೋಗ್ಯ ಭೂಮಿಯನ್ನು ಪಂಚಾಯತ್ ಗುರುತಿಸಿತ್ತು. ಇದಕ್ಕಾಗಿ ಜಿಲ್ಲಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಬೇಡಗ ಅಗ್ರಿ ಯೂತ್ ಎಂಬ ಗುಂಪನ್ನು ರಚಿಸಲಾಯಿತು. ಈ ಗುಂಪು 80 ಕಾಲೇಜು ವಿದ್ಯಾರ್ಥಿಗಳಿಂದ ಕೂಡಿದ್ದು, ಬಾಲಕ ಮತ್ತು ಬಾಲಕಿಯರು, ಕುಟುಂಬಶ್ರೀ- ನೆರೆಕರೆ ಗುಂಪುಗಳು ಮತ್ತು ಇತರ ಗುಂಪುಗಳ ಸಹಕಾರದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ಗುರುತಿಸಲಾದ ಭೂಮಿಯನ್ನು ಕೃಷಿ ಮಾಡಲು ನಿಯೋಜಿಸಲಾಯಿತು. ಬಳಿಕ ಯುವ ಕೃಷಿ ಸದಸ್ಯರು ಪಂಚಾಯತ್ ಮಟ್ಟದಲ್ಲಿ ಕೃಷಿಯ ವಿಸ್ತರಣೆಗೆ ಕೈಜೋಡಿಸಿದರು. ತರಕಾರಿಗಳು ಕೊಯ್ಲಿಗಾಗಿ ಇದೀಗ ಬಲಿತುಕೊಂಡಿದೆ. 

       ದೇಲಂಪಾಡಿ ಪಂಚಾಯತ್‍ನಲ್ಲಿ ಭತ್ತದ ಕೃಷಿಗಾಗಿ 15 ಹೆಕ್ಟೇರ್ ಪಾಳುಭೂಮಿ ಭೂಮಿಯನ್ನು ಗುರುತಿಸಿ ಕೃಷಿ ಪ್ರಾರಂಭಿಸಲಾಯಿತು. ಜೊತೆಗೆ 12 ಹೆಕ್ಟೇರ್ ಪ್ರದೇಶದಲ್ಲಿ ಮರಗೆಣಸು ಕೃಷಿಯನ್ನು ಪ್ರಾರಂಭಿಸಲಾಯಿತು. ಪಂಚಾಯಿತಿಯಲ್ಲಿರುವ ಐವತ್ತು ಪ್ರತಿಶತದಷ್ಟು ಕುಟುಂಬಗಳು ದೀರ್ಘಕಾಲದವರೆಗೆ ಮನೆ ಬಳಕೆಗಾಗಿ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಸುಭೀಕ್ಷ ಕೇರಳ ಯೋಜನೆಯಡಿ ತರಕಾರಿ ಕೃಷಿ ಕೂಡ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕುಟುಂಬಶ್ರೀ ಓಣಂಗೆ ಸಂಬಂಧಿಸಿದಂತೆ ತರಕಾರಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

       ಬೆಳ್ಳೂರು ಪಂಚಾಯತ್‍ನಲ್ಲಿ ಎರಡು ಹೆಕ್ಟೇರ್ ಪಾಳು ಭೂಮಿಯನ್ನು ಗುರುತಿಸಿ ಸಾಗುವಳಿ ಮಾಡಲಾಗಿದೆ. ಐದು ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಸಲಾಯಿತು. ಮೀನು ಸಾಕಾಣಿಕೆ ಮತ್ತು ಜಾನುವಾರು ಸಾಕಣೆಯ ಯೋಜನೆಗಳಿವೆ. ಜನರ ಸಹಭಾಗಿತ್ವ ಪ್ರೇರಣದಾಯಿಯಾಗಿದೆ. ಮುಳಿಯಾರ್ ಪಂಚಾಯತ್‍ನಲ್ಲಿ, ಸುಭೀಕ್ಷ ಕೇರಳ ಯೋಜನೆಯ ಭಾಗವಾಗಿ ತರಕಾರಿ ಮತ್ತು ಭತ್ತದ ಕೃಷಿ ಉತ್ತಮವಾಗಿ ನಡೆಯುತ್ತಿದೆ. ಕುತ್ತಿಕೋಲ್ ಪಂಚಾಯತ್‍ನಲ್ಲಿ, ಪಾಳು ಕೃಷಿ ಭೂಮಿಯನ್ನು ಹದಗೊಳಿಸಿ ಭತ್ತದ ಕೃಷಿ ಮತ್ತು ತರಕಾರಿ,  ಆಲೂಗೆಡ್ಡೆ ಕೃಷಿಯನ್ನು ಜನರ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಕುಂಬ್ಡಾಜೆ ಮತ್ತು ಕಾರಡ್ಕ ಪಂಚಾಯಿತಿಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರ ಸಹಭಾಗಿತ್ವ ಗರಿಷ್ಠ ಮಟ್ಟದಲ್ಲಿರುವುದು ಸಾಫಲ್ಯತೆಗೆ ಕಾರಣವಾಗುತ್ತಿದೆ. 

        ಕುಟುಂಬಶ್ರೀ ಘಟಕಗಳ ಗ್ರಾಮೀಣ ಮಾರುಕಟ್ಟೆಗಳು ಈಗಾಗಲೇ ಹೆಚ್ಚಿನ ಪಂಚಾಯಿತಿಗಳಲ್ಲಿ ಪ್ರಾರಂಭವಾಗಿವೆ. ಸುಭೀಕ್ಷ ಕೇರಳ ಯೋಜನೆಯ ಮೂಲಕ ನೆಟ್ಟ ಮತ್ತು ನಿರ್ವಹಿಸುವ ಬೆಳೆಗಳು ಸಹ ಮಾರುಕಟ್ಟೆಗೆ ತಲುಪುತ್ತಿವೆ. ಕೃಷಿ ಇಲಾಖೆಯ ನೇತೃತ್ವದಲ್ಲಿ ಸ್ಥಳೀಯ ತರಕಾರಿಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂದು ವಿವಿಧ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯಿತಿಗಳ ಕಾರ್ಯದರ್ಶಿಗಳು ಮಾಹಿತಿ ನೀಡಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries