ಕಾಸರಗೋಡು:
ಕೇಂದ್ರ ಸರಕಾರ ಅಂತಾರಾಜ್ಯ ಪ್ರಯಾಣಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಸಾರಿ ಹೇಳಿದ್ದರೂ ಕೇರಳ ರಾಜ್ಯ ಸರಕಾರ ಕರ್ನಾಟಕಕ್ಕೆ ಹೋಗಲು ಹೇರಿರುವ ನಿಬಂಧನೆಗಳನ್ನು ರದ್ದು ಮಾಡಲು ತಯಾರಾಗದ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯ ಉಸ್ತುವಾರಿ ಸಚಿವ ಶ್ರೀ ಇ. ಚಂದ್ರಶೇಖರನ್, ಲೋಕಸಭಾ ಸದಸ್ಯ ಶ್ರೀ ರಾಜಮೋಹನ್ ಉನ್ನಿತನ್ ಹಾಗೂ ಶಾಸಕರು ಈ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು. ರಾಜ್ಯವನ್ನು ಆಳುತ್ತಿರುವ ಎಡರಂಗ ಹಾಗೂ ಪ್ರತಿಪಕ್ಷದಲ್ಲಿರುವ ಐಕ್ಯರಂಗ ಮೌನವಾಗಿದೆ. ಜಿಲ್ಲೆಯ ಜನರ ಸಂಕಷ್ಟಗಳನ್ನ ಅರ್ಥ ಮಾಡದೆ ಜನರ ಹಕ್ಕುಗಳನ್ನು ಹತ್ತಿಕ್ಕುವ ಪಿಣರಯಿ ಸರಕಾರದ ಧೋರಣೆ ಖಂಡನೀಯ..
ಕೇರಳ ಸರಕಾರದ ಜನ ವಿರೋಧಿ ನಿಲುವು ಕಾಸರಗೋಡಿನ ಜಿಲ್ಲೆಯ ಜನರು ಕಣ್ಣೀರು ಸುರಿಸುವಂತೆ ಮಾಡಿದೆ. ಕೇಂದ್ರ ಸರ್ಕಾರದ ಆದೇಶ ಉಲ್ಲಂಘನೆ ಪ್ರಜಾಪ್ರಭುತ್ವ ವಿರುದ್ಧ. ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದವರು ಹೇಳಿದರು. ಜಿಲ್ಲೆಯ ಜನರ ಕ್ಷಮೆಯನ್ನು ಪರೀಕ್ಷಿಸಬೇಡಿ ಎಂದು ಸರಕಾರಕ್ಕೆ ಬಿಜೆಪಿ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯ ಸರಕಾರ ಮುಕ್ತ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡದಿದ್ದರೆ ಪಾಸ್ ಇಲ್ಲದೆ ಅಂತರ್ರಾಜ್ಯ ಪ್ರಯಾಣ ಮಾಡುವ ಆಂದೋಳನ ನಡೆಸಲು ಬಿಜೆಪಿ ಜಿಲ್ಲಾ ನೇತಾರರ ಸಭೆ ತೀರ್ಮಾನಿಸಿದೆ.

